*ಗೋಣಿಕೊಪ್ಪ, ಫೆ. ೮: ಸ್ವಯಂ ಪ್ರೇರಣಾ ಬಳಗದಿಂದ ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ರಕ್ತದಾನ ಶಿಬಿರ ತಾ. ೯ ರಂದು (ಇಂದು) ನಡೆಯಲಿದೆ. ಸ್ವಯಂ ನೇತ್ರದಾನ ಹಾಗೂ ದೇಹದಾನ ಮಾಡಲು ಇಚ್ಚಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಬಳಗದ ಅಧ್ಯಕ್ಷೆ ಕಾವ್ಯಾಸಂಜು ತಿಳಿಸಿದ್ದಾರೆ.
ದೇಹ ಹಾಗೂ ನೇತ್ರದಾನ ಮಾಡುವ ಆಸಕ್ತರು ಆಧಾರ್ ಕಾರ್ಡ್ ಹಾಗೂ ಎರಡು ಭಾವಚಿತ್ರಗಳೊಂದಿಗೆ ಬಂದು ಸ್ವಯಂ ನೇತ್ರದಾನ, ದೇಹದಾನದಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಶಿಬಿರ ಏರ್ಪಡಿಸಲಾಗಿದ್ದು, ಮಡಿಕೇರಿ ಮೆಡಿಕಲ್ ಕಾಲೇಜು ತಂಡ ಪಾಲ್ಗೊಳ್ಳಲಿದೆ. ಮತ್ತೊಂದು ಜೀವ ಉಳಿಸಲು ನಮ್ಮ ಅಂಗದಾನ ಅವಶ್ಯವಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜಿಲ್ಲಾಸ್ಪತ್ರೆಯ ಮುಖ್ಯಸ್ಥರು ನೀಡಲಿರುವದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಉಪಾಧ್ಯಕ್ಷ ಚೆರಿಯಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಪಾರುವಂಗಡ ರಿಸ್ತಾ ಚಂಗಪ್ಪ, ಯೋಜನಾ ನಿರ್ದೇಶಕ ಮಂಡAಗಡ ಪುನಿತಾದಿನ್ಸು, ಕೊಕ್ಕೆಂಗಡ ರಾಣಿ ಸುಬ್ರಮಣಿ, ಆರ್. ಉಮೇಶ್ ಇದ್ದರು.