ಮಡಿಕೇರಿ, ಫೆ. ೭: ಸಂವಿಧಾನದ ೨೫ ಮತ್ತು ೨೬ ನೇ ವಿಧಿಯ ಅಡಿಯಲ್ಲಿ ಕೊಡವ ಜನಾಂಗದ ಧಾರ್ಮಿಕ ಸಂಸ್ಕಾರವಾಗಿರುವÀ ಕೋವಿಗೆ ಶಾಸನಬದ್ಧ ಸ್ಥಾನಮಾನವನ್ನು ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಯಿತು.
ನಂತರ ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಸರಕಾರಕ್ಕೆ ಕಳಿಸಲಾಯಿತು.
ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ನಂದಿನೆರವAಡ.ಯು ನಾಚಪ್ಪ, ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಮುಕ್ಕಾಟಿರ ರೋಜಿ ಗಣಪತಿ, ಚೋಲಪಂಡ ಜ್ಯೋತಿ ನಾಣಯ್ಯ, ಕೂಪದಿರ ಪುಷ್ಪ ಮುತ್ತಪ್ಪ, ಬಾಚರಣಿಯಂಡ ಚಿಪ್ಪಣ್ಣ, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಪಟ್ಟಮಾಡ ಕುಶ, ಚಂಬAಡ ಜನತ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಪುಳ್ಳೇರ ಕಾಳಪ್ಪ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ಅಪ್ಪಯ್ಯ, ಮನೋಟಿರ ಚಿನ್ನಪ್ಪ, ಪುಟ್ಟಿಚಂಡ ದೇವಯ್ಯ, ಪುಡಿಯೊಕ್ಕಡ ಕಾಶಿ, ಚೋಲಪಂಡ ನಾಣಯ್ಯ, ಕೂಪದಿರ ಸಾಬು, ಕೂಪದಿರ ಮನು ಹಾಜರಿದ್ದರು. ಇತರ ಜನಂಗದವರಿಗೂ ಕೋವಿ ವಿನಾಯಿತಿ ನೀಡಬೇಕೆಂಬ ಹಲವರ ಮನವಿ ಆಧಾರದಲ್ಲಿ ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರು ಸರಕಾರಕ್ಕೆ ಕಳುಹಿಸಿರುವ ಪತ್ರದ ರದ್ದತಿಗೆ ಆಗ್ರಹಿಸಿ ಸತ್ಯಾಗ್ರಹ ನಡೆಸಲಾಯಿತು.