ಪೊನ್ನAಪೇಟೆ, ಫೆ.೬: ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಫೆ.೧೧ ರಿಂದ ೧೩ ವರೆಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಪೊನ್ನಂಪೇಟೆ ಮಾಸ್ ಬಾಯ್ಸ್ ತಂಡ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು, ವಿವಿಧ ಪ್ರಾಂಚೈಸಿಗಳು ಈಗಾಗಲೇ ಬಿಡ್ ಮೂಲಕ ಆಟಗಾರರನ್ನು ಖರೀದಿಸಿದ್ದು, ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗವಹಿಸಲಿವೆ.
ಕಾಕಮಾಡ ಅಜಿತ್ ಮಾಲೀಕತ್ವದ ಎಜೆ ಬಾಯ್ಸ್, ಕೆನೆಟ್ ಮಾಲೀಕತ್ವದ ಉಷಾ ಕ್ರಿಕೆಟರ್ಸ್, ಸಂತು ಮತ್ತು ಶಂಕರ್ ಮಾಲೀಕತ್ವದ ಬ್ಲಾಕ್ ಕೋಬ್ರಾಸ್, ಬಿಷನ್ ಮತ್ತು ಜಾನ್ ಪಾಲ್ ಮಾಲೀಕತ್ವದ ಟೀಮ್ ಕೊoಬನ್, ಅಮ್ಮತ್ತೀರ ಸುರೇಶ್ ಮಾಲಿಕತ್ವದ ಬೋಜಿ ಕ್ರಿಕೆಟರ್ಸ್, ಸೈಕ್ಲೋನ್ ರಮೇಶ್ ಮತ್ತು ವಿವೇಕ್ ಮಾಲೀಕತ್ವದ ಸೈಕ್ಲೋನ್ ಕ್ರಿಕೆಟರ್ಸ್, ಮುನೀರ್ ಮಾಲಿಕತ್ವದ ಸ್ಟಾರ್ ಇಲೆವೆನ್, ನದಿಮ್ ಮತ್ತು ಅನಿಸ್ ಮಾಲೀಕತ್ವದ ಆರ್ ಸಿ ಬಿ, ಸಫಿರ್ ಮಾಲೀಕತ್ವದ ವೈಸಿಪಿ, ರಫೀಕ್ ಮತ್ತು ಮಣಿ ಮಾಲೀಕತ್ವದ ಜೆವೈಸಿ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಮಾಸ್ ಕ್ರಿಕೆಟರ್ಸ್ ಅಧ್ಯಕ್ಷ ಕಾಕಾಮಾಡ ಅಜಿತ್, ಕಾರ್ಯದರ್ಶಿ ಅಶ್ವನ್, ಖಜಾಂಚಿ ಮಧು ಸದಸ್ಯರಾದ ಮಯೂರ್, ಅರ್ಮುಗ, ಸೆಂದಿಲ್, ಮದನ್ ಪಂದ್ಯಾವಳಿ ಆಯೋಜಿಸಿದ್ದಾರೆ. ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಯೂಟ್ಯೂಬ್ ಲೈವ್ನಲ್ಲಿ ವೀಕ್ಷಿಸಬಹುದಾಗಿದೆ.