ಶ್ರೀಮಂಗಲ, ಫೆ. ೭: ತಲಕಾವೇರಿ-ಭಾಗಮಂಡಲ ಕ್ಷೇತ್ರದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಒಂಭತ್ತು ಸದಸ್ಯರಲ್ಲಿ ಕೇವಲ ಇಬ್ಬರು ಕೊಡವರಿಗೆ ಮಾತ್ರ ಅವಕಾಶ ನೀಡ ಲಾಗಿದ್ದು, ಕ್ಷೇತ್ರÀ್ರದಿಂದ ಕೊಡವರನ್ನು ವ್ಯವಸ್ಥಿತವಾಗಿ ದೂರ ಇಡಲು ಸಂಚು ನಡೆಸಲಾಗುತ್ತಿದೆ ಎಂದು ಕೊಡವ ಜನಾಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಸ್ತುತ ಕೆ.ಜಿ. ಬೋಪಯ್ಯರವರ ಶಿಫಾರಸ್ಸಿನಂತೆ ಸಮಿತಿ ರಚನೆಯಾಗಿದ್ದು, ಸಮಿತಿಯಲ್ಲಿ ಶೇಕಡ ೫೦ರಷ್ಟು ಕೊಡವರಿಗೆ ಪ್ರಾತಿನಿಧ್ಯತೆÉÉ ನೀಡಬೇಕು. ಉಳಿದಂತೆ ಕ್ಷೇತ್ರದ ಮೂಲ ಅರ್ಚಕರಾದ ಅಮ್ಮಕೊಡವ ಜನಾಂಗಕ್ಕೆ ಸಮಿತಿ ಯಲ್ಲಿ ಸ್ಥಾನ ನೀಡುವುದರೊಂದಿಗೆ ಕೊಡಗಿನ ಎಲ್ಲಾ ಭಾಗದಿಂದ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಈ ಬಗ್ಗೆ ಕೊಡವ ಜನಾಂಗದ ಪ್ರಮುಖರು ನಡೆಸಿದ ತುರ್ತು ಸಭೆಯಲ್ಲಿ ಚರ್ಚೆ ನಡೆದು, ದೇವಸ್ಥಾನ ಸಮಿತಿಗೆ ತಾ. ೩೦.೭.೨೦೨೧ ರಿಂದ ಅರ್ಜಿಸ್ವೀಕರಿಸಲು ಪ್ರಾರಂಭಿಸಲಾಗಿದೆ. ಆದರೆ ಶಾಸಕ ಕೆ.ಜಿ.ಬೋಪಯ್ಯರವರು ಅದಕ್ಕೆ ಮುಂಚಿತವಾಗಿ ಅಂದರೆ ತಾ. ೨.೬.೨೦೨೧ ರಂದು ಆಗಿನ ಮುಖ್ಯಮಂತ್ರಿಯವರಿಗೆ ಸಮಿತಿಗೆ ಒಂಬತ್ತು ಸದಸ್ಯರ ಹೆಸರÀನ್ನು ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ. ಶಾಸಕರು ಸಮಿತಿಗೆ ಶಿಫಾರಸ್ಸು ಮಾಡಿದವರ ಹೆಸರನ್ನು ಆಗಿನ ಮುಖ್ಯಮಂತ್ರಿರವರು ತಾ.೧೬-೦೬-೨೦೨೧ ರಂದು ಅಂತಿಮಗೊಳಿಸಿ ಅಂಗೀಕಾರ ಮಾಡಿರುವ ಬಗ್ಗೆ ಚರ್ಚಿಸಲಾಯಿತು.
ಸಮಿತಿಗೆ ಅರ್ಜಿ ಸಲ್ಲಿಸುವ ಮೊದಲೇ ಸಮಿತಿ ರಚನೆ ಮಾಡಲಾಗಿದ್ದು, ಇದೊಂದು ಕೊಡವ ಜನಾಂಗದವರನ್ನು ಕತ್ತಲೆಯಲಿಟ್ಟು ನಡೆಸಿದ ಷಡ್ಯಂತ್ರವೆAದು ಸಾಬೀತಾ ಗಿದ್ದು, ಇದಕ್ಕೆ ಶಾಸಕ ಕೆ.ಜಿ. ಬೋಪಯ್ಯರವರು ನೇರ ಹೊಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ರಚನೆಗೆ ಮೊದಲು ರಾಜಕೀಯ ರಹಿತವಾಗಿ ಕೊಡಗಿನ ಎಲ್ಲಾ ಭಾಗಕ್ಕೆ ಪ್ರಾತಿನಿಧ್ಯ ನೀಡ ಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಭಾಗಮಂಡಲ ವ್ಯಾಪ್ತಿಗೆ ಸೀಮಿತವಾಗಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ ೭೦ ಸದಸ್ಯರು ಅರ್ಜಿ ಸಲ್ಲಿಸಿದ್ದು, ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿ ಅರ್ಜಿಗಳ ಪರಿಶೀಲನೆಗೆ ಅಲೆದಾಡಿಸಲಾಯಿತು. ಅರ್ಜಿ ಸಲ್ಲಿಸುವ ಮೊದಲೇ ಒಳಗೊಳಗೆ ಶಾಸಕರ ಶಿಫಾರಸ್ಸು ಪತ್ರದಂತೆ ಸಮಿತಿ ರಚಿಸಿಕೊಳ್ಳುವು ದಾದರೆ ನಂತರದಲ್ಲಿ ಆರ್ಜಿ ಸಲ್ಲಿಸಿದ ಮತ್ತು ಅದರ ಪರಿಶೀಲನೆ ಎಂಬ ನಿಯಮಬಾಹಿರವಾದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಬಿ.ಜೆ.ಪಿ ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ವೀರಾಜಪೇಟೆ ನಗರ ಬಿ.ಜೆ.ಪಿ. ಯುವಮೋರ್ಚಾ ಮಾಜಿ ಅಧ್ಯಕ್ಷ ಅಪ್ಪಂಡೇರAಡ ಯಶ್ವಂತ್ ಕಾಳಪ್ಪ, ಜಬ್ಬೂಮಿ ಸಂಘಟನೆಯ ಪ್ರಮುಖರಾದ ಮಚ್ಚಮಾಡ ಅನೀಶ್‌ಮಾದಪ್ಪ, ಪಾಲೇಂಗಡ ಅಮಿತ್, ಕಾವೇರಿ ಭಕ್ತ ಸಂಘದ ಅಪ್ಪಚ್ಚೀರ ಕಮಲಮುತ್ತಣ್ಣ, ಜಮ್ಮಡ ಮೋಹನ್‌ಮಾದಪ್ಪ ಹಾಜರಿದ್ದರು.