ಸುಂಟಿಕೊಪ್ಪ, ಫೆ. ೮: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಒಳಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಜನರ ಮೂಲಭೂತ ಸೌಲಭ್ಯಗಳಿಗೆ ಸಾಕಷ್ಟು ಹಣ ವಿನಿಯೋಗಿಸುತ್ತಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು ಗ್ರಾಮಸ್ಥರು ಪರಿಶೀಲಿಸಬೇಕು. ಮಾದಾಪುರ ಮಾರುಕಟ್ಟೆ ರಸ್ತೆ, ಜಂಬೂರು, ಮೂವತೋಕ್ಲು ರಸ್ತೆ, ಕಾಂಡನಕೊಲ್ಲಿ ರಸ್ತೆ, ಜಂಬೂರು ಕುಡಿಯುವ ನೀರು, ಕೇಂದ್ರ ಜಲ ಜೀವನ್ ಯೋಜನೆ, ಎನ್‌ಡಿಆರ್‌ಎಫ್ ಯೋಜನೆ, ಜಿ.ಪಂ. ಲೋಕೋಪಯೋಗಿ ಇಲಾಖೆಯಡಿ ೩ ಕೋಟಿ ೪೭ ಲಕ್ಷದ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೀಲಾ, ಉಪಾಧ್ಯಕ್ಷ ಗೋಪಿ, ಗ್ರಾ.ಪಂ. ಸದಸ್ಯರಗಳಾದ ಕೆ.ಎ. ಲತೀಫ್, ಪಿ.ಡಿ. ಅಂತೋಣಿ, ಸುರೇಶ, ಮನುಬಿದ್ದಪ್ಪ, ಜ್ಯೋತಿ, ಗಿರೀಶ, ಸೋಮಣ್ಣ, ನಿರೂಪ, ಮಾನಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೋಪಯೋಗಿ ಇಲಾಖೆಯಡಿ ೩ ಕೋಟಿ ೪೭ ಲಕ್ಷದ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೀಲಾ, ಉಪಾಧ್ಯಕ್ಷ ಗೋಪಿ, ಗ್ರಾ.ಪಂ. ಸದಸ್ಯರಗಳಾದ ಕೆ.ಎ. ಲತೀಫ್, ಪಿ.ಡಿ. ಅಂತೋಣಿ, ಸುರೇಶ, ಮನುಬಿದ್ದಪ್ಪ, ಜ್ಯೋತಿ, ಗಿರೀಶ, ಸೋಮಣ್ಣ, ನಿರೂಪ, ಮಾನಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಜಿ.ಪಂ. ಮಾಜಿ ಸದಸ್ಯ ಟಿ.ಸಿ. ಸಂದೇಶ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಪಂಡ ಉಮೇಶ, ಬಿಜೆಪಿ ಮುಖಂಡ ಕೊಪ್ಪತ್ತಂಡ ಗಣೇಶ, ಸುಭಾಷ್, ಜಿ.ಪಂ. ಅಭಿಯಂತರರಾದ ವೀರೇಂದ್ರ, ಪಿಬ್ಲುö್ಯಡಿ ಇಂಜಿನಿಯರ್ ಶ್ರೀನಿವಾಸ್ ಉಪಸ್ಥಿತರಿದ್ದರು.