ನಾಪೆೆÇÃಕ್ಲು, ಫೆ. ೭: ನಾಪೆÉÇÃಕ್ಲು ವಿಭಾಗದಲ್ಲಿ ೧೦ಕ್ಕೂ ಅಧಿಕ ಮೂತ್ರಪಿಂಡ ರೋಗಿಗಳಿದ್ದು, ಇವರುಗಳು ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಮಡಿಕೇರಿ, ವೀರಾಜಪೇಟೆ, ಅಥವಾ ಗೋಣಿಕೊಪ್ಪಲುವಿಗೆ ತೆರಳಬೇಕಾಗಿದೆ.
ಕೊರೊನಾದಿಂದಾಗಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರೋಗಿಗಳು ಬಾಡಿಗೆ ವಾಹನಗಳನ್ನು ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ನಾಪೆÉÇÃಕ್ಲು ಸಮುದಾಯ ಆಸ್ಪತ್ರೆಯಲ್ಲಿ ಈ ಘಟಕವನ್ನು ಸ್ಥಾಪಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಗಮನ ಹರಿಸಬೇಕೆಂದು ರೋಗಿಗಳು ಮನವಿ ಮಾಡಿದ್ದಾರೆ.