ಮಡಿಕೇರಿ, ಫೆ.೬: ಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ತಾ. ೪ ರಂದು ನಡೆದ ಚೆಟ್ಟಳ್ಳಿ ಗ್ರಾಮಸಭೆಯಲ್ಲಿ ಮಣಿ ಉತ್ತಪ್ಪ ತನ್ನ ಮೇಲೆ ಏಕಾಏಕಿ ದಾಳಿ ನಡೆಸಿ, ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯಿಂದ ತಾನು ಮಾನಸಿಕವಾಗಿ ಕುಗ್ಗಿದ್ದು, ಮಣಿ ಉತ್ತಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರಿನ ಮೂಲಕ ಒತ್ತಾಯಿಸಿದ್ದು, ಈ ಸಂಬAಧ ಪ್ರಕರಣ ದಾಖಲಾಗಿದೆ. ದೂರು ಸಲ್ಲಿಕೆ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಗರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷ ಪಿ.ಟಿ.ಮುತ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮಣಿ ಉತ್ತಪ್ಪ ಬಂಧನಕ್ಕೆ ಆಗ್ರಹ

ಮಣಿ ಉತ್ತಪ್ಪ ಅವರನ್ನು ತಕ್ಷಣ ಬಂಧಿಸಬೇಕೆAದು ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದ ಅಭಿವೃದ್ಧಿಯ ಕುರಿತು ಆರೋಗ್ಯಕರ ಚರ್ಚೆ ನಡೆಯಬೇಕಾದ ಸಭೆಯಲ್ಲಿ ಒಬ್ಬ ಹಿರಿಯ ಪ್ರತಿನಿಧಿಯಾಗಿ ಮಣಿಉತ್ತಪ್ಪ ಅವರು ನಡೆದುಕೊಂಡ ರೀತಿ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮಹಿಳಾ ಪ್ರತಿನಿಧಿ ಎನ್ನುವುದನ್ನೂ ನೋಡದೆ ಆತಂಕ ಸೃಷ್ಟಿಸಿ ಹಲ್ಲೆಯ ಸ್ವರೂಪದ ವರ್ತನೆ ತೋರಿದ್ದಾರೆ. ಈ ರೀತಿಯ ದೌರ್ಜನ್ಯ ಖಂಡನೀಯವೆAದು ಸರಿತಾ ತಿಳಿಸಿದ್ದಾರೆ. ಸಭೆಯಲ್ಲಿ ಅನುಚಿತವಾಗಿ ನಡೆದುಕೊಂಡ ದೃಶ್ಯಗಳು ಲಭ್ಯವಿರುವುದರಿಂದ ಪೊಲೀಸರು ಸೂಕ್ತ ತನಿಖೆ ನಡೆಸಿ ಪಕ್ಷಾತೀತ ಕ್ರಮ ಕೈಗೊಳ್ಳಬೇಕು. ಮಣಿಉತ್ತಪ್ಪ ಅವರನ್ನು ಬಂಧಿಸುವ ಮೂಲಕ ಮಹಿಳಾ ಪ್ರತಿನಿಧಿಗೆ ನ್ಯಾಯ ಒದಗಿಸಬೇಕು ಮತ್ತು ಅವರ ಪಕ್ಷದವರು ಶಿಸ್ತಿನ ಪಾಠ ಹೇಳಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.