ಗೋಣಿಕೊಪ್ಪಲು, ಫೆ.೮: ಸರ್ಕಾರದ ವತಿಯಿಂದ ರೈತರಿಗೆ ಬಿಡುಗಡೆಯಾಗುವ ವಿವಿಧ ರೀತಿಯ ಪರಿಹಾರಗಳು ಫಲಾನುಭವಿಗಳ ಕೈ ಸೇರುವುದಕ್ಕೆ ನೂರೆಂಟು ವಿಘ್ನಗಳು ಎದುರಾಗುವುದು ಸಹಜ. ಇನ್ನೂ ಚೆಸ್ಕಾಂ ಇಲಾಖೆಯ ವತಿಯಿಂದ ಸಿಗಬೇಕಾದ ಪರಿಹಾರ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಇಂತಹ ಬೆಳವಣಿಗೆಯ ನಡುವೆ ರೈತ ಸಂಘ ಹಠಕ್ಕೆ ಬಿದ್ದು ರೈತನೊರ್ವರಿಗೆ ಚೆಸ್ಕಾಂ ಇಲಾಖೆಯ ವತಿಯಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ರೈತ ಪುತ್ತಾಮನೆ ಸ್ಮರಣ್ ಸುಭಾಷ್ ಅವರಿಗೆ ಚೆಸ್ಕಾಂ ಇಲಾಖೆಯ ವತಿಯಿಂದ ೪೦ ಸಾವಿರ ಪರಿಹಾರ ಲಭಿಸಿದೆ.

ಮತ್ತೂರು ಗ್ರಾಮದಲ್ಲಿ ವಾಸವಿರುವ ಸ್ಮರಣ್ ಸುಭಾಷ್ ಒಂದು ವರ್ಷದ ಹಿಂದೆ ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಗೋಣಿಕೊಪ್ಪಲು, ಫೆ.೮: ಸರ್ಕಾರದ ವತಿಯಿಂದ ರೈತರಿಗೆ ಬಿಡುಗಡೆಯಾಗುವ ವಿವಿಧ ರೀತಿಯ ಪರಿಹಾರಗಳು ಫಲಾನುಭವಿಗಳ ಕೈ ಸೇರುವುದಕ್ಕೆ ನೂರೆಂಟು ವಿಘ್ನಗಳು ಎದುರಾಗುವುದು ಸಹಜ. ಇನ್ನೂ ಚೆಸ್ಕಾಂ ಇಲಾಖೆಯ ವತಿಯಿಂದ ಸಿಗಬೇಕಾದ ಪರಿಹಾರ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಇಂತಹ ಬೆಳವಣಿಗೆಯ ನಡುವೆ ರೈತ ಸಂಘ ಹಠಕ್ಕೆ ಬಿದ್ದು ರೈತನೊರ್ವರಿಗೆ ಚೆಸ್ಕಾಂ ಇಲಾಖೆಯ ವತಿಯಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ರೈತ ಪುತ್ತಾಮನೆ ಸ್ಮರಣ್ ಸುಭಾಷ್ ಅವರಿಗೆ ಚೆಸ್ಕಾಂ ಇಲಾಖೆಯ ವತಿಯಿಂದ ೪೦ ಸಾವಿರ ಪರಿಹಾರ ಲಭಿಸಿದೆ.

ಮತ್ತೂರು ಗ್ರಾಮದಲ್ಲಿ ವಾಸವಿರುವ ಸ್ಮರಣ್ ಸುಭಾಷ್ ಒಂದು ವರ್ಷದ ಹಿಂದೆ ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ವಿಚಾರದಲ್ಲಿ ಚೆಸ್ಕಾಂ ಅಧಿಕಾರಿ ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪರಿಹಾರ ನೀಡುವ ಭರವಸೆ ನೀಡಿದ್ದರು.

ಚೆಸ್ಕಾಂ ಇಲಾಖೆಯ ಅನೇಕ ಸಭೆಯಲ್ಲಿ ಪರಿಹಾರ ನೀಡುವ ವಿಚಾರದಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷÀ ಆಲೆಮಾಡ ಮಂಜುನಾಥ್ ಹಾಗೂ ಚೊಟ್ಟೆಕಾಳಪಂಡ ಮನು ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು.

ಅಂತಿಮವಾಗಿ ಚೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆಗೆ ಸಂಬAಧಿಸಿದAತೆ ೪೦ ಸಾವಿರ ಹಣವನ್ನು ಪರಿಹಾರ ರೂಪದಲ್ಲಿ ಹಸುವಿನ ಮಾಲೀಕರಿಗೆ ನೀಡಿದ್ದಾರೆ.

ಚೆಕ್ ವಿತರಣೆ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ಮೂಕಳೇರ ಕುಶಾಲಪ್ಪ, ಚೊಟ್ಟೆಕಾಳಪಂಡ ಮನು, ತೀತಿರ ಅಯ್ಯಪ್ಪ, ಪೊಕ್ಕಳಿಚಂಡ ಕಾರ್ಯಪ್ಪ, ಕಾಕೇರ ನಾಣಯ್ಯ, ಚಾರಿಮಂಡ ದೇವಯ್ಯ, ಪಡಿಂಞರAಡ ಗಿರೀಶ್, ಚೆಪ್ಪುಡೀರ ರೋಷನ್, ಚೆಸ್ಕಾಂ ಇಲಾಖೆಯ ಇಂಜಿನಿಯರ್ ಕೃಷ್ಣಕುಮಾರ್, ಸಿಬ್ಬಂದಿ ಪ್ರಥ್ವಿರಾಜ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್