ಗೋಣಿಕೊಪ್ಪ ವರದಿ, ಫೆ. ೯: ಮಾಯಮುಡಿ ಗ್ರಾಮದ ಕಂಗಳತ್ತ್ನಾಡ್ ಕಮಟೆ ಮಹಾದೇವರ ವಾರ್ಷಿಕೋತ್ಸವ ತಾ. ೧೨ ರಿಂದ ತಾ. ೧೬ ರವರೆಗೆ ನಡೆಯಲಿದೆ. ತಾ. ೧೬ ರಂದು ದೊಡ್ಡ ಹಬ್ಬ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಸಾಯಂಕಾಲ ೬ ಗಂಟೆಯಿAದ ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ ವಸಂತ ಪೂಜೆ ಆಚರಣೆ ಮೂಲಕ ಸಂಪನ್ನಗೊಳ್ಳಲಿದೆ. ತಾ. ೧೨ ರಂದು ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ತಾ. ೧೩ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಈಶ್ವರನಿಗೆ ಬಿಲ್ವ ಪತ್ರಾರ್ಚನೆ, ತಾ. ೧೪ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ತಾ. ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಾಯಂಕಾಲ ೬ ಗಂಟೆಗೆ ನೆರಪು ನಡೆಯಲಿದೆ.
ಹಬ್ಬದ ೪ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ಇದ್ದು, ಗುಡಿಗಳಿಗೆ ಸಾಮೂಹಿಕ ಅಲಂಕಾರ, ಅನ್ನದಾನ, ತೂಚಂಬಲಿ ಬೊಳಕ್ ಸೇವೆಗೆ ಧನ ಸಹಾಯ ಮಾಡಬಹುದಾಗಿದೆ.