ಮಡಿಕೇರಿ, ಫೆ. 5: ಭಾಗಮಂಡಲ ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಭಾಗಮಂಡಲದ ಕೆ.ಪಿ. ವಿನೋದ್ ಭಟ್, ಎಂ.ಪಿ. ಹರೀಶ್, ಕೆ.ಎಂ. ನಮಿತ, ಕುದುಕುಳಿ ಜಿ. ಭರತ್, ಪಿ.ಎಸ್. ಸುಧೀರ್ ಕುಮಾರ್, ಕುಂದಚೇರಿಯ ಕೆ.ಎಸ್. ಕೀರ್ತಿಕುಮಾರ್, ಮಡಿಕೇರಿಯ ಮಂಡೀರ ಎಂ. ದೇವಿ ಪೂಣಚ್ಚ, ಸಣ್ಣಪುಲಿಕೋಟು ಗ್ರಾಮದ

ಕೆ. ಮನೋಜ್ ಕುಮಾರ್,

ಕರಿಕೆ ಎಳ್ಳುಕೊಚ್ಚಿಯ ಕೋಡಿ

ಕೆ. ಪೊನ್ನಪ್ಪ ಇವರುಗಳನ್ನು ನೇಮಕ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.