ಸುಂಟಿಕೊಪ್ಪ, ಫೆ. ೬: ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ೪ ತಿಂಗಳುಗಳಿAದ ಸೀಮೆಎಣ್ಣೆ ಸಿಗದೆ ಪಡಿತರ ಚೀಟಿದಾರರ ಗೋಳು ಹೇಳತೀರದ್ದಾಗಿದೆ.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಗಾಳಿ, ಮಳೆಯ ಪ್ರಮಾಣ ಅಧಿಕವಾಗಿರುತ್ತದೆ. ಜಿಲ್ಲೆಯಲ್ಲಿನ ಮಳೆಯಿಂದಾಗಿ ಕುಗ್ರಾಮಗಳಿಗೆ ಕಲ್ಪಿಸಲಾಗಿರುವ ವಿದ್ಯುತ್ ಸಂಪರ್ಕದ ಕಂಬಗಳ ಮೇಲೆ ಮರದ ರೆಂಬೆ ಹಾಗೂ ಮರಗಳೇ ಉರುಳಿ ಬಿದ್ದು ವಾರಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡು ಕುಗ್ರಾಮಗಳ ಜನತೆಯು ಕಾರ್ಗತ್ತಲೆಯಲ್ಲಿ ದೂಡುವ ಉದಾಹರಣೆಗಳಿವೆ.
ಅಕ್ಕಿ, ಗೋಧಿ, ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಲಭಿಸುತ್ತಿದೆ. ಆದರೆ ಸೀಮೆಎಣ್ಣೆ ಖೋಟಾ ಮಾತ್ರ ಸರಕಾರದಿಂದಲೇ ಬರುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿ ಗುಮಾಸ್ತರು ಹೇಳುತ್ತಾರೆ.
ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಹಾಡಿಗಳಲ್ಲಿ, ತೋಟದ ಲೈನ್ ಮನೆಯಲ್ಲಿ ಇರುವವರಿಗೆ ಸೀಮೆಎಣ್ಣೆ ಅಗತ್ಯವಾಗಿ ಬೇಕಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯವರು ಕೂಡಲೇ ಸೀಮೆಎಣ್ಣೆಯನ್ನು ತಿಂಗಳಿಗೆ ೨ ಲೀಟರ್ ಆದರೂ ಒದಗಿಸಿಕೊಡಬೇಕು ಎಂದು ಗ್ರಾಹಕರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.
೪ ತಿಂಗಳಿನಿAದ ವಿತರಣೆಯನ್ನು ನಿಲ್ಲಿಸಲಾಗಿದ್ದು, ಕುಗ್ರಾಮಗಳ ಜನತೆಯು ಮಳೆಗಾಲದಲ್ಲಿ ವಿದ್ಯುತ್ ಕೈಕೊಟ್ಟರೆ ದುಬಾರಿ ಬೆಲೆ ತೆತ್ತು ಡಿಸೇಲ್ ಖರೀದಿಸಿ ಮನೆಗಳಿಗೆ ಬೆಳಕು ಹರಿಸಿಕೊಳ್ಳುವ ಪರಿಸ್ಥಿತಿ ಬಂದು ಒದಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.