ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ, ಫೆ. ೭: ಕಾಂಗ್ರೆಸ್ ಹಲವು ಬಾರಿ ಚುನಾವಣೆಗಳಲ್ಲಿ ಸೋತರೂ ಸಹ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಕನಸುಗಳನ್ನು ನನಸಾಗಿಸಲು ಬಯಸುವುದಿಲ್ಲ ಎಂದು ಸೋಮವಾರ ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಮಾತನಾಡಿದ ಮೋದಿ, ನಾಗಾಲ್ಯಾಂಡ್ ೨೪ ವರ್ಷಗಳ ಹಿಂದೆ ಕಾಂಗ್ರೆಸ್‌ಗೆ ಮತ ಹಾಕಿದೆ. ಒಡಿಶಾ ೨೭ ವರ್ಷಗಳ ಹಿಂದೆ ನಿಮಗೆ ಮತ ಹಾಕಿದೆ. ೨೮ ವರ್ಷಗಳ ಹಿಂದೆ ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದಿದ್ದೀರಿ. ೧೯೮೮ರಲ್ಲಿ ತ್ರಿಪುರಾ ಕಾಂಗ್ರೆಸ್‌ಗೆ ಮತ ಹಾಕಿತು. ೧೯೭೨ ರಲ್ಲಿ ಪಶ್ಚಿಮ ಬಂಗಾಳ ಕಾಂಗ್ರೆಸ್‌ಗೆ ಮತ ಹಾಕಿದೆ. ತೆಲಂಗಾಣ ರಚನೆಗೆ ನೀವೇ ಕ್ರೆಡಿಟ್ ತೆಗೆದುಕೊಳ್ಳುತ್ತೀರಿ. ಆದರೆ ಜನತೆ ನಿಮ್ಮನ್ನು ಸ್ವೀಕರಿಸಲಿಲ್ಲ ಎಂದು ಹೇಳಿದರು. ಇಂದು ದೇಶದ ಬಡ ಜನರು ಗ್ಯಾಸ್ ಸಂಪರ್ಕ, ಮನೆ ಮತ್ತು ಶೌಚಾಲಯಗಳನ್ನು ಪಡೆಯುತ್ತಿದ್ದಾರೆ. ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್, ಕೆಲವು ವಿರೋಧಿ ಮನಸ್ಸುಗಳು ಮಾತ್ರ ೨೦೧೪ರ ಕಾಲಮಾನಕ್ಕೆ ಅಂಟಿಕೊAಡಿವೆ. ನೀವು ನನ್ನನ್ನು ವಿರೋಧಿಸಬಹುದು, ಆದರೆ ಕಾಂಗ್ರೆಸ್ ಫಿಟ್ ಇಂಡಿಯಾ ಚಳವಳಿ ಮತ್ತು ಇತರ ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದೀರಿ?. ದಶಕಗಳಿಂದ ಹಲವಾರು ರಾಜ್ಯಗಳಲ್ಲಿ ಜನಾದೇಶ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆದರೂ ಇನ್ನೂ ಕುರುಡು ವಿರೋಧದಲ್ಲಿ ತೊಡಗಿದೆ ಎಂದರು.

