ಮಡಿಕೇರಿ, ಫೆ. ೮: ಚೆಟ್ಟಳ್ಳಿ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿಯಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆಯಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕಾದ ಅನಿವಾರ್ಯತೆ ಬಂದೊದಗಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು, ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಬಿಜೆಪಿ ಅಧಿಕಾರವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲ ೧೦೪ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ ನಡೆಯುವ ಸಂದರ್ಭ ಪೊಲೀಸ್ ತುಕಡಿ ನಿಯೋಜನೆ ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಚುನಾವಣೆ ಸಂದರ್ಭ ಕೂಡ ಹಣ ನೀಡಿ, ಬೆದರಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಗಡೀಪಾರಿಗೆ ಆಗ್ರಹ
ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ಗ್ರಾಮ ಸಭೆಯಲ್ಲಿ ಪರಿಶಿಷ್ಟ ಜನಾಂಗದ ಅಧ್ಯಕ್ಷರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೆ, ಜಿ.ಪಂ. ಮಾಜಿ ಸದಸ್ಯೆ ಕೈಯಿಂದ ಮೈಕ್ ಕಿತ್ತುಕೊಂಡು ಸಭೆ ನಡೆಸಲು ಬಿಡದೆ ಗೊಂದಲ ಉಂಟು ಮಾಡಿದ ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಗೊಂದಲ ಉಂಟು ಮಾಡಿದ ಮಣಿ ಉತ್ತಪ್ಪ ಅವರ ವಿರುದ್ಧ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಪ್ರತಿಭಟಿಸಿ ದಾಗ ಮೈಕ್ ಕಿತ್ತುಕೊಂಡು ಸರಕಾರದ ವಿರುದ್ಧವಾಗಿ, ಸಂವಿಧಾನಕ್ಕೆ ಅವಹೇಳನ ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಸುಸಂಸ್ಕೃತ ಸಂಸ್ಕೃತಿ ಎಂದು ಹೇಳಿಕೊಳ್ಳುವ ಬಿಜೆಪಿಯ ಸಂಸ್ಕೃತಿ ಇದೇನಾ ಎಂದು ಅರಿವಾಗುತ್ತದೆ. ಇದಕ್ಕೆ ಕಾರಣರಾದ ಮಣಿ ಉತ್ತಪ್ಪ ಅವರನ್ನು ಗಡೀಪಾರು ಮಾಡಬೇಕೆಂದು ಒತ್ತಾಯಿಸಿದರು.
ಶೀಘ್ರದಲ್ಲಿ ಪ್ರತಿಭಟನೆ
ಮಡಿಕೇರಿ ನಗರ ಸಭಾ ವ್ಯಾಪ್ತಿಯಲ್ಲಿಯೂ ಬೀದಿ ಬದಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗಲಾಗಿದೆ. ಇದು ಕೆಟ್ಟ ವರ್ತನೆಯಾಗಿದೆ. ಬಿಜೆಪಿಗೆ ಅಧಿಕಾರದ ಅಮಲೇರಿದ್ದು, ಇದು ಒಳ್ಳೆಯ ಸಂಸ್ಕಾರವಲ್ಲ. ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಂಸದರು ಸೇರಿದಂತೆ ಅನುಭವೀ ಶಾಸಕರುಗಳಿದ್ದು, ನಗರ ಸಭಾ ಸದಸ್ಯರುಗಳಾದಿಯಾಗಿ ಸದಸ್ಯರುಗಳಿಗೆ ನೀತಿ ಪಾಠ ಹೇಳಿಕೊಡಬೇಕಿದೆ. ಈ ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿರುವದನ್ನು ವಿರೋಧಿಸಿ ಶೀಘ್ರದಲ್ಲೇ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು.
