ಮಡಿಕೇರಿ, ಫೆ. ೫: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ನಾಗರಿಕ ಸೌಲಭ್ಯದ ನಿವೇಶನಗಳನ್ನು ೩೦ ವರ್ಷದ ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯದ ನಿವೇಶನ ಹಂಚಿಕೆ) ನಿಯಮಗಳು ೧೯೯೧ರ ರೀತಿಯಲ್ಲಿ ಇದನ್ನು ಹಂಚಿಕೆ ಮಾಡಲಾಗುವುದು. ನಿಗದಿಪಡಿಸಿದ ಗುತ್ತಿಗೆ ಮೊತ್ತಕ್ಕೆ ಇದರ ಹಂಚಿಕೆಯಾಗಲಿದ್ದು, ಇದಕ್ಕಾಗಿ ಆಸಕ್ತ ಅರ್ಹ ಸಂಘ- ಸಂಸ್ಥೆ, ಸರಕಾರಿ, ಅರೆ ಸರಕಾರಿ ಸಂಸ್ಥೆಗಳಿAದ ನಿಬಂಧನೆಗೊಳಪಟ್ಟು ಅರ್ಜಿ ಆಹ್ವಾನಿಸಲಾಗಿದ್ದು, ೧೫ ದಿವಸಗಳ ಒಳಗೆ ಈ ಅವಕಾಶ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಬಡಾವಣೆಯ ವಿವರ : ನಗರದ ಮಹದೇವಪೇಟೆಯ ಎ.ವಿ. ಸ್ಕೂಲ್ ಹತ್ತಿರದ ಮಂಜುಳಮ್ಮ ಬಡಾವಣೆ (ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆ)
(ಮೊದಲ ಪುಟದಿಂದ) ಕರ್ಣಂಗೇರಿ ಗ್ರಾಮ ಇಲ್ಲಿ ಒಟ್ಟು ೫.೫೮ ಎಕರೆ ಜಾಗವಿದ್ದು, ಇದನ್ನು ಡಿಸ್ಪೆನ್ಸರಿ/ ಆರೋಗ್ಯ ಸೌಲಭ್ಯ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ. ಕೆ. ಬಾಡಗ ಗ್ರಾಮದ ಬಿ.ಜಿ. ಚಂಗಪ್ಪ (ಹಿಮವನ) ಬಡಾವಣೆಯಲ್ಲಿ ಒಟ್ಟು ೧೦.೧೦ ಎಕರೆಯನ್ನು ಪ್ರಾದೇಶಿಕ ಕಚೇರಿ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಇದರೊಂದಿಗೆ ಕೆ. ಬಾಡಗ ಗ್ರಾಮದಲ್ಲಿ ಕೆ.ಎಂ. ಲಕ್ಷಿö್ಮ ನಾರಾಯಣ ಮತ್ತು ಶಾಂತಿ ಅವರಿಂದ ಅಧಿಕಾರ ಪತ್ರ ಪಡೆದ ಕೇಶವ ಪ್ರಸಾದ್ ಮುಳಿಯ (ಸ್ಟಟಿಕ) ಬಡಾವಣೆಯಲ್ಲಿ ೩.೧೫ ಎಕರೆ ವಿಸ್ತೀರ್ಣದ ಜಾಗವಿದ್ದು, ಇದು ಕೂಡ ಪ್ರಾದೇಶಿಕ ಕಚೇರಿ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ.
ಯಾವುದೇ ಸರಕಾರಿ ಇಲಾಖೆಗಳಿಗೆ ನಿವೇಶನಗಳು ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳ ಬೇಡಿಕೆ ಪೂರೈಸಿದ ನಂತರ ಉಳಿದ ನಿವೇಶನಗಳನ್ನು ಸಂಘ- ಸಂಸ್ಥೆಗಳಿಗೆ ಹಂಚಲು ಕ್ರಮ ವಹಿಸಲಾಗುವುದು. ನಾಗರಿಕ ಸೌಲಭ್ಯದ ಈ ನಿವೇಶನಗಳಲ್ಲಿ ಖಾಸಗಿ ಸಂಸ್ಥೆಗಳ ವಾಣಿಜ್ಯ ಉದ್ದೇಶದ ಸಮುದಾಯ ಭವನ / ಕಲ್ಯಾಣ ಮಂಟಪ, ಇತರ ವಾಣಿಜ್ಯ ಚಟುವಟಿಕೆಗಳಿಗೆ ಕಟ್ಟಡ ನಿರ್ಮಿಸಲು ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ / ವರ್ಗದ ಸಂಸ್ಥೆಗಳಿಗೆ ನಿಯಮ ೩(೨)ರಂತೆ ಸ್ವೀಕರಿಸಿದ ಅರ್ಜಿಗಳಲ್ಲಿ ಮೀಸಲಾತಿ ಅನ್ವಯ ಆದ್ಯತೆ ನೀಡಿ ಹಂಚಿಕೆ ಮಾಡಲಾಗುವುದು ಎಂಬುದಾಗಿ ಮೂಡಾ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಹಾಗೂ ಆಯುಕ್ತೆ ಲಾವಣ್ಯ ಅವರುಗಳು ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ನಿವೇಶನಗಳ ಹಂಚಿಕೆಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಪರಿಗಣನೆ ಇಲ್ಲ. ಕೇವಲ ಸಾರ್ವಜನಿಕ ಉದ್ದೇಶದ ವಿಚಾರಗಳು, ಸರಕಾರಿ ಕಚೇರಿ, ಸೇವಾ-ಸಂಘ-ಸAಸ್ಥೆಗಳಿಗೆ ಮಾತ್ರ ಅವಕಾಶವಿದೆ.