‘ಝೆಡ್’ ಶ್ರೇಣಿ ಭದ್ರತೆ ಒಪ್ಪಿಕೊಳ್ಳುವಂತೆ ಓವೈಸಿಗೆ ಮನವಿ

ನವದೆಹಲಿ, ಫೆ. ೭: ಇತ್ತೀಚೆಗಷ್ಟೇ ದಾಳಿಗೊಳಗಾಗಿದ್ದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಿಗೆ ಸರ್ಕಾರ ನೀಡಿರುವ ‘ಝೆಡ್’ ಶ್ರೇಣಿ ಭದ್ರತೆ ಒಪ್ಪಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ ಅವರು, ಕಾರಿನ ಮೇಲೆ ದಾಳಿ ನಡೆಸಿದ ಬಳಿಕ ಸರ್ಕಾರ ನೀಡಿರುವ ಝಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸುವಂತೆ ಅಸಾದುದ್ದೀನ್ ಓವೈಸಿ ಅವರಿಗೆ ಮನವಿ ಮಾಡಿದ್ದಾರೆ. ಓವೈಸಿ ಇನ್ನೂ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರದ ಮೌಲ್ಯಮಾಪನವು ಕಂಡುಹಿಡಿದಿದೆ. ಆದರೆ ಹೈದರಾಬಾದ್ ಸಂಸದರು ಸಿಆರ್‌ಪಿಎಫ್ ರಕ್ಷಣೆ ಪಡೆಯಲು ನಿರಾಕರಿಸಿದ್ದಾರೆ. ಒವೈಸಿ ಅವರು ನಮಗೆ ಕಳುಹಿಸಿದ ಮೌಖಿಕ ಮಾಹಿತಿಯ ಪ್ರಕಾರ, ಅವರು ಭದ್ರತೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ತಕ್ಷಣವೇ ಭದ್ರತೆಯನ್ನು ತೆಗೆದುಕೊಳ್ಳುವಂತೆ ಮತ್ತು ನಮ್ಮ ಕಾಳಜಿಯನ್ನು (ಅವರ ಸುರಕ್ಷತೆಯ ಬಗ್ಗೆ) ತಿಳಿಸುವಂತೆ ನಾನು ಈ ಸದನದ ಮೂಲಕ ಓವೈಸಿ ಅವರನ್ನು ವಿನಂತಿಸುತ್ತೇನೆ ಎಂದು ಶಾ ಮೇಲ್ಮನೆಯಲ್ಲಿ ಹೇಳಿದರು. ಗೃಹ ಸಚಿವಾಲಯವು ರಾಜ್ಯ ಸರ್ಕಾರದಿಂದ ವರದಿಯನ್ನು ಸ್ವೀಕರಿಸಿದ್ದು, ಈ ಹಿಂದೆಯೂ ಹಲವು ಬಾರಿ ಓವೈಸಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ತೆಲಂಗಾಣ ಪೊಲೀಸರು ಮತ್ತು ದೆಹಲಿ ಪೊಲೀಸರು ಓವೈಸಿಗೆ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ನಾವು ಓವೈಸಿಯ ಭದ್ರತೆಯನ್ನು ಮರು ಮೌಲ್ಯಮಾಪನ ಮಾಡಿದ್ದೇವೆ. ನಾವು ಅವರಿಗೆ ದೆಹಲಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಖಿಲ ಭಾರತ ಮಟ್ಟದ ಝೆಡ್ ಕೆಟಗರಿ ಭದ್ರತೆಯ ಅಡಿಯಲ್ಲಿ ಬುಲೆಟ್ ಪ್ರೂಫ್ ಕಾರನ್ನು ಒದಗಿಸುವ ಕುರಿತು ಪ್ರಸ್ತಾಪ ನೀಡಿದ್ದೇವೆ ಎಂದು ಹೇಳಿದರು. ಫೆಬ್ರವರಿ ೩, ೨೦೨೨ ರಂದು ಉತ್ತರ ಪ್ರದೇಶದಲ್ಲಿ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಈ ಸಂಬAಧ ಇಬ್ಬರನ್ನು ಬಂಧಿಸಿ ಶಸ್ತಾçಸ್ತçಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ದೆಹಲಿಯಲ್ಲಿ ರಾಜ್ಯದ ಸಂಸದರು ಹಾಗೂ ಸಚಿವರೊಂದಿಗೆ ಸಭೆ

ನವದೆಹಲಿ, ಫೆ. ೭: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾಷ್ಟç ರಾಜಧಾನಿಯಲ್ಲಿ ಕರ್ನಾಟಕದ ಸಂಸದರು ಹಾಗೂ ಸಚಿವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಕರ್ನಾಟಕದ ಸಂಸದರು ಮತ್ತು ಸಚಿವರೊಂದಿಗೆ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಮತ್ತು ಇತರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

