ಭಾಗಮಂಡಲ, ಫೆ. ೮: ಉಪವಿಭಾಗ ವಿಭಾಗಾಧಿಕಾರಿಗಳ ನಿರ್ದೇಶನದಂತೆ ಮಡಿಕೇರಿ ತಾಲೂಕಿನ ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ಭಾಗಮಂಡಲದಲ್ಲಿ ಪಿಂಚಣಿ ಅದಾಲತ್ ಕಾರ್ಯಾಗಾರ ನಡೆಯಿತು. ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪಿಂಚಣಿ ಆದೇಶ ಪ್ರತಿಯನ್ನ ಭಾಗಮಂಡಲದಿAದ ಅರ್ಹ ಫಲಾನುಭವಿಗಳಿಗೆ ನೀಡಲಾಯಿತು.
ಈ ಸಂದರ್ಭ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಲಾಯಿತು ಸಾಮಾಜಿಕ ಭದ್ರತಾ ಪಿಂಚಣಿ ಬಗ್ಗೆ ಮಾಹಿತಿಯನ್ನು ಈ ಸಂದರ್ಭ ನೀಡಲಾಯಿತು. ಈ ಸಂದರ್ಭ ಸಭೆಯಲ್ಲಿ ತಹಶೀಲ್ದಾರ್ ಮಹೇಶ್, ಉಪ ತಹಶೀಲ್ದಾರ್ ದೊರೆ, ಕಂದಾಯ ಪರಿವೀಕ್ಷಕ ಸದಾಶಿವಣ್ಣನವರ್ ಗ್ರಾಮಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.