ಕುಡೆಕಲ್ ಸಂತೋಷ್ ಮಡಿಕೇರಿ, ಫೆ. ೬: ಭೌಗೋಳಿಕವಾಗಿ ಕೊಡಗು ಪುಟ್ಟ ಜಿಲ್ಲೆಯಾದರೂ ಮೂಲ ನಿವಾಸಿಗಳು., ರಾಜರ ಆಳ್ವಿಕೆಯಿಂದ ಹಿಡಿದು ಬ್ರಿಟೀಷರ ವಸಾಹತಿನಲ್ಲಿದ್ದುದರ ಬಗ್ಗೆ ಸಾಕಷ್ಟು ಇತಿಹಾಸಗಳಿವೆ., ಮೊದಲ ಸ್ವಾತಂತ್ರö್ಯ ಸಂಗ್ರಾಮ ಕೂಡ ಈ ಪುಟ್ಟ ಜಿಲ್ಲೆಯಿಂದಲೇ ಆರಂಭಗೊAಡಿತೆAಬದಕ್ಕೆ ಚರಿತ್ರೆಯಲ್ಲಿ ದಾಖಲೆಗಳಿವೆ., ಕೊಡಗು ದೇಶವನ್ನಾಳಿದ ರಾಜ ಮಹರಾಜರು ನೆಲೆಯೂರಿದ್ದ ಐತಿಹ್ಯವಾಗಿ ಇಲ್ಲಿ ಅರಮನೆಗಳಿವೆ., ಪುರಾತನ ಕಾಲದ ದೇಗುಲಗಳು, ಗದ್ದುಗೆಗಳು., ವೀರಗಲ್ಲುಗಳು, ಚರ್ಚ್ಗಳಿವೆ., ಈಗಲೂ ಪ್ರಾಚೀನ ಕಾಲದ ಕುರುಹುಗಳು ಅಲ್ಲಲ್ಲಿ ಪತ್ತೆಯಾಗುತ್ತಲೇ ಇವೆ., ಅದರಂತೆ ಕಾಂತೂರು - ಮೂರ್ನಾಡಿನಲ್ಲೂ ಒಂದು ಪ್ರಾಚೀನ ಕಾಲದ ಪುಟ್ಟ ಅರಮನೆಯೊಂದು ಇರುವದು ಬೆಳಕಿಗೆ ಬಂದಿದೆ. ರಾಜರ ಕಾಲದ., ಅಂದಾಜು ಏಳು ತಲೆಮಾರಿನ ಹಿಂದಿನ ಕಟ್ಟಡವೆಂಬದು ಇತಿಹಾಸದಿಂದ ತಿಳಿದು ಬಂದಿದೆ..!

ಕಾAತೂರು - ಮೂರ್ನಾಡು ಗ್ರಾಮದಲ್ಲಿ ನೆಲೆಸಿರುವ ಒಕ್ಕಲಿಗರ ಕೆರೆಮನೆ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿ ಈ ಪುರಾತನ ಕಾಲದ ಅರಮನೆ ಇದೆ. ಭಾಗಶಃ ಕುಸಿತಕ್ಕೊಳಗಾಗಿರುವ ಈ ಮನೆ ಬಹುಪಾಲು ವಿನಾಶದ ಅಂಚಿನಲ್ಲಿದೆ. ಮನೆಯ ಸುತ್ತಲೂ ಕಾಡಿನಿಂದಾವೃತ್ತವಾಗಿದ್ದ ಈ ಮನೆ ಇರುವದು ಯಾರ ಗಮನಕ್ಕೂ ಬಂದಿರಲಿಲ್ಲ. ಇದೀಗ ಗೋಚರವಾಗಿದ್ದು, ಒಂದಷ್ಟು ಕುತೂಹಲ ಕೆರಳಿಸಿದೆ..!

ಸರ್ವೆಯಿಂದ ಪತ್ತೆ..!

ಪ್ರಾಚ್ಯ ವಸ್ತು ಇಲಾಖೆ ವತಿಯಿಂದ ದೇಶವ್ಯಾಪಿ ಪ್ರತಿ ಗ್ರಾಮ ಮಟ್ಟದಲ್ಲಿ ಪುರಾತನ ಕಾಲದ ಕುರುಹುಗಳಿದ್ದಲ್ಲಿ ಪತ್ತೆ ಹಚ್ಚುವ ಸಲುವಾಗಿ ಗ್ರಾಮ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಈ ಸರ್ವೆ ಕಾರ್ಯ ನಡೆಸುತ್ತಿರುವಾಗ ಕಾಂತೂರು - ಮೂರ್ನಾಡಿನಲ್ಲಿ ಕಾಡಿನಿಂದ ಮುಚ್ಚಿಕೊಂಡಿದ್ದ ಹಳೆಯ ಕಟ್ಟಡವೊಂದು ಪತ್ತೆಯಾಗಿದೆ. ?ಕುಡೆಕಲ್ ಸಂತೋಷ್