ವಿವಾದತ್ಮಕ ಹೇಳಿಕೆ - ಎಐಎಂಐಎA ರಾಜ್ಯಾಧ್ಯಕ್ಷನ ಬಂಧನ

ಬಾಗಲಕೋಟೆ, ಫೆ. ೭: ಭಾರತ ಮಾತೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಎಐಎಂಐಎA ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಸ್ಮಾನಗಣಿ ಹುಮನಾಬಾದ್, ಭಾರತ ಮಾತೆ ತಾಯಿ ಎನ್ನುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಜನರ ಆಕ್ರೋಶ ಬೆನ್ನಲ್ಲೇ ಉಸ್ಮಾನಗಣಿ ತಲೆಮರೆಸಿಕೊಂಡಿದ್ದ. ಸುಳಿವಿನ ಮೇರೆಗೆ ಪೊಲೀಸರು ಆತನನ್ನು ಅಜ್ಞಾತ ಸ್ಥಳದಿಂದ ಬಂಧಿಸಿದ್ದಾರೆ ಬಳಿಕ ರಾತ್ರಿ ತಹಶೀಲ್ದಾರ್ ಬಸವರಾಜ್ ಮುಂದೆ ಹಾಜರುಪಡಿಸಿದ್ದಾರೆ. ಫೆ.೯ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.

ಉದ್ಯಮಿ ಅಪಹರಣ ಪ್ರಕರಣ - ಮೂವರ ಬಂಧನ

ಬೆಳಗಾವಿ, ಫೆ. ೭: ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ರವಿಕಿರಣ್ ಭಟ್ ಅವರ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಪ್ರಮುಖ ಆರೋಪಿಗಳನ್ನು ಬೆಳಗಾವಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟçದ ಸಾಂಗ್ಲಿ ನಿವಾಸಿ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಎಂದು ಗುರ್ತಿಸಲಾಗಿದೆ, ಇದೇ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಯೂನೂಸ್ ಖಾಜಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು, ತನ್ನನ್ನು ಅಪಹರಿಸಿ, ಕಿರುಕುಳ ನೀಡಿ ಹಣಕ್ಕಾಗಿ ಹಿಂಸೆ ನೀಡಿದ್ದಾರೆ ಎಂದು ರವಿಕಿರಣ್ ಭಟ್ ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರಂಭದಲ್ಲಿ ಎಂಟು ಮಂದಿ ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಪ್ರಕರಣದ ಭೂಗತಗೊಂಡಿದ್ದ ಮೂವರು ಆರೋಪಿಗಳನ್ನು ಇದೀಗ ಬಂಧನಕ್ಕೊಳಪಡಿಸಲಾಗಿದೆ. ಮತ್ತೋರ್ವ ಆರೋಪಿ ಯೂನಿಸ್ ಖಾಜಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.

ಹಿಜಾಬ್ ಪ್ರತಿಭಟನೆಗೆ ಮಾರಕಾಸ್ತçಗಳೊಂದಿಗೆ ಬಂದಿದ್ದ ಇಬ್ಬರ ಬಂಧನ

ಕುAದಾಪುರ, ಫೆ. ೭: ಕುಂದಾಪುರ ಪದವಿಪೂರ್ವ ಕಾಲೇಜು ಬಳಿ ಶುಕ್ರವಾರ ಹಿಜಾಬ್ ಹಾಗೂ ಕೇಸರಿ ಶಾಲು ಧಾರಣೆ ವಿಚಾರದಲ್ಲಿ ನಡೆದ ಪ್ರತಿಭಟನೆಗೆ ಮಾರಕಾಸ್ತçಗಳೊಂದಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಕುಂದಾಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಗಂಗೊಳ್ಳಿಯ ಅಬ್ದುಲ್ ಮಜೀದ್ (೩೨) ಹಾಗೂ ರಜಬ್ (೪೧) ಎಂದು ಗುರ್ತಿಸಲಾಗಿದೆ. ಇವರ ಜೊತೆಗಿದ್ದ ಇತರೆ ಆರೋಪಿಗಳಾದ ಖಲೀಲ್, ರಿಜ್ವಾನ್ ಹಾಗೂ ಇಫ್ತಿಕರ್ ಬಂಧನಕ್ಕೆ ಶೋಧ ನಡೆದಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಐದಾರು ಮಂದಿ ಮಾರಕಾಸ್ತçಗಳೊಂದಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.