ಗೋಣಿಕೊಪ್ಪ ವರದಿ, ಫೆ. ೫: ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಂಡು ಕುಟುಂಬದ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ವೀರಾಜಪೇಟೆ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಕೊಂಗೇಟಿರ ಸಿ. ಪೊನ್ನಪ್ಪ ಸಲಹೆ ನೀಡಿದರು.

ಕಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಪದಗ್ರಹಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕ ಸೇವೆಯಿಂದ ತೃಪ್ತಿ ದೊರೆಯುತ್ತದೆ. ಇದರೊಂದಿಗೆ ಕುಟುಂಬದ ಆರೋಗ್ಯಕ್ಕೂ ಕಾಳಜಿ ವಹಿಸಬೇಕಿದೆ. ಅನಾರೋಗ್ಯದಿಂದ ಆರ್ಥಿಕ ಸಮಸ್ಯೆ ಎದುರಾದಾಗ ಜೀವ ಉಳಿಸಿಕೊಳ್ಳಲು ಆರೋಗ್ಯ ವಿಮೆ ಪ್ರಯೋಜನಕ್ಕೆ ಬರುತ್ತದೆ. ಈ ಬಗ್ಗೆ ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಜೆಸಿಐ ಸಂಸ್ಥೆಯಿAದ ಸಾಕಷ್