ಮಡಿಕೇರಿ, ಫೆ. ೬: ಭೌಗೋಳಿಕವಾಗಿ ಕೊಡಗು ಪುಟ್ಟ ಜಿಲ್ಲೆಯಾದರೂ ಮೂಲ ನಿವಾಸಿಗಳು., ರಾಜರ ಆಳ್ವಿಕೆಯಿಂದ ಹಿಡಿದು ಬ್ರಿಟೀಷರ ವಸಾಹತಿನಲ್ಲಿದ್ದುದರ ಬಗ್ಗೆ ಸಾಕಷ್ಟು ಇತಿಹಾಸಗಳಿವೆ., ಮೊದಲ ಸ್ವಾತಂತ್ರö್ಯ ಸಂಗ್ರಾಮ ಕೂಡ ಈ ಪುಟ್ಟ ಜಿಲ್ಲೆಯಿಂದಲೇ ಆರಂಭಗೊAಡಿತೆAಬದಕ್ಕೆ ಚರಿತ್ರೆಯಲ್ಲಿ ದಾಖಲೆಗಳಿವೆ., ಕೊಡಗು ದೇಶವನ್ನಾಳಿದ ರಾಜ ಮಹರಾಜರು ನೆಲೆಯೂರಿದ್ದ ಐತಿಹ್ಯವಾಗಿ ಇಲ್ಲಿ ಅರಮನೆಗಳಿವೆ., ಪುರಾತನ ಕಾಲದ ದೇಗುಲಗಳು, ಗದ್ದುಗೆಗಳು., ವೀರಗಲ್ಲುಗಳು, ಚರ್ಚ್ಗಳಿವೆ., ಈಗಲೂ ಪ್ರಾಚೀನ ಕಾಲದ ಕುರುಹುಗಳು ಅಲ್ಲಲ್ಲಿ ಪತ್ತೆಯಾಗುತ್ತಲೇ ಇವೆ., ಅದರಂತೆ ಕಾಂತೂರು - ಮೂರ್ನಾಡಿನಲ್ಲೂ ಒಂದು ಪ್ರಾಚೀನ ಕಾಲದ ಪುಟ್ಟ ಅರಮನೆಯೊಂದು ಇರುವದು ಬೆಳಕಿಗೆ ಬಂದಿದೆ. ರಾಜರ ಕಾಲದ., ಅಂದಾಜು ಏಳು ತಲೆಮಾರಿನ ಹಿಂದಿನ ಕಟ್ಟಡವೆಂಬದು ಇತಿಹಾಸದಿಂದ ತಿಳಿದು ಬಂದಿದೆ..!

ಕಾAತೂರು - ಮೂರ್ನಾಡು ಗ್ರಾಮದಲ್ಲಿ ನೆಲೆಸಿರುವ ಒಕ್ಕಲಿಗರ ಕೆರೆಮನೆ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿ ಈ ಪುರಾತನ ಕಾಲದ ಅರಮನೆ ಇದೆ. ಭಾಗಶಃ ಕುಸಿತಕ್ಕೊಳಗಾಗಿರುವ ಈ ಮನೆ ಬಹುಪಾಲು ವಿನಾಶದ ಅಂಚಿನಲ್ಲಿದೆ. ಮನೆಯ ಸುತ್ತಲೂ ಕಾಡಿನಿಂದಾವೃತ್ತವಾಗಿದ್ದ ಈ ಮನೆ ಇರುವದು ಯಾರ ಗಮನಕ್ಕೂ ಬಂದಿರಲಿಲ್ಲ. ಇದೀಗ ಗೋಚರವಾಗಿದ್ದು, ಒಂದಷ್ಟು ಕುತೂಹಲ ಕೆರಳಿಸಿದೆ..!

ಸರ್ವೆಯಿಂದ ಪತ್ತೆ..!

ಪ್ರಾಚ್ಯ ವಸ್ತು ಇಲಾಖೆ ವತಿಯಿಂದ ದೇಶವ್ಯಾಪಿ ಪ್ರತಿ ಗ್ರಾಮ ಮಟ್ಟದಲ್ಲಿ ಪುರಾತನ ಕಾಲದ ಕುರುಹುಗಳಿದ್ದಲ್ಲಿ ಪತ್ತೆ ಹಚ್ಚುವ ಸಲುವಾಗಿ ಗ್ರಾಮ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಈ ಸರ್ವೆ ಕಾರ್ಯ ನಡೆಸುತ್ತಿರುವಾಗ ಕಾಂತೂರು - ಮೂರ್ನಾಡಿನಲ್ಲಿ ಕಾಡಿನಿಂದ ಮುಚ್ಚಿಕೊಂಡಿದ್ದ ಹಳೆಯ ಕಟ್ಟಡವೊಂದು ಪತ್ತೆಯಾಗಿದೆ. ಆ ಹಳೆಯ ಕಾಲದ ಮನೆ ಎಲ್ಲವೂ ಕೊಡಗನ್ನಾಳಿದ ರಾಜ ವೀರ ರಾಜೇಂದ್ರನ ಕೊಡುಗೆಯಾಗಿದೆ. ಕೊಡಗು ಜಿಲ್ಲೆಗೆ ಅತಿಕ್ರಮಣಕಾರಿಯಾಗಿ ನುಗ್ಗಿದ ಟಿಪ್ಪು ಸುಲ್ತಾನ್ ವೀರರಾಜೇಂದ್ರನನ್ನು ಬಂಧಿಸಿ, ಮತಾಂತರ ಮಾಡಿ ಪಿರಿಯಾಪಟ್ಟಣದ ಕೋಟೆಯಲ್ಲಿ ಸೆರೆಯಾಗಿರಿಸಿದ್ದ. ಈ ಸಂದರ್ಭದಲ್ಲಿ ಹೊಂಬಾಳೆ ನಾಯಕ ಹಾಗೂ ಇತರರು ರಾಜ, ರಾಜನ ಪತ್ನಿ ಹಾಗೂ ಕುಟುಂಬಸ್ಥರನ್ನು ಪಿರಿಯಾಪಟ್ಟಣದಿಂದ ರಕ್ಷಿಸಿ ಕೊಡಗಿಗೆ ಕರೆತಂದುದಕ್ಕೆ ಕೃತಜ್ಞತಾ ಪೂರಕವಾಗಿ ಕಾಂತೂರಿನಲ್ಲಿ ಎರಡು ಸಾವಿರ ಪಟ್ಟಿ ಭೂಮಿಯನ್ನು ಜಹಗೀರಾಗಿ ರಾಜ ನೀಡಿದರೆಂಬದು ಇತಿಹಾಸದಲ್ಲಿದೆ.

ರಾಜ ಕುಟುಂಬದ ಸೆರೆ..!

