ಮಡಿಕೇರಿ, ಫೆ. ೭: ಕೊಡಗು ಚಾನಲ್‌ನ ೧೩ನೇ ವಾರ್ಷಿಕೋತ್ಸವದ ಅಂಗವಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಪತ್ರಕರ್ತರಿಗಾಗಿ ಆಯೋಜಿಸಿದ್ದ ‘ಕೊಡಗು ಚಾನಲ್ ಮೀಡಿಯಾ ಕ್ರಿಕೆಟ್ ಕಪ್’ ಪಂದ್ಯಾದಲ್ಲಿ ಪವರ್ ಸ್ಟಾರ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ೩ ಪತ್ರಕರ್ತರ ತಂಡಗಳು ಪಾಲ್ಗೊಂಡಿತ್ತು. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕೊಡಗು ಚಾನಲ್ ತಂಡ ನಿಗದಿತ ೮ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೬೧ ರನ್ ಕಲೆ ಹಾಕಿತು. ತಂಡದ ಪರ ಚೇತನ್ ೨೯, ಖಲೀಲ್ ೧೩ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಚಾಲೆಂಜಿAಗ್ ಸ್ಟಾರ್ ತಂಡ ೫೭ ರನ್‌ಗಳಿಗೆ ಸರ್ವ ಪತನ ಕಂಡಿತು.
ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ಕೊಡಗು ಚಾನಲ್ ತಂಡ ೪ ವಿಕೆಟ್ ಕಳೆದುಕೊಂಡು ೮೯ ರನ್ ದಾಖಲಿಸಿತು. ತಂಡದ ಪರ ಖಲೀಲ್ ೩೨, ವಿನೋದ್ ೩೫ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಪವರ್‌ಸ್ಟಾರ್ ತಂಡ ೫ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ ೫೮, ಮಂಜು ಸುವರ್ಣ ೧೯ ರನ್ ಪೇರಿಸಿದರು.
೩ನೇ ಪಂದ್ಯದಲ್ಲಿ ಟಾಸ್ ಗೆದ್ದ ಪವರ್ ಸ್ಟಾರ್ ತಂಡ ೮ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೧೪೩ ರನ್ ಕಲೆ ಹಾಕಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ ೮೧, ಮಂಜು ಸುವರ್ಣ ೫೭ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಚಾಲೆಂಜಿAಗ್ ಸ್ಟಾರ್ ತಂಡ ೫ ವಿಕೆಟ್ ಕಳೆದುಕೊಂಡು ೮೭ ರನ್ ಗಳಿಸಲಷ್ಟೆ ಶಕ್ತವಾಯಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಪವರ್ ಸ್ಟಾರ್ ತಂಡ ೮ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ೧೪೨ ರನ್ ಕಲೆ ಹಾಕಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ ೬೫, ಮಂಜು ಸುವರ್ಣ ೫೮ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಕೊಡಗು ಚಾನಲ್ ತಂಡ ೫ ವಿಕೆಟ್ ಕಳೆದುಕೊಂಡು ೮೦ ರನ್ ದಾಖಲಿಸಿತು. ಪರಿಣಾಮ ಪವರ್ ಸ್ಟಾರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಕೊಡಗು ಚಾನಲ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
೫ ಅರ್ಧ ಶತಕ ದಾಖಲು
ಕೊಡಗು ಚಾನಲ್ ಮತ್ತು ಪವರ್ ಸ್ಟಾರ್ ತಂಡದ ನಡುವಿನ ಪಂದ್ಯದಲ್ಲಿ ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ೨೧ ಎಸೆತದಲ್ಲಿ ೬ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೫೮ ರನ್ ದಾಖಲಿಸಿದರು. ಚಾಲೆಂಜಿAಗ್ ಸ್ಟಾರ್ ನಡುವಿನ ಪಂದ್ಯದಲ್ಲಿ ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ೨೪ ಎಸೆತದಲ್ಲಿ ೯ ಸಿಕ್ಸರ್, ೬ ಬೌಂಡರಿ ನೆರವಿನೊಂದಿಗೆ ೮೧ರನ್, ಇದೇ ಪಂದ್ಯದಲ್ಲಿ ಮಂಜು ಸುವರ್ಣ ೨೬ ಎಸೆತದಲ್ಲಿ ೩ ಸಿಕ್ಸರ್, ೭ ಬೌಂಡರಿ ನೆರವಿನೊಂದಿಗೆ ೫೭ ರನ್ ದಾಖಲಿಸಿದರು. ಫೈನಲ್ ಪಂದ್ಯದಲ್ಲಿ ಕೊಡಗು ಚಾನಲ್ ವಿರುದ್ಧ ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ೨೮ ಎಸೆತದಲ್ಲಿ ೭ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೬೫, ಮಂಜು ಸುವರ್ಣ ೨೩ ಎಸೆತದಲ್ಲಿ ೩ ಸಿಕ್ಸರ್, ೫ ಬೌಂಡರಿ ನೆರವಿನೊಂದಿಗೆ ೫೮ ರನ್ ದಾಖಲಿಸಿದರು.ಅದ್ಕಲೇಗಾರ್ ೨೧ ಎಸೆತದಲ್ಲಿ ೬ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೫೮ ರನ್ ದಾಖಲಿಸಿದರು. ಚಾಲೆಂಜಿAಗ್ ಸ್ಟಾರ್ ನಡುವಿನ ಪಂದ್ಯದಲ್ಲಿ ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ೨೪ ಎಸೆತದಲ್ಲಿ ೯ ಸಿಕ್ಸರ್, ೬ ಬೌಂಡರಿ ನೆರವಿನೊಂದಿಗೆ ೮೧ರನ್, ಇದೇ ಪಂದ್ಯದಲ್ಲಿ ಮಂಜು ಸುವರ್ಣ ೨೬ ಎಸೆತದಲ್ಲಿ ೩ ಸಿಕ್ಸರ್, ೭ ಬೌಂಡರಿ ನೆರವಿನೊಂದಿಗೆ ೫೭ ರನ್ ದಾಖಲಿಸಿದರು. ಫೈನಲ್ ಪಂದ್ಯದಲ್ಲಿ ಕೊಡಗು ಚಾನಲ್ ವಿರುದ್ಧ ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ೨೮ ಎಸೆತದಲ್ಲಿ ೭ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೬೫, ಮಂಜು ಸುವರ್ಣ ೨೩ ಎಸೆತದಲ್ಲಿ ೩ ಸಿಕ್ಸರ್, ೫ ಬೌಂಡರಿ ನೆರವಿನೊಂದಿಗೆ ೫೮ ರನ್ ದಾಖಲಿಸಿದರು.
ವೈಯಕ್ತಿಕ ಪ್ರಶಸ್ತಿ ವಿವರ
ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಪವರ್ ಸ್ಟಾರ್ ತಂಡದ ಆದರ್ಶ್ ಅದ್ಕಲೇಗಾರ್ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಚಾಲೆಂಜಿAಗ್ ಸ್ಟಾರ್ ತಂಡದ ಅಜ್ಜಮಕ್ಕಡ ವಿನು ಕುಶಾಲಪ್ಪ ಪಡೆದುಕೊಂಡರು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭ
ಅAತರಾಷ್ಟಿçÃಯ ರಗ್ಬಿ ಆಟಗಾರ ಹಾಗೂ ಪ್ರಗತಿ ವಿದ್ಯಾ ಸಂಸ್ಥೆಯ ಮಾಲೀಕ ಮಾದಂಡ ತಿಮ್ಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಅಧ್ಯP್ಷÀತೆಯನ್ನು ಕೊಡಗು ಚಾನೆಲï ನಿರ್ದೇಶಕ ಜಿ.ವಿ. ರವಿಕುಮಾರ್ ವಹಿಸಿದ್ದರು. ಈ ಸಂದರ್ಭ ಚಿತ್ರ ನಿರ್ಮಾಪಕಿ ರಮ್ಯಾ, ಕೊಡಗು ಪ್ರೆಸ್ ಕ್ಲಬ್ ಅಧ್ಯP್ಷÀ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿ¯್ಲÁ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕ್ರೀಡಾ ಸಂಚಾಲಕ ಮಂಜು, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎ. ಆದಿತ್ಯ, ಮೂರು ತಂಡದ ನಾಯಕರುಗಳಾದ ವಿನೋದ್, ಯುಗ ದೇವಯ್ಯ, ಪ್ರಸಿನ್ ಗೌಡ, ತೀರ್ಪುಗಾರರಾದ ಕಾವೇರಪ್ಪ, ಯಶಿನ್ ಯಾಲದಾಳು ಉಪಸ್ಥಿತರಿದ್ದರು.