ಗೋಣಿಕೊಪ್ಪ ವರದಿ, ಫೆ. ೬: ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಾರ್ಚ್ ೧೫ ಮತ್ತು ೧೬ ರಂದು ಜಿಲ್ಲಾಮಟ್ಟದ ಹೊನಲು ಬೆಳಕಿನ ಕೂರ್ಗ್ ಚಾಂಪಿಯನ್ಸ್ ಫುಟ್ಬಾಲ್ ಲೀಗ್ ಆಯೋಜಿಸಲಾಗುವುದು ಎಂದು ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಗೌರವ ಅಧ್ಯಕ್ಷ ಡಿ.ಎಸ್. ಕುಮಾರ್ ತಿಳಿಸಿದ್ದಾರೆ.
ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸೆವೆನ್ ಸೈಡ್ ಫುಟ್ಬಾಲ್ ಟೂರ್ನಿ ಇದಾಗಿದೆ. ಸುಮಾರು ೧೨ ರಿಂದ ೧೬ ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಟಗಾರರಿಂದ ಅರ್ಜಿ ಪಡೆದುಕೊಂಡು ತಂಡದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದರು.
ಕೊಡಗು ಫುಟ್ಬಾಲ್ ಅಸೋಷಿಯೇಷನ್ ಕಾರ್ಯದರ್ಶಿ ಪಿ.ಎ. ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿ ೨೦ ನೋಂದಾಯಿತ ಫುಟ್ಬಾಲ್ ಕ್ಲಬ್‌ಗಳಿವೆ. ಇಲ್ಲಿ ನೋಂದಾಯಿಸಿಕೊAಡಿರುವ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ನಿಯಮದಂತೆ ಟೂರ್ನಿ ನಡೆಯಲಿದೆ. ಒಂದು ತಂಡಕ್ಕೆ ೧೨ ಆಟಗಾರರನ್ನು ಬಿಡ್ ಮೂಲಕ ನೀಡಲಾಗುವುದು. ರಾಷ್ಟçಮಟ್ಟದ ತೀರ್ಪುಗಾರರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು. ಗುಣಮಟ್ಟದ ತೀರ್ಪು ಮೂಡಿ ಬರುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ ೭೩೩೮೬೪೨೯೭೬, ೭೭೬೦೮೪೦೯೧೬ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಷಂಶುದ್ದೀನ್, ಕಾರ್ಯದರ್ಶಿ ಬಷೀರ್, ಸದಸ್ಯ ಹಂಸ ಇದ್ದರು.