ಕೂಡಲೇ ಬಂದಿಸಬೇಕು
ಕಾAಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ; ಕಳೆದ ೨೫ ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕ್ಷೆÆÃಭೆ, ಅರಾಜಕತೆ ಮೆರೆಯುತ್ತಿದೆ. ಬಿಜೆಪಿ ನಾಯಕರು ತಮ್ಮ ಹಿಂಬಾಲಕರಿಗೆ, ಬೆಂಬಲಿಗರಿಗೆ ಇಂತಹ ವಿಚಾರಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಮಣಿ ಉತ್ತಪ್ಪ ಅವರ ಆಟಾಟೋಪಗಳ ನಿಯಂತ್ರಣ ಮಾಡಲು ಆಗುತ್ತಿಲ್ಲ. ಶಾಸಕರು ಗೆಲುವು ಸಾಧಿಸುವಾಗಲೆಲ್ಲ ಮಣಿ ಉತ್ತಪ್ಪ ಉರುಳು ಸೇವೆ ಮಾಡುತ್ತಾರೆ. ಹಾಗಾಗಿ ಅವರನ್ನು ಮುದ್ದು ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು. ದೌರ್ಜನ್ಯವೆಸಗುವ ರೀತಿಯಲ್ಲಿ ಓರ್ವ ಮಹಿಳೆ ಎಂದು ಕೂಡ ನೋಡದೆ ಮೈಕ್ ಕಿತ್ತುಕೊಂಡಿದ್ದಾರೆ. ಈ ಸಂದರ್ಭ ಅವರ ವೇಲ್ ಕೂಡ ಕಿತ್ತು ಬಂದಿದೆ. ಇದನ್ನು ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ; ಬಿಜೆಪಿ ಇದನ್ನು ಖಂಡಿಸದೆ ಸಮರ್ಥಿಸಿಕೊಳ್ಳುವಂತಿದೆ. ಈ ಬಗ್ಗೆ ಮೊಕದ್ದಮೆ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಅವರ ಆಟಾಟೋಪಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ಮಾಡಲಾಗುವದೆಂದು ಹೇಳಿದರು.
ಮಿತಿ ಇರಬೇಕು
ಮಣಿ ಉತ್ತಪ್ಪ ಒಂದು ರಾಷ್ಟಿçÃಯ ಪಕ್ಷದವರಾಗಿ ಜಿ.ಪಂ., ತಾಪಂ., ಗ್ರಾ.ಪಂ., ವಿಎಸ್ಎಸ್ಎನ್ ಹೀಗೇ ವಿವಿಧ ಅಧಿಕಾರದಲ್ಲಿ ಅನುಭವ ಹೊಂದಿದವರು, ಅವರ ಈ ರೀತಿಯ ವರ್ತನೆ ನಾಚಿಕೆಯೆನಿಸುತ್ತದೆ. ತಂದೆಯಾದವರು ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಬೇಕು, ಆದರೆ ಅವರು ತಮ್ಮ ಮಗನಿಗೆ ಈ ರೀತಿಯ ರಾಜಕೀಯ ತೋರಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ರಾಜಕೀಯ ಮಾಡಬೇಕು, ಅದರಲ್ಲೂ ಮಿತಿ ಇರಬೇಕು ಎಂದು ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಕುಶಾಲನಗರ ಬ್ಲಾಕ್ನ ಖಾದರ್ ಉಪಸ್ಥಿತರಿದ್ದರು.ವಿವಿಧ ಅಧಿಕಾರದಲ್ಲಿ ಅನುಭವ ಹೊಂದಿದವರು, ಅವರ ಈ ರೀತಿಯ ವರ್ತನೆ ನಾಚಿಕೆಯೆನಿಸುತ್ತದೆ. ತಂದೆಯಾದವರು ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಬೇಕು, ಆದರೆ ಅವರು ತಮ್ಮ ಮಗನಿಗೆ ಈ ರೀತಿಯ ರಾಜಕೀಯ ತೋರಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ರಾಜಕೀಯ ಮಾಡಬೇಕು, ಅದರಲ್ಲೂ ಮಿತಿ ಇರಬೇಕು ಎಂದು ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಕುಶಾಲನಗರ ಬ್ಲಾಕ್ನ ಖಾದರ್ ಉಪಸ್ಥಿತರಿದ್ದರು.