ಚೆಂಗಾಳ್ವರಸರು ಮತ್ತು ಹಿಂದಿನ ಮೈಸೂರು ಒಡೆಯರ ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಶವಾದ ಬಳಿಕ ಕೊಡಗನ್ನೂ ಆಕ್ರಮಿಸಿಕೊಂಡು ಆಗಿನ ರಾಜ ವೀರರಾಜೇಂದ್ರ ಹಾಗೂ ಕುಟುಂಬಸ್ಥರನ್ನು ಸೆರೆ ಹಿಡಿದ ಹೈದರಾಲಿಯು ಹಾಸನದ ಗೋರೂರಿನಲ್ಲಿರಿಸಿದ್ದನು. ನಂತರ ಟಿಪ್ಪು ಸುಲ್ತಾನನು

ರಾಜ ಕುಟುಂಬವನ್ನು ಪಿರಿಯಾಪಟ್ಟಣ ಕೋಟೆಯಲ್ಲಿರಿಸಿದನು. ಗೋರೂರಿನಲ್ಲಿದ್ದಾಗ ರಾಜ ಕುಟುಂಬ ಮೇಲ್ವಿಚಾರಕನನ್ನಾಗಿ ಹೈದರಾಲಿಯ ಸೈನ್ಯದಲ್ಲಿ ಚಿಕ್ಕ ಹುದ್ದೆಯಲ್ಲಿದ್ದ ಒಕ್ಕಲಿಗರ ಹೊಂಬಾಳೆ ನಾಯಕನನ್ನು ನೇಮಿಸಿದ್ದನು. ಪಿರಿಯಾಪಟ್ಟಣಕ್ಕೆ ವರ್ಗಾಯಿಸಿದಾಗಲೂ ಹೊಂಬಾಳೆ ನಾಯಕನನ್ನೇ ನೇಮಿಸಲಾಗಿತ್ತು.

ರಾಜರ ಮತಾಂತರ..!

ಪಿರಿಯಾಪಟ್ಟಣ ಕೋಟೆಯೊಳಗಡೆ ರಾಜ ಕುಟುಂಬಸ್ಥರು ಒಂದು ಸಣ್ಣ ಮನೆಯಲ್ಲಿ ಸೆರೆಯಾಗಿದ್ದರು. ವಶದಲ್ಲಿದ್ದಾಗ ಟಿಪ್ಪು ಸುಲ್ತಾನನು ವೀರ ರಾಜೇಂದ್ರನನ್ನು ಮುಸಲ್ಮಾನ ಮತಕ್ಕೆ ಮತಾಂತರ ಗೊಳಿಸಿದನೆಂದೂ, ವೀರರಾಜೇಂದ್ರನ ದೊಡ್ಡ ತಂದೆ ಅಪ್ಪಾಜಿ ರಾಜನ ಓರ್ವ ಪುತ್ರಿ ದೇವಮ್ಮಾಜಿ ಮತ್ತು ಆತನ ತಂಗಿ ನೀಲಮ್ಮಾಜಿಯನ್ನು ತನ್ನ ಜನಾನಾ ಸೇರಿಸಿದ್ದನೆಂದು ಚರಿತ್ರೆಕಾರರು ಬರೆದಿದ್ದಾರೆ. ಈ ಎಲ್ಲ ಕಾರಣದಿಂದ ರಾಜನು ಅಲ್ಲಿಂದ ತಪ್ಪಿಸಿಕೊಂಡು ಕೊಡಗಿಗೆ ಬರಬೇಕೆಂಬ

(ಮೊದಲ ಪುಟದಿಂದ) ಹಂಬಲದಲ್ಲಿದ್ದನು. ಇದೇ ಸಂದರ್ಭದಲ್ಲಿ ಎಣ್ಣೆ ಮಾರುವವರ ವೇಷದಲ್ಲಿ ಪಿರಿಯಾಪಟ್ಟಣಕ್ಕೆ ಬಂದ ಕೊಡಗಿನ ಕೆಲವು ಜನರು ಹಾಗೂ ಹೊಂಬಾಳೆ ನಾಯಕರು ರಾಜನ ರಕ್ಷಣೆಗೆ ತಂತ್ರ ರೂಪಿಸಿದರು..!

ಚಳಿಗಾಲದಲ್ಲಿ ತಂತ್ರ..!

ವೀರ ರಾಜೇಂದ್ರರರ ಮೇಲುಸ್ತುವಾರಿಯಲ್ಲಿದ್ದ ಹೊಂಬಾಳೆ ನಾಯಕರಿಗೆ ರಾಜನನ್ನು ಮತಾಂತರಗೊಳಿಸಿರುವದು, ತಂಗಿಯರನ್ನು ಜನಾನಾಕ್ಕೆ ಸೇರಿಸಿದ್ದುದನ್ನು ನೋಡಿ ಸುಲ್ತಾನನ ಮೇಲೆ ಧ್ವೇಷವುಂಟಾಯಿತು. ರಾಜನ ಮೇಲೆ ಸಹಾನುಭೂತಿಯೊಂದಿಗೆ ರಾಜನನ್ನು ರಕ್ಷಿಸಲು ತೀರ್ಮಾನಿಸಿದರು. ಇವರಿಗೆ ನಾಯಕರ ಆಪ್ತ ಗೆಳೆಯನಾಗಿದ್ದ, ಸುಲ್ತಾನನ ಮೇಲೆ ಧ್ವೇಷ ಹೊಂದಿದ್ದ ಇಸ್ಮಾಯಿಲ್ ಖಾನ್ ಕೂಡ ಜೊತೆಯಾದರು. ಇದರೊಂದಿಗೆ ರಾಜನನ್ನು ಬಿಡಿಸಿಕೊಂಡು ಹೋಗಲು ಮಾರು ವೇಷದಲ್ಲಿ ಕೊಡಗಿನ ಜನರು ಬಂದಿರುವದು ತಿಳಿದ ಬಳಿಕ ಎಲ್ಲರೂ ಗುಟ್ಟಾಗಿ ಸೇರಿ ತಂತ್ರ ರೂಪಿಸಿದರು. ಡಿಸೆಂಬರ್ ತಿಂಗಳು ತೀರಾ ಚಳಿಗಾಲವಾದ್ದರಿಂದ ಆ ಸಂದರ್ಭದಲ್ಲಿ ಎಲ್ಲರೂ ಬೇಗನೇ ಬೆಚ್ಚಗೆ ಮಲಗುವದರಿಂದ ಡಿಸೆಂಬರ್ ಮೊದಲ ವಾರದಲ್ಲಿ ಕೋಟೆಯಿಂದ ಹೊರಗೆ ದಾಟಿಸುವ ಬಗ್ಗೆ ನಿಶ್ಚಯ ಮಾಡಿದರು..!

ರೋಮಾಂಚಕ ಕಥನ..!

ರಾಜ ವೀರರಾಜೇಂದ್ರ ಹಾಗೂ ಅಳಿದುಳಿದ ಕುಟುಂಬದವರನ್ನು ಪಿರಿಯಾಪಟ್ಟಣ ಕೋಟೆಯಿಂದ ರಕ್ಷಿಸಿ ಕೊಡಗಿಗೆ ಕರೆತಂದದ್ದು ಒಂದು ರೋಮಾಂಚನಕಾರಿ ಕಥನ. ಅದು ಕ್ರಿ.ಶ. ೧೭೮೮ನೇ ಡಿಸೆಂಬರ್ ತಿಂಗಳ ಹದಿನಾಲ್ಕನೇ ದಿವಸ ಮಧ್ಯರಾತ್ರಿ.., ಹೊಂಬಾಳೆ ನಾಯಕರು ರಾಜನಿದ್ದ ಮನೆಯಲ್ಲಿ ವಿಶೇಷ ಊಟೋಪಚಾರ ಮಾಡಿಸಿ ಅಲ್ಲಿ ಕಾವಲಿದ್ದ ಸಿಬ್ಬಂದಿಗಳಿಗೆ ಅಮಲು ಬರುವ ಪದಾರ್ಥವನ್ನು ಮದ್ಯದಲ್ಲಿ ಬೆರೆಸಿ ಅವರು ನಿದ್ದೆಗೆ ಜಾರುವಂತೆ ಮಾಡುತ್ತಾರೆ. ಇತ್ತ ಇಸ್ಮಾಯಿಲ್ ಖಾನ್ ಕೂಡ ಕೋಟೆಯ ಹೊರಗಡೆ ಪಹರೆಯಲ್ಲಿದ್ದವರಿಗೆ ಅದೇ ರೀತಿ ಮಾಡಿದ್ದರು. ಕಗ್ಗತ್ತಲೆಯಲ್ಲಿ ಮೊದಲೇ ಮಾಡಿದ ತಂತ್ರದAತೆ ಕೋಟೆಯ ಗೋಡೆಯನ್ನೇರಿದರು. ರಾಜನು ತನ್ನ ಪತ್ನಿ ನಂಜಮ್ಮಾಜಿಯನ್ನು ಹೊತ್ತುಕೊಂಡರೆ, ಹೊಂಬಾಳೆ ನಾಯಕರು ರಾಜನ ಸಹೋದರ ಹತ್ತು ವರ್ಷದ ಲಿಂಗರಾಜನನ್ನು ಹೊತ್ತುಕೊಂಡಿದ್ದರು. ರಾಜನ ಎಂಟು ತಿಂಗಳ ಮಗಳು ರಾಜಮ್ಮಾಜಿಯನ್ನು ಸಹೋದರ ಅಪ್ಪಾಜಿರಾಜ ಎತ್ತಿಕೊಂಡಿದ್ದನು. ಕೋಟೆಯಿಂದ ಇಳಿದ ಬಳಿಕ ಕೊಡಗಿನಿಂದ ವ್ಯಾಪಾರದ ಸೋಗಿನಲ್ಲಿ ಬಂದಿದ್ದವರ ಬಳಿಯಿದ್ದ ದೊಡ್ಡದಾದ ಕುಕ್ಕೆಗಳಲ್ಲಿ ರಾಜ ಕುಟುಂಬದವರನ್ನು ಕುಳ್ಳಿರಿಸಿ ಹೊತ್ತು ನಡೆಯಲಾರಂಭಿಸಿದರು.

೨೦ ವರ್ಷದ ಹಿಂದಿನವರೆಗೆ ಇದ್ದರು..!

ಈ ಮನೆಯಲ್ಲಿ ಹೊಂಬಾಳೆ ನಾಯಕರ ಕಾಲಾನಂತರ ಅವರ ಪೀಳಿಗೆಯವರು ವಾಸ ಮುಂದುವರಿಸಿದ್ದಾರೆ. ಈಗಲೂ ಸುತ್ತಮುತ್ತಲಿನಲ್ಲಿ ಕೆರೆಮನೆಯವರು ವಾಸವಿದ್ದಾರೆ. ಪಾಳು ಬಿದ್ದಿರುವ ಈ ಪುರಾತನ ಮನೆಯಲ್ಲಿ ಕಳೆದ ೨೦ ವರ್ಷಗಳವರೆಗೂ ವಾಸವಿದ್ದರೆಂದು ಹೇಳಲಾಗುತ್ತಿದೆ. ‘ಇದು ನಮ್ಮ ವಂಶಸ್ತರಿಗೆ ಸೇರಿದ್ದಾಗಿದ್ದು, ಇಲ್ಲ ಹೊಂಬಾಳೆ ನಾಯಕರ ಕಾಲದಿಂದಲೇ ವಾಸವಿದ್ದರು. ಕಳೆದ ೨೦ ವರ್ಷಗಳ ಹಿಂದಿನವರೆಗೂ ನಮ್ಮ ದೊಡ್ಡಪ್ಪ, ದೊಡ್ಡಮ್ಮನವರು ವಾಸ ಇದ್ದರು. ಅವರುಗಳು ತೀರಿಕೊಂಡ ಬಳಿಕ ಅಲ್ಲಿ ಯಾರೂ ನೆಲೆಸದ್ದರಿಂದ ಪಾಳು ಬಿದ್ದಿದೆ. ಜಾಗವನ್ನೂ ಹಾಗೇ ಬಿಡಲಾಗಿದೆ.’ ಎಂದು ಪಕ್ಕದಲ್ಲೇ ವಾಸವಿರುವ ಕೆರೆಮನೆ ಪ್ರತಾಪ್ ಹೇಳುತ್ತಾರೆ.

ಕೇಂದ್ರ ಕಚೇರಿಗೆ ಮಾಹಿತಿ..!

‘ಇಲಾಖೆ ವತಿಯಿಂದ ಪ್ರಾಚೀನ ಕುರುಹುಗಳ ಪತ್ತೆ ಹಚ್ಚುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಸರ್ವೆ ಮಾಡಲಾಗಿತ್ತು. ಈ ಸಂದರ್ಭ ಕಾಂತೂರಿನಲ್ಲಿ ಒಂದು ಮನೆ ಪತ್ತೆಯಾಗಿದೆ. ಈ ತಿಂಗಳ ಕೊನೆಯ ವರೆಗೆ ಸರ್ವೆ ನಡೆಯಲಿದ್ದು, ಪತ್ತೆಯಾದ ಪ್ರಾಚೀನ ಕುರುಹುಗಳ ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗುವದು. ಕೇಂದ್ರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವದು’

-ರೇಖಾ, ಕ್ಯೂರೇಟರ್, ಪುರಾತತ್ವ ಇಲಾಖೆ

ಅಪ್ಪಣೆ ಪಾಲಿಸಲಿಲ್ಲ..! : ಎಲ್ಲರೂ ವೇಗವಾಗಿ ನಡೆಯುತ್ತಿದ್ದರು. ಖಾನ್ ಬಟ್ಟೆಯಲ್ಲಿ ಸುತ್ತಿದ್ದ ಮಗುವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ನಡೆಯುತ್ತಿದ್ದರು. ಪಿರಿಯಾಪಟ್ಟಣ ದಾಟಿ ಕೊಡಗಿನ ದಕ್ಷಿಣ ದಿಕ್ಕಿನ ದುರ್ಗಮ ಅರಣ್ಯದ ಹಾದಿಯಲ್ಲಿ ನಡೆದು ಬೆಳಗಾಗುವದರೊಳಗಡೆ ಕೊಡಗಿನ ಗಡಿಯನ್ನು ತಲಪಿದರು. ಅಷ್ಟರಲ್ಲಿ ರಾಣಿ ನಂಜಮ್ಮಾಜಿಗೆ ಆಯಾಸ ಹಾಗೂ ಮಗು ಇಲ್ಲವೆಂಬ ದುಖದಿಂದಾಗಿ ಜ್ವರ ಕಾಣಿಸಿಕೊಂಡಿತು. ಎದೆಯಲ್ಲಿ ಹಾಲು ತುಂಬಿಕೊAಡು ನೋವು ಆವರಿಸಿಕೊಂಡಿತು. ಮಗುವಿನ ಯೋಚನೆ ಹೆಚ್ಚಾಗಿ ಪತಿಯೊಂದಿಗೆ ‘ನನ್ನ ಮುದ್ದು ಮಗುವನ್ನು ಕೊಲ್ಲಿಸಿಬಿಟ್ಟಿರಲ್ಲ, ಅವಳು ಹೋದ ಮೇಲೆ ನನಗೂ ಈ ಪ್ರಾಣ ಬೇಡ, ನಾನೂ ವಿಷ ಕುಡಿದು ಸತ್ತುಬಿಡುತ್ತೇನೆ., ಸಾಯುವ ಮೊದಲು ನನಗೆ ಅವಳ ಮೃತ ಶರೀರವನ್ನಾದರೂ ತೋರಿಸಿ’ ಎಂದು ಗೋಳಾಡಿದರು. ರಾಜನಿಗೂ ದುಃಖವಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ನಾಯಕರು ಹಾಗೂ ಖಾನ್‌ರನ್ನು ಕರೆದು ‘ಮಗುವನ್ನು ಎಲ್ಲಿ ಕತ್ತರಿಸಿ ಹಾಕಿದಿರಿ..?’ ಎಂದು ಕೇಳಿದನು.

ಪ್ರತಿಕ್ರಿಯಿಸಿದ ಹೊಂಬಾಳೆ ನಾಯಕರು; ‘ಒಡೆಯರೇ ನಮ್ಮನ್ನು ಕ್ಷಮಿಸಬೇಕು., ನಾವು ನಿಮ್ಮ ಅಪ್ಪಣೆಯನ್ನು ಪಾಲಿಸಲಿಲ್ಲ..’ ಎಂದು ಹೇಳುತ್ತಾರೆ. ಅಚ್ಚರಿಗೊಂಡ ರಾಜರು ‘ಏನು ಮಗುವನ್ನು ಕೊಲ್ಲಲಿಲ್ಲವೇ..? ಹಾಗಾದರೆ ಅದನ್ನು ಏನು ಮಾಡಿದಿರಿ..?’ ಎಂದು ಪ್ರಶ್ನಿಸಿದರು. ‘ಒಡೆಯರೇ ಸಮಾಧಾನ ಪಟ್ಟುಕೊಳ್ಳಿ, ನಾನೂ ನಾಯಕರು ಯೋಚನೆ ಮಾಡಿ ಮಗುವಿಗೆ ಸ್ವಲ್ಪ ಅಫೀಮು ಕೊಟ್ಟು ನಿದ್ದೆ ಮಾಡಿಸಿದೆವು. ಈಗಲೂ ನಿದ್ದೆಯಲ್ಲಿದೆ..’ ಎಂದು ಖಾನ್ ಹೇಳಿದಾಗ ರಾಣಿ ನಂಜಮ್ಮಾಜಿಗೆ ಮತ್ತೆ ಜೀವ ಬಂದAತಾಯಿತು..!

ಉಪಕಾರ ಸ್ಮರಣೆ..! : ಮಗು ಬದುಕಿರುವ ವಿಚಾರ ತಿಳಿದಾಕ್ಷಣ ಆಶ್ಚರ್ಯದಿಂದ ‘ಏನು..? ಮಗು ಇಲ್ಲಿದೆಯೇ..?’ ಎಂದು ಹೇಳುವಷ್ಟರಲ್ಲಿ ರಾಣಿ ನಂಜಮ್ಮಾಜಿ ಉದ್ವೇಗದಿಂದ ‘ನಾಯಕರೇ., ನನ್ನ ಕಂದಮ್ಮನನ್ನು ನಾನು ನೋಡಬೇಕು, ತೆಗೆದುಕೊಂಡು ಬನ್ನಿ, ಖಾನ್ ಸಾಹೇಬರೇ ಮಗುವನ್ನು ಕೊಡಿ’ ಎಂದು ಗಟ್ಟಿಯಾಗಿ ಕೂಗಿಕೊಂಡರು. ಇಸ್ಮಾಯಿಲ್ ಖಾನ್ ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿಟ್ಟಿದ್ದ ಮಗುವನ್ನು ರಾಜನ ಕೈಗೆ ಕೊಟ್ಟರು. ಮಗುವಿಗೆ ಅಫೀಮಿನ ಮಂಕು ಬಿಟ್ಟಿರಲಿಲ್ಲ. ರಾಜನ ಕೈಗೆ ಮಗು ಬಂದೊಡನೆ ರಾಣಿಯು ಆತುರದಿಂದ ಕಿತ್ತುಕೊಂಡು ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಮಗುವಿಗೆ ಹಾಲುಣಿಸಿದರು. ಹಾಲು ಕುಡಿಯುತ್ತಾ ಮಗು ಚೇತರಿಸಿಕೊಂಡು ಅಳುವದಕ್ಕೆ ಶುರು ಮಾಡಿತು. ಅಲ್ಲಿದ್ದವರಿಗೆಲ್ಲ ಸಂತೋಷವಾಯಿತು. ಸಂತೋಷದ ಭರದಲ್ಲಿ ರಾಣಿಯು ರಾಜನಲ್ಲಿ ‘ ಅಣ್ಣ ಹೊಂಬಾಳೆ ನಾಯಕರು ಹಾಗೂ ಅಣ್ಣ ಇಸ್ಮಾಯಿಲ್ ಖಾನ್‌ರ ಉಪಕಾರವನ್ನು ನಾವು ಜೀವವಿರುವವರೆಗೆ ಮರೆಯುವಂತಿಲ್ಲ, ನೀವು ನಿಮ್ಮ ರಾಜ್ಯವನ್ನು ಮತ್ತೆ ಗೆದ್ದುಕೊಂಡ ಮೇಲೆ ಇವರಿಬ್ಬರಿಗೆ ದೊಡ್ಡ ಅಧಿಕಾರ ಕೊಡಬೇಕು, ಮತ್ತು ಭೂಮಿಯನ್ನು ಜಹಗೀರಾಗಿ ಕೊಡಬೇಕು’ ಎಂದು ಭಿನ್ನವಿಸಿಕೊಂಡರು. ‘ಇವರಿಬ್ಬರೂ ನನ್ನ ಒಡ ಹುಟ್ಟಿದವರ ಹಾಗೆ. ಇವರಿಗೆ ಏನು ಕೊಟ್ಟರೂ ಇವರು ನಮಗೆ ಮಾಡಿದ ಉಪಕಾರಕ್ಕೆ ಅದು ಸ್ವಲ್ಪವೇ ಸರಿ. ನನ್ನ ರಾಜ್ಯವನ್ನು ಸುಲ್ತಾನನ ಅಧಿಕಾರದಿಂದ ಕಿತ್ತುಕೊಂಡ ಬಳಿಕ ಇವರಿಗೆ ಅಧಿಕಾರ ಸ್ಥಾನಗಳನ್ನೂ, ಜಹಗೀರಾಗಿ ಭೂಮಿಯನ್ನು ಕೊಡುವೆನು’ ಎಂದು ರಾಜ ಭರವಸೆ ನೀಡುತ್ತಾರೆ.

ಎರಡು ಸಾವಿರ ಪಟ್ಟಿ ಭೂಮಿ..!

ಕಾಡು, ಹೊಳೆಗಳನ್ನು ದಾಟಿ ರಾಜನ ಪರಿವಾರದವರು ಶ್ರೀಮಂಗಲ ನಾಡಿನ ಕುರ್ಚಿ ಗ್ರಾಮಕ್ಕೆ ಬಂದು ತಲಪುತ್ತಾರೆ. ನಂತರದಲ್ಲಿ ಟಿಪ್ಪು ಸುಲ್ತಾನನಿಂದ ಕೊಡಗನ್ನು ಬಿಡಿಸಿ ರಾಜ್ಯವನ್ನು ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಪಿರಿಯಾಪಟ್ಟಣದಿಂದ ತಾನು ಹಾಗೂ ಪರಿವಾರದವರು ತಪ್ಪಿಸಿಕೊಂಡು ಬರಲು ಸಹಕರಿಸಿದ ಹಾಗೂ ಮಗುವನ್ನು ಕೊಲ್ಲದೆ ರಕ್ಷಿಸಿದ ಕಾರಣಕ್ಕಾಗಿ ಹೊಂಬಾಳೆ ನಾಯಕರು ಹಾಗೂ ಇಸ್ಮಾಯಿಲ್ ಖಾನ್‌ಗೆ ಭೂಮಿಯನ್ನು ಜಹಗೀರಾಗಿ ನೀಡಿದನು. ನಾಯಕರಿಗೆ ಕಾಂತೂರು ಮೂರ್ನಾಡಿನಲ್ಲಿ ಎರಡು ಸಾವಿರ ಪಟ್ಟಿ ಭೂಮಿಯನ್ನು ಜಹಗೀರಾಗಿ ನೀಡಿ ನಾಯಕರನ್ನು ತನ್ನ ಓರ್ವ ದೀವಾನನಾಗಿ ಮಾಡಿದನು. ಈ ಭೂಮಿಯನ್ನು ಪುತ್ರ ಪೌತ್ರ ಪಾರಂಪರ್ಯವಾಗಿ ಕೊಡಲ್ಪಟ್ಟದ್ದರಿಂದ ಇಂದಿಗೂ ಹೊಂಬಾಳೆ ನಾಯಕರ ಏಳನೇ ಪೀಳಿಗೆಯವರು(ಕೆರೆಮನೆಯವರು) ಅನುಭವಿಸಿಕೊಂಡು ಬರುತ್ತಿದ್ದಾರೆ.

ಕಟ್ಟಿಸಿದವರ ಮಾಹಿತಿಯಿಲ್ಲ..!

ಕಾಲ ಕ್ರಮೇಣ ಮನೆಯ ಉಸ್ತುವಾರಿ ಇಲ್ಲದೆ ಕಾಡು ಪಾಲಾದ ಬಳಿಕ ಈ ಅರಮನೆ ಪ್ರೇಮಿಗಳಿಗೆ ‘ಆಲಯ’ವಾಗಿ ಮಾರ್ಪಟ್ಟಿರುವದನ್ನು ಗೋಡೆ ಮೆಲಿನ ಬರಹಗಳೇ ಹೇಳುತ್ತವೆ. ಪ್ರೀತಿಯನ್ನು ಹೊರ ಸೂಸುವ ಚಿತ್ರಗಳೊಂದಿಗೆ ಹೆಸರುಗಳನ್ನೂ ಬರೆಯಲಾಗಿದೆ. ಅದರಲ್ಲೂ ‘ಅಜರು’ ಎಂಬ ಹೆಸರು ಹಲವಾರು ಕಡೆಗಳಲ್ಲಿ ಕಾಣ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದ್ವಾರ ಪಟ್ಟಿಯಲ್ಲಿ ‘ವೆಲ್‌ಕಂ ಟು ಅಜರು ಕಾಟೇಜ್’ ಅಂತ ಬರೆದು ಮನೆಯನ್ನು ಕಾಟೇಜನ್ನಾಗಿ ಮಾಡಿಕೊಂಡಿದ್ದಾನೆ..!ಎAಬ ಹೆಂಚಿನ ಕಾರ್ಖಾನೆ ಸ್ಥಾಪಿಸಿ ಆ ಮೂಲಕ ಈ ಮನೆಗೆ ಹೆಂಚಿನ ಸ್ವರೂಪ ನೀಡಲಾಗಿರಬಹುದೆಂದು ಹೇಳಬಹುದು.

ಆಕರ್ಷಕ ವಿನ್ಯಾಸ..!

ಮನೆಯೂ ಪುಟ್ಟ ಅರಮನೆಯಂತೆ ಗೋಚರಿಸುತ್ತಿದ್ದು, ವಿನ್ಯಾಸ ಕೂಡ ಆಕರ್ಷಕವಾಗಿದೆ. ಗೋಡೆ., ದೊಡ್ಡ ಗಾತ್ರದ ಕಿಟಕಿ, ಬಾಗಿಲ ಕಟ್ಟಳೆಗಳಲ್ಲಿನ ಕೆತ್ತನೆಗಳು( ಬಾಗಿಲುಗಳು ಇಲ್ಲವಾಗಿವೆ) ಕಂಬಗಳು., ಕಂಬಗಳ ಮೇಲಿನ ಕೆತ್ತನೆಗಳು ಗಮನ ಸೆಳೆಯುತ್ತವೆ. ಕೆಲವು ಕಂಬಗಳು ಮುರಿದು ಬಿದ್ದಿವೆ. ಮನೆಯೊಳಗಿನ ಕಂಬಗಳಲ್ಲಿನ ಮೇಲ್ಭಾಗದಲ್ಲಿ ಲಕ್ಷಿö್ಮ, ಆಂಜನೇಯ, ಗಣಪತಿ ದೇವರುಗಳ ಕೆತ್ತನೆಗಳು ಇಂದಿಗೂ ಜೀವಂತಿಕೆಯನ್ನು ತೋರ್ಪಡಿಸುತ್ತವೆ.

ನಂದಿ ಕಂಬ - ತೊಟ್ಟಿ..!

ಅರಮನೆಯ ಎದುರಿರುವ ಅಂಗಳದಲ್ಲಿ ನಂದಿ ವಿಗ್ರಹಗಳಿರುವ ಮೂರು ಕಲ್ಲು ಕಂಬಗಳಿವೆ. ಪಕ್ಕದಲ್ಲಿ ತುಳಸಿ ಕಟ್ಟೆಯೊಂದಿದೆ. ಎದುರಿಗೆ ರಸ್ತೆಗೆ ಹೊಂದಿಕೊAಡAತೆ ತೆರಳಲು ಮೆಟ್ಟಿಲುಗಳಿವೆ. ಇದರ ಸನಿಹದಲ್ಲೇ ಒಂದು ಮೂಲೆಯಲ್ಲಿ ಏಕಶಿಲೆಯಿಂದ ಮಾಡಿರುವ ದೊಡ್ಡ ನೀರಿನ ತೊಟ್ಟಿಯೊಂದಿದೆ. ಮೇಲ್ನೋಟಕ್ಕೆ ಇದು ಕುದುರೆಗಳಿಗೆ ನೀರು ಕುಡಿಯಲು ಮಾಡಿರಬಹುದೆಂದು ಕಂಡುಬರುತ್ತದೆ. ಹಾಗಾಗಿ ಈ ಮನೆ ರಾಜರ ಕಾಲದಲ್ಲಿ ದೊಡ್ಡ ಹುದ್ದೆಯಲ್ಲಿರುವವರಿಗಾಗಿ ನಿರ್ಮಿಸಿರಬಹುದೆಂಬದು ವೇದ್ಯವಾಗುತ್ತದೆ.

ನೆಲೆಸಿದ್ದಕ್ಕೆ ಕುರುಹುಗಳು..!

ಬಹಳ ಹಳೆಯದಾದ ಈ ಮನೆಯನ್ನು ಆಗಾಗ್ಗೆ ನವೀಕರಿಸುತ್ತಾ ಬಳಕೆ ಮಾಡಿಕೊಂಡು ಬಂದಿರುವದಕ್ಕೆ ಕುರುಹುಗಳು ಕಾಣಬರುತ್ತವೆ. ಮನೆಯ ಕೆಳ ಅಂತಸ್ತಿನಲ್ಲಿ ಆರು ಮತ್ತು ಮೇಲಿನ ಅಂತಸ್ತಿನಲ್ಲಿ ಐದು ಕೊಠಡಿಗಳಿವೆ. ಮೇಲಿನ ಅಂತಸ್ತಿಗೆ ಹೋಗಲು ಕೆಳಗಡೆಯಿಂದ ಎರಡು ಕಡೆಗಳಿಂದ ಏಣಿ ಇದ್ದಿತ್ತಾದರೂ ಅದು ಈಗ ಮಾಯವಾಗಿದೆ. ಕೋಣೆಗಳಲ್ಲಿ ಕ್ಯಾಲೆಂಡರ್‌ಗಳನ್ನು ನೇತು ಹಾಕಿರುವದು, ಕಿಟಕಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಬಳಿಕ ಅದನ್ನು ಕಿತ್ತಿರುವದು ಕಾಣಬಹುದಾಗಿದೆ. ಅಲ್ಲದೆ ಈ ಮನೆಯಲ್ಲಿ ಈ ಹಿಂದಿನಿAದಲೂ ದೊಡ್ಡ ಸಂಸಾರ ವಾಸವಿದ್ದಿತ್ತೆಂಬದಕ್ಕೆ ವಿಶಾಲವಾದ ಅಡುಗೆ ಮನೆ ಸಾಕ್ಷಿಯಾಗಿದೆ. ನೆಲದಲ್ಲಿ ಹಾಕಲಾಗಿರುವ ಮಣ್ಣಿನ ಒಲೆಗಳು ಹಿಂದಿನ ಕಾಲದ ನೆನಪನ್ನು ಮೂಡಿಸುತ್ತದೆ.

ವಿದ್ಯಾರ್ಥಿಗಳಿಂದ ಶ್ರಮದಾನ

ಕಾಂತೂರಿನಲ್ಲಿ ಪ್ರಾಚೀನ ಕಾಲದ ಮನೆ ಇರುವದು ಪತ್ತೆಯಾದ ಬಳಿಕ ಪುರಾತತ್ವ ಇಲಾಖೆಯ ಕ್ಯೂರೇಟರ್ ರೇಖಾ ಅವರ ಸೂಚನೆಯಂತೆ ಮೂರ್ನಾಡು ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸುತ್ತಲಿನ ಕಾಡು ಕಡಿದು ಸ್ವಚ್ಛಗೊಳಿಸಿದ್ದಾರೆ. ಹಾಗಾಗಿ ಇಲ್ಲೊಂದು ಅರಮನೆ ಇರುವದು ಬೆಳಕಿಗೆ ಬಂದಿದೆ.

ಈ ಪ್ರಾಚೀನ ಅರಮನೆಯನ್ನು ಸಂರಕ್ಷಿಸಿ ಈಗಿರುವ ವಿನ್ಯಾಸದಂತೆ ನವೀಕರಿಸಿದರೆ ರೋಮಾಂಚನಕಾರಿ ಇತಿಹಾಸ ಇರುವ ಒಂದು ಸ್ಮಾರಕವನ್ನು ಉಳಿಸಿಕೊಳ್ಳಬಹುದಾಗಿದೆ.

ರಾಜನು ನೀಡಿದ ಭೂಮಿಯಲ್ಲಿ ಇಂದಿಗೂ ಹೊಂಬಾಳೆ ನಾಯಕರ ಪೀಳಿಗೆಯವರು ವಾಸ ಮಾಡಿಕೊಂಡಿದ್ದು, ಕಾಫಿ, ಭತ್ತ ಬೆಳೆಯುತ್ತಾ ಕೃಷಿಯನ್ನು ಮುಂದುವರಿಸಿಕೊAಡು ಹೋಗುತ್ತಿದ್ದಾರೆ. ಆದರೆ, ಪುರಾತನ ಕಾಲದ ಮನೆಯನ್ನು ಉಳಿಸಿಕೊಂಡಿದ್ದು, ಮನೆಯ ಸುತ್ತಲೂ ಇರುವ ಒಂದಷ್ಟಗಲ ಜಾಗವನ್ನು ಬಳಸಿಕೊಳ್ಳದೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ಈ ಮನೆ ಕಾಡುಪಾಲಾಗಿ ಶಿಥಿಲಾವಸ್ಥೆಗೆ ತಲಪಿದೆ. ಕ್ರಿ.ಶ.೧೭೮೮ರಲ್ಲಿ ರಾಜ ತಪ್ಪಿಸಿಕೊಂಡು ಬಂದ ಬಳಿಕ ನೀಡಿದ ಜಾಗದಲ್ಲಿ ಮನೆ ನಿರ್ಮಾಣವಾಗಿರಬಹುದೆಂದು ಹೇಳಲಾಗುತ್ತಿದ್ದು, ಅಧಿಕೃತವಾದ ವರ್ಷ, ದಿನಾಂಕ ತಿಳಿದು ಬರುತ್ತಿಲ್ಲ. ಮನೆ ಕಟ್ಟಿಸಿದವರ ಮಾಹಿತಿ ಇಲ್ಲ..!

‘ಮರ್ಕರ ಪಾಟರಿ’ಯ ಹೆಂಚು..!

ಈ ಮನೆಗೆ ಅಳವಡಿಸಲಾಗಿರುವ ಹೆಂಚಿನಲ್ಲಿ ‘ಮರ್ಕರ ಪಾಟರಿ - ೧೮೮೬’ ಎಂದು ಮುದ್ರಿತವಾಗಿದೆ. ಇದರಿಂದಾಗಿ ಆ ಸಮಯದಲ್ಲಿ ನಿರ್ಮಿಸಿರಬಹುದೆಂದು ಹೇಳ ಬಹುದಾದರೂ ಆ ಸಂದರ್ಭದಲ್ಲಿ ಕೊಡಗಿನಲ್ಲಿ ರಾಜರ ಆಳ್ವಿಕೆ ಇರಲಿಲ್ಲ. ರಾಜರ ಆಳ್ವಿಕೆ ಕೊನೆಗೊಂಡು ಬ್ರಿಟೀಷರು ಕೊಡಗನ್ನು ಅತಿಕ್ರಮಿಸಿಕೊಂಡಿದ್ದರು. ೧೮೩೪ರ ಏಪ್ರಿಲ್‌ನಿಂದ ೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿವರೆಗೆ ಬ್ರಿಟೀಷರ ಆಳ್ವಿಕೆಯಿತ್ತು. ಹಾಗಾಗಿ ಈ ಮನೆಯನ್ನು ರಾಜರ ಕಾಲದಲ್ಲಿಯೇ ನಿರ್ಮಿಸಿದೆಂದು ಹೇಳಬಹುದಾಗಿದೆ. ಆಗಿನ ಕಾಲದಲ್ಲಿ ಕೊಡಗಿನಲ್ಲಿ ಬಹುತೇಕ ಹುಲ್ಲಿನ ಮನೆಗಳೆ ಇದ್ದುದರಿಂದ ಇದೂ ಹುಲ್ಲಿನ ಮನೆಯಾಗಿದ್ದಿರಬಹುದು. ಬ್ರಿಟೀಷರು ಕಾಲಿಟ್ಟ ಬಳ