ಮಡಿಕೇರಿ, ಫೆ. ೭: ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಸಂ.ಸ. ನೂತನ ನಗರ ಶಾಖೆ ಸಮಿತಿ ರಚನೆ ಮಾಡಲಾಯಿತು. ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಪ್ರಸ್ತುತ ಸಮಾಜಕ್ಕೆ ಸಂಘಟನೆಯ ಅವಶ್ಯಕತೆ ಮತ್ತು ಸಂಘಟನೆಯಿAದ ಬಡ ಮತ್ತು ದಲಿತ ವರ್ಗಕ್ಕೆ ಆಗುವ ಪ್ರಯೋಜನೆಗಳ ಕುರಿತು ಮಾಹಿತಿ ನೀಡಿದರು.

ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿರುವ ಯೋಜನೆಗಳ ಕುರಿತು ಮಾತನಾಡಿ, ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆಯಿತ್ತರು.

ಸಮಿತಿಗೆ ಸಂಚಾಲಕರಾಗಿ ರಾಧಾ, ಸಂಘಟನಾ ಸಂಚಾಲಕರಾಗಿ ಗೀತಾ ಮತ್ತು ಖಜಾಂಚಿಯಾಗಿ ತುಳಸಿ ಅವರನ್ನು ಆಯ್ಕೆ ಮಾಡಲಾಯಿತು.