ಸೋಮವಾರಪೇಟೆ, ಫೆ. ೮: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಾಕ್ಷಿ ಸಭಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಜೇಸೀ ವಲಯಾಧ್ಯಕ್ಷ ಕುನಾಲ್ ಮಾಣಿಕ್ಚಂದ್ ಮಾತನಾಡಿ, ಜೇಸೀ ಸಂಸ್ಥೆಯು ನಾಯಕತ್ವ ಗುಣದೊಂದಿಗೆ ಯುವ ಸಮೂಹವು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಬಗ್ಗೆ ತಿಳುವಳಿಕೆ ನೀಡುತ್ತದೆ ಎಂದರು.
ನೂತನ ಸಾಲಿನ ಅಧ್ಯಕ್ಷರಾದ ನೆಲ್ಸನ್ ಡಿಸೋಜ, ಕಾರ್ಯದರ್ಶಿ ರಾಜೇಶ್, ಜೇಸೀ ರೇಟ್ಸ್ ಅಧ್ಯಕ್ಷರಾದ ಜಗದಾಂಬ ಗುರುಪ್ರಸಾದ್, ಜೂನಿಯರ್ ಜೇಸೀ ಅಧ್ಯಕ್ಷರಾದ ಧನುಶ್ರೀ ಮತ್ತು ತಂಡದವರಿಗೆ ವಲಯ ಉಪಾಧ್ಯಕ್ಷರಾದ ಸಂತೋಷ್ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭ ಮುಖ್ಯ ಅತಿಥಿ ಜೇಸೀ ನವೀನ್ ಮಿಸ್ಕತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶೀಲಾ ಡಿಸೋಜ, ನಿಕಟಪೂರ್ವ ಅಧ್ಯಕ್ಷರಾದ ಮಾಯಾ ಗಿರೀಶ್ ಮತ್ತಿತರರು ಇದ್ದರು.