*ಗೋಣಿಕೊಪ್ಪ, ಫೆ. ೬: ಕಾವೇರಿ ಕಾಲೇಜು ಅಲುಮ್ನಿ ಅಸೋಸಿ ಯೇಷನ್ ಆಡಳಿತ ಮಂಡಳಿ ಪುನರ್‌ರಚನೆ ಕಾರ್ಯ ಅಸೋಸಿ ಯೇಷನ್ ಅಧ್ಯಕ್ಷ ಮಾಳೇಟೀರ ಬಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಪದನಿಮಿತ್ತ ಅಧ್ಯಕ್ಷರಾಗಿ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಮಾಳೇಟೀರ ಬಿ. ಕಾವೇರಪ್ಪ, ಸಂಚಾಲಕರಾಗಿ ಎಸ್.ಎಂ. ರಜನಿ ಅವರನ್ನು ಮುಂದುವರಿಸಲಾಯಿತು.

ಉಪಾಧ್ಯಕ್ಷರಾಗಿ ಕೊಂಗಾAಡ ಪಿ. ಅಚ್ಚಯ್ಯ, ಪ್ರಧಾನ ಕಾರ್ಯ ದರ್ಶಿಯಾಗಿ ಪಳಂಗAಡ ವಾಣಿ ಚಂಗಪ್ಪ, ಖಜಾಂಚಿಯಾಗಿ ಕಳ್ಳಿಚಂಡ ಸಿ. ಮುತ್ತಪ್ಪ, ನಿರ್ದೇಶಕರಾಗಿ ಕೆ.ಸಿ. ಪವಿತ್ರ, ಪುಳ್ಳಂಗಡ ಬಿ. ನಟೇಶ್, ಪೊಕ್ಕಳಿಚಂಡ ಬಿ. ಪೂಣಚ್ಚ, ನಾಮೇರ ಕೆ. ದೇವಯ್ಯ, ಜಮ್ಮಡ ಟಿ. ಜೋಯಪ್ಪ, ಬಿ.ಎಸ್. ಆಶಾ, ಜಮ್ಮಡ ಜಿ. ಬಿದ್ದಪ್ಪ, ಕೆ.ಎನ್. ಉಷಾ, ನಾಮನಿರ್ದೇಶಕರಾಗಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಸಣ್ಣುವಂಡ ಕಿಶೋರ್ ನಾಚಪ್ಪ, ತಿರುನೆಲ್ಲಿಮಾಡ ಎಂ. ದೇವಯ್ಯ, ಮನು ನಂಜಪ್ಪ, ಕೆ.ಸಿ. ಮಂಜುಳ ಅವರನ್ನು ಆಯ್ಕೆ ಮಾಡಲಾಯಿತು.