ಸುಂಟಿಕೊಪ್ಪ, ಫೆ. ೭: ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ಗಾಂಧಿ ಉದ್ಯಾನವನಕ್ಕೆ ಅನುಮತಿ ಮತ್ತು ಸಹಕಾರ ನೀಡುವಂತೆ ಕಳೆದ ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದರು.
ಹರದೂರು ಗ್ರಾಮ ಪಂಚಾಯಿತಿಯ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಬಂಗಲೆಗೆ ೧೯೩೪ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿಕೊಟ್ಟ ನೆನಪಿಗಾಗಿ ಮತ್ತು ಸುಂಟಿಕೊಪ್ಪದ ವ್ಯಾಪ್ತಿಯಲ್ಲಿ ಯಾವುದೇ ಪ್ರವಾಸ ತಾಣವಿಲ್ಲದಿರುವುದರಿಂದ ಮಹಾತ್ಮರು ಬಂದು ಹೋದ ಸ್ಥಳದ ಇತಿಹಾಸವನ್ನು ಸಾರುವ ನಿಟ್ಟಿನಲ್ಲಿ ಒಂದು ಗಾಂಧಿ ಉದ್ಯಾನವನ ಮಾಡಬೇಕೆಂಬ ಮಹತ್ವಕಾಂಕ್ಷೆಯಿAದ ಮನವಿ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ್ ಅವರು ಗುಂಡುಕುಟ್ಟಿ ಮಂಜುನಾಥಯ್ಯ ಅವರ ಬಂಗಲೆಗೆ ಭೇಟಿ ನೀಡಿ ತೋಟದ ಮಾಲೀಕರೂ ಹಾಗೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕುಮಾರ್ ರವರಿಂದ ಗಾಂಧೀಜಿಯವರು ಭೇಟಿಕೊಟ್ಟ ಇತಿಹಾಸದ ಬಗ್ಗೆ ಮಾಹಿತಿ ಪಡೆದರು. ಬಂಗಲೆಯ ಸುತ್ತಮುತ್ತಲಿನ ಸ್ಥಳಗಳಿಗೆÀ ಭೇಟಿಕೊಟ್ಟು ವೀಕ್ಷಣೆ ಮಾಡಿ ಗಾಂಧಿ ಉದ್ಯಾನವನ ಮಾಡುವ ಸಂಬAಧ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುಂಟಿಕೊಪ್ಪ ನಾಡಕಚೇರಿಯ ಉಪ ತಹಶೀಲ್ದಾರ್ ಆರ್.ಶಿವಪ್ಪ, ಗ್ರಾಮ ಲೆಕ್ಕಿಗ ನಾಗೇಂದ್ರ, ಟ್ರಸ್ಟಿನ ಕಾರ್ಯದರ್ಶಿ ಡೆನ್ನಿಸ್, ಸಂಚಾಲಕ ಮೊಯಿದ್ದೀನ್ ಟ್ರಸ್ಟಿಗಳಾದ ರಮೇಶ್ ಪಿಳ್ಳೆöÊ, ಮುರುಗೇಶ್, ನಾಡ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.