ಮಡಿಕೇರಿ, ಫೆ. ೭: ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಮಾರ್ನಿಂಗ್ ಸ್ಟಾರ್ ಯೋಗ ಭಾರತಿ ವತಿಯಿಂದ ರಥ ಸಪ್ತಮಿ ಪ್ರಯುಕ್ತ ರಾಜಾಸೀಟಿನಲ್ಲಿ ೧೦೮ ಸೂರ್ಯ ನಮಸ್ಕಾರ ನಡೆಯಿತು.೯೫ ಮಂದಿ ಪಾಲ್ಗೊಂಡಿದ್ದರು. ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಸೂರ್ಯದೇವನಿಗೆ ಮಾಲಾರ್ಪಣೆ ಮೂಲಕ ಸೂರ್ಯ ನಮಸ್ಕಾರಕ್ಕೆ ಚಾಲನೆ ನೀಡಿದರು. ಯೋಗ ಶಿಕ್ಷಕರಾದ ಶಿಲ್ಪಾ ರೈ, ಸುಧಾಕರ್, ಲಿಂಗಪ್ಪ, ನವೀನ್ ಹಾಗೂ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.