ಮಡಿಕೇರಿ, ಫೆ. ೬: ಖ್ಯಾತ ಜಾನಪದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ, ಕೊಡವಾಮೆರ ಕೊಂಡಾಟ ಸಂಘಟನೆಯು ಕೊಡವ ಮಹಿಳೆಯರಿಗೆ ‘ಜೂ... ಕುಂಞÂ ಜೂವಾ...’ ಎನ್ನುವ, ಜುವಪಾಟ್ ಪೈಪೋಟಿ ಆಯೋಜಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ವಯಸ್ಸಿನ ಮಿತಿ ಇಲ್ಲದೆ ಜೂವಪಾಟ್ ಅನ್ನು ಮೂಲ ನಿಯಮಾನುಸಾರ, ಮನೆಹೆಸರು, ತಮ್ಮ ಹೆಸರನ್ನು ಹೇಳುವ ಮೂಲಕ, ಹಾಡಿ, ೧೫ ನಿಮಿಷಗಳಿಗೆ ಮೀರದಂತೆ ವೀಡಿಯೋ ಮಾಡಿ, ಮಾರ್ಚ್ ೫ರ ಒಳಗೆ, ಸ್ಪರ್ಧಾ ಸಂಚಾಲಕ ಕುಂಞÂರ ಗಿರೀಶ್ ಭೀಮಯ್ಯ ಅವರ ೯೪೮೩೫೩೪೪೮೧ ಸಂಖ್ಯೆಗೆ ಕಳುಹಿಸಬೇಕು. ವಿಜೇತರಿಗೆ, ಪ್ರಥಮ ರೂ. ೫೦೦೦ ನಗದು ಮತ್ತು ಟ್ರೋಫಿ, ದ್ವಿತೀಯ
ರೂ. ೪೦೦೦ ನಗದು ಮತ್ತು ಟ್ರೋಫಿ, ಮೂರನೇ ರೂ. ೩೦೦೦ ನಗದು ಮತ್ತು ಟ್ರೋಫಿ ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು.
ಪ್ರಥಮ ಬಹುಮಾನವನ್ನು ಹಮ್ಮಿಯಾಲದ ಮೊಣ್ಣಂಡ ದಿ. ಮಾಚವ್ವ ಅವರ ನೆನಪಿನಲ್ಲಿ, ಮಗ ಮೊಣ್ಣಂಡ ಮನು ಮಾಚಯ್ಯ, ದ್ವಿತೀಯ ಬಹುಮಾನವನ್ನು ಸೂರ್ಲಬ್ಬಿ ತಂಬುಕುತ್ತಿರ ದಿ. ಈರಪ್ಪ ಗಂಗಮ್ಮ ಅವರ ನೆನಪಿನಲ್ಲಿ ಮಗಳು ಮಿನ್ನಂಡ ಲಲಿತಕಾಳಯ್ಯ, ತೃತೀಯ ಬಹುಮಾನವನ್ನು ಶಿರಂಗಳ್ಳಿ ಉಡುವೆರ ದಿ. ಜಿ. ಮುತ್ತಪ್ಪ ಗಂಗಮ್ಮ ಅವರ ನೆನಪಿನಲ್ಲಿ, ಮಗ ಉಡುವೆರ ವಿಠಲ್ ತಿಮ್ಮಯ್ಯ ಅವರು ಪ್ರಾಯೋಜಿಸಿದ್ದಾರೆ.
ಮರೆಯಾಗುತ್ತಿರುವ ಕೊಡವ ಜಾನಪದ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸುವ ಉದ್ದೇಶದಿಂದ ಕೊಡವಾಮೆರ ಕೊಂಡಾಟ ಸಂಘಟನೆ ನಡೆಸುತ್ತಿರುವ ಈ ಜೂವ ಪಾಟ್ ಪೈಪೋಟಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಸಂಘಟನೆ ಕೋರಿದೆ.