ಮಡಿಕೇರಿ, ಫೆ. ೬: ಚೆಂಬು ಶ್ರೀ ಭಗವಾನ್ ಸಂಘ ಕೊಡಗು ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಚೆಂಬು ಶಾಲಾ ಮೈದಾನದಲ್ಲಿ ಕಿಡ್ಡಾಸದ ಪ್ರಯುಕ್ತ ಆಯೋಜಿಸಿದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಮಾಜಿ ಕ್ರೀಡಾಪಟು ಅತ್ಯಾಡಿ ಮಾದಪ್ಪ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಉಪತಹಶೀಲ್ದಾರ್ ಕೆ.ಗೋಪಾಲ್ ತುಳುನಾಡಿನಲ್ಲಿ ಕಿಡ್ಡಾಸ ಹಬ್ಬಕ್ಕೆ ಇರುವ ಮಹತ್ವವನ್ನು ವಿವರಿಸಿ, ಪ್ರಾರಂಭದಿAದಲೂ ಸಮಾಜಮುಖಿಯಾಗಿ ದುಡಿಯುತ್ತಿರುವ ಶ್ರೀ ಭಗವಾನ್ ಸಂಘ ಮುಂದಿನ ದಿನಗಳಲ್ಲಿ ರಾಷ್ಟçವೇ ಗುರುತಿಸುವಂತಹ ಸಂಘವಾಗಿ ಬೆಳೆಯಲೆಂದು ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೀವನ್ ಪೆರಿಗೇರಿ ಅಳಿದು ಹೋಗುತ್ತಿರುವ ಗ್ರಾಮೀಣ ಕ್ರೀಡೆಗೆ ಮತ್ತೆ ಜೀವ ತುಂಬುವ ಪ್ರಯತ್ನದೊಂದಿಗೆ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಪಯಸ್ವಿನಿ ಸೊಸೈಟಿ ಅಧ್ಯಕ್ಷ ಯನ್.ಸಿ.ಅನಂತ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗವಾನ್ ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ ವಹಿಸಿದ್ದರು. ರವಿರಾಜ್ ಹೊಸೂರು ಸ್ವಾಗತಿಸಿ, ಪ್ರಜ್ವಲ್ ಬೊಳ್ತಾಜೆ ಕಾರ್ಯಕ್ರಮ ನಿರೂಪಣೆ ಮಾಡಿದರು.