ರಮಡಿಕೇರಿ, ಫೆ. ೮: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ವತಿಯಿಂದ ಐಎಸ್‌ಬಿ ಯೋಜನೆಯಡಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಟ್ಟಿಗನಹಳ್ಳಿ ಗ್ರಾಮದ ಪಿ.ಬಿ. ಧರ್ಮಪ್ಪ ಬಿನ್ ಪುಟ್ಟಯ್ಯ ಅವರಿಗೆ ನಿಗಮದಿಂದ ರೂ. ೧ ಲಕ್ಷ ಸಹಾಯಧನ ಮಂಜೂರಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫಲಾನುಭವಿಗೆ ಕಾರಿನ ಕೀ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಬಿ. ಚಂದ್ರಶೇಖರ್ ಹಾಜರಿದ್ದರು.