ಗೋಣಿಕೊಪ್ಪಲು, ಫೆ. ೮: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ ೨೧ ವಲಯಗಳಲ್ಲಿ ಪಕ್ಷದ ಕಚೇರಿ ಆರಂಭಿಸಲಾಗುವುದು, ಆ ಮೂಲಕ ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ನಿರ್ವಹಿಸಲಾಗುವುದೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ತಿಳಿಸಿದರು.
ಪೊನ್ನಂಪೇಟೆಯಲ್ಲಿ ಪಕ್ಷದ ವತಿಯಿಂದ ಆರಂಭಿಸಲಾದ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೋಣಿಕೊಪ್ಪಲು, ಫೆ. ೮: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ ೨೧ ವಲಯಗಳಲ್ಲಿ ಪಕ್ಷದ ಕಚೇರಿ ಆರಂಭಿಸಲಾಗುವುದು, ಆ ಮೂಲಕ ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ನಿರ್ವಹಿಸಲಾಗುವುದೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ತಿಳಿಸಿದರು.
ಪೊನ್ನಂಪೇಟೆಯಲ್ಲಿ ಪಕ್ಷದ ವತಿಯಿಂದ ಆರಂಭಿಸಲಾದ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾಗಿ ಅರುಣ್ ಮಾಚಯ್ಯ, ಮೂಕಳೇರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ಎರ್ಮು ಹಾಜಿ ಇನ್ನಿತರರು ಮಾತನಾಡಿ ದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಕೋಳೇರ ಭಾರತಿ, ಸೇವಾದಳದ ರಾಜ್ಯ ಪ್ರ.ಕಾರ್ಯದರ್ಶಿ ತೆರೆಸ ವಿಕ್ಟರ್, ಹಿರಿಯರಾದ ಚೆಕ್ಕೆರ ವಾಸು ಕುಟ್ಟಪ್ಪ, ಮುಕ್ಕಾಟೀರ ಶಿವು ಮಾದಪ್ಪ, ಪಿ.ಆರ್. ಪಂಕಜ, ರಾಮಕೃಷ್ಣ, ಆಲೀರ ರಶೀದ್, ಮತ್ರಂಡ ದಿಲ್ಲು ಮತ್ತಿತರರು ಉಪಸ್ಥಿತರಿದ್ದರು.
ಒಬಿಸಿ ಘಟಕದ ಅಧ್ಯಕ್ಷ ಶಾಜಿ ಅಚ್ಚುತ್ತನ್ ಸ್ವಾಗತಿಸಿದರು, ಎಸ್.ಟಿ. ಗಿರೀಶ್ ಪ್ರಾರ್ಥಿಸಿ, ವಂದಿಸಿದರು.
- ಹೆಚ್.ಕೆ. ಜಗದೀಶ್