ಗೋಣಿಕೊಪ್ಪಲು, ಫೆ. ೭: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಸಹೋದರಿಯರಿಬ್ಬರ ಮೇಲೆ ದುಷ್ಕರ್ಮಿಗಳು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಓರ್ವಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ಸಹೋದರಿ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಪ್ರೇಮ (೫೫) ಎಂದು ಗುರುತಿಸಲಾಗಿದೆ. ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇದಾ (ವೀಣಾ-೫೦) ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಶ್ರೀಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಡಿವೈಎಸ್ಪಿ ಜಯಕುಮಾರ್, ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಮಹಿಳೆ ಪ್ರೇಮಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮದುವೆಗೆ ಹೋಗಿದ್ದ ಸಹೋದರಿಯರು
ವೇದ ಹಾಗೂ ಆತಳ ಗಂಡ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಮಹಿಳೆ ಪ್ರೇಮಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮದುವೆಗೆ ಹೋಗಿದ್ದ ಸಹೋದರಿಯರು
ವೇದ ಹಾಗೂ ಆತಳ ಗಂಡ ಹಾಲು ಖರೀದಿಸಿ ಮನೆಯ ಬಳಿ ಹೋಗುತ್ತಿರುವಾಗ ಇವರಿಬ್ಬರ ಮೇಲೆ ತೋಟದ ರಸ್ತೆಯಲ್ಲಿಯೇ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ಮಾರಕಾಯುಧಗಳಿಂದ ಕುತ್ತಿಗೆಯ ಭಾಗಕ್ಕೆ ಹಲ್ಲೆ ನಡೆಸಿದÀ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಪ್ರೇಮ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರೇಮಳ ಮನೆಗೆ ತೆರಳುವ ತೋಟದ ದಾರಿಯ ಮಧ್ಯದಲ್ಲಿ ಈ ಕೊಲೆ ನಡೆದಿದ್ದು ಭಾನುವಾರ ಮಧ್ಯಾಹ್ನ ನಾಲ್ಕು ಗಂಟೆಗೆ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ತೋಟದ ರಸ್ತೆಯಲ್ಲಿ ಯಾರು ಕೂಡ ಸಂಚಾರವಿಲ್ಲದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಬೆಳಿಗ್ಗೆ ಕಾರ್ಮಿಕವೋರ್ವಳು ಹಸುವನ್ನು ಮೇಯಿಸುತ್ತಿದ್ದ ವೇಳೆ ರಕ್ತದ ಮಡುವಿನಲ್ಲಿದ್ದ ಸಹೋದರಿಯ ರಿಬ್ಬರನ್ನು ಕಂಡು ಸಮೀಪದ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಪ್ರೇಮಳ ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಆಗಂತುಕರು ಈಕೆಯ ಜೊತೆಯಲ್ಲಿದ್ದ ಸಹೋದರಿಗೂ ಮಾರಣಾಂತಿಕವಾಗಿ ತಲೆ, ಮುಖದ ಭಾಗಕ್ಕೆ ಕತ್ತಿಯಿಂದ ಗಂಭೀರ ಸ್ವರೂಪದ
(ಮೊದಲ ಪುಟದಿಂದ) ಗಾಯಗೊಳಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಅಲ್ಲಿಂದ ತೆರಳಿದ್ದಾರೆ. ವೇದಳಿಗೆ ಗಂಭೀರ ಸ್ವರೂಪದ ಗಾಯಗೊಂಡು ಪ್ರಜ್ಞೆ ತಪ್ಪಿ ರಸ್ತೆಯಲ್ಲಿಯೇ ಬಿದಿದ್ದು, ಸ್ಥಳಕ್ಕೆ ಬಂದ ನಾಗರಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಕೆಯನ್ನು ಮಡಿಕೇರಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಇದೀಗ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಿಂದ ನೇರವಾಗಿ ಪ್ರೇಮಳ ಮನೆಗೆ ತೆರಳಿರುವ ಕೊಲೆಗಾರ ಮನೆಯ ಮೆಟ್ಟಿಲು ಬಳಿ ರಕ್ತದ ಕಲೆಯನ್ನು ಬಿಟ್ಟು ಅಲ್ಲಿಂದ ತೆರಳಿದ್ದಾನೆ ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸಹೋದರಿ ಮಗನನ್ನು ದತ್ತು ಪಡೆದಿದ್ದ ಪ್ರೇಮ
ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನೆಲೆಸಿದ್ದ ಪ್ರೇಮ ಕಳೆದ ಎರಡು ತಿಂಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಇರುವ ನಾಲ್ಕು ಎಕರೆ ತೋಟವನ್ನು ನಿರ್ವಹಣೆ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಪ್ರೇಮ ದಂಪತಿಗೆ ಮಕ್ಕಳಿಲ್ಲದ ಕಾರಣ ತನ್ನ ಸ್ವಂತ ಸಹೋದರಿ ವೇದಾ ಅವರ ಮಗನನ್ನು ನಿಯಮಾನುಸಾರ ದತ್ತು ಪಡೆದುಕೊಂಡಿದ್ದರು. ಆರನೇ ವಯಸ್ಸಿನಲ್ಲಿ ಮಗುವನ್ನು ದತ್ತು ಪಡೆದ ಪ್ರೇಮ ಆತನಿಗೆ ವಿದ್ಯಾಭ್ಯಾಸ ಕೊಡಿಸಿ ಪ್ರಸ್ತುತ ಆತ ಮಂಗಳೂರಿನಲ್ಲಿ ಇಂಜಿನಿಯರಿAಗ್ ಓದುತ್ತಿದ್ದಾನೆ. ಇತ್ತ ತಂಗಿ ವೇದಾ ತನ್ನ ಪತಿ ರಾಜುವಿನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು.
ಅಕ್ಕನ ಆಸ್ತಿಯು ಸಹಜವಾಗಿಯೇ ದತ್ತು ಪುತ್ರನಿಗೆ ಲಭಿಸಲಿದೆ ಎಂದು ಕುಟುಂಬದಲ್ಲಿ ಆಗಿಂದಾಗ್ಗೆ ಮಾತುಗಳು ಕೇಳಿ ಬರುತ್ತಿದ್ದವು. ಇದನ್ನು ಕುಟುಂಬದ ಕೆಲವು ಮಂದಿ ವಿರೋಧಿಸುತ್ತಿದ್ದರು ಎನ್ನಲಾಗಿದೆ. ಕೊಲೆಗೆ ಇದು ಪ್ರಮುಖ ಕಾರಣವೆಂದು ಎಂದು ಪ್ರಾಥಮಿಕ ತನಿಖೆಯಲ್ಲಿ ಊಹಿಸಲಾಗಿದೆ.
ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಡಿವೈಎಸ್ಪಿ ಜಯಕುಮಾರ್ ವಿಶೇಷ ತಂಡ ರಚಿಸಿ, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಟಿ.ಶೆಟ್ಟಿಗೇರಿ ಗ್ರಾಮದ ಮಾಜಿ ಅಧ್ಯಕ್ಷ ಮಚ್ಚಮಾಡ ಸುಮಂತ್, ಬಿಜೆಪಿಯ ಪ್ರಮುಖ ಕಟ್ಟೇರ ಈಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಇತರ ಗ್ರಾಮಸ್ಥರು ಆರೋಪಿಗಳ ಸೆರೆಗೆ ಒತ್ತಾಯಿಸಿದ್ದಾರೆ.
- ಹೆಚ್.ಕೆ. ಜಗದೀಶ್