ಕುಶಾಲನಗರ, ಫೆ ೬ : ಖ್ಯಾತ ಪ್ರವಚನಕಾರ ಬಾಗಲಕೋಟೆ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂತಾಪ ಸೂಚಿಸಲಾಯಿತು.

ಇಬ್ರಾಹಿಂ ಸುತಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಸಾಪ ತಾಲೋಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಧರ್ಮವೊಂದಕ್ಕೆ ಸೀಮಿತರಾಗದ ಇವರು ನಾಡಿನ ಎಲ್ಲಾ ಜಾತಿ - ಜನಾಂಗದ ಧರ್ಮೀಯರಿಗೆ ಬೈಬಲ್, ಖುರಾನ್, ಭಗವದ್ಗೀತೆ ಸೇರಿದಂತೆ ಬಸವಣ್ಣನ ವಚನಗಳ ಮೂಲಕ

‘ದೇವನೊಬ್ಬನೇ - ನಾಮಹಲವು’ ಎಂಬ ಧರ್ಮ ಸಂದೇಶಗಳನ್ನು ಸಾರಿದ್ದಾರೆ ಎಂದರು.

ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ವಿಶೇಷ ಆಹ್ವಾನಿತರಾದ ಕೆ.ಎಸ್.ಮಹೇಶ್, ಕೆ.ವಿ.ಉಮೇಶ್, ಕಸಾಪ ತಾಲೋಕು ನಿರ್ದೇಶಕರಾದ ಎನ್.ಕೆ.ಮೋಹನಕುಮಾರ್, ಸೋಮವಾರಪೇಟೆ ಕಸಾಪ ಕೋಶಾಧಿಕಾರಿ ವೀರರಾಜು, ಕೆ.ಎನ್.ಸುರೇಶ್, ಸಂಗೀತ ಶಿಕ್ಷಕ ಬಿ.ಸಿ.ಶಂಕರಯ್ಯ, ಸೋನಿಯಾ ಹಾಗೂ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿದ್ದರು.