ಸೋಮವಾರಪೇಟೆ,ಫೆ.೭: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ, ಚರಂಡಿ ಕಾಮಗಾರಿಗಳಿಗೆ ರೂ. ೮೨.೮೧ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಎನ್ಡಿಆರ್ಎಫ್ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಂಕ್ರೀಟ್ ಹಾಗೂ ಡಾಂಬರು ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಂಜನ್ ಹೇಳಿದರು.
ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಸಂದರ್ಭ ಸ್ಥಳೀಯರು ಚರಂಡಿಗೆ ಅಗತ್ಯ ಜಾಗವನ್ನು ನೀಡಬೇಕು. ಚರಂಡಿಗಳಿದ್ದರೆ ಮಾತ್ರ ರಸ್ತೆಗಳು ಬಹುಕಾಲ ಬಾಳಿಕೆ ಬರಲಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಮನಸ್ಸು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ಅಜ್ಜಳ್ಳಿ ನವೀನ್, ನಾಗರಾಜು, ಮಂಜುನಾಥ್, ವೆಂಕಟೇಶ್, ಮಲ್ಲಿಕ, ಗಣೇಶ್, ಪ್ರಮುಖರಾದ ಎಸ್.ಬಿ. ಭರತ್ಕುಮಾರ್, ಗೌಡಳ್ಳಿ ಸುನಿಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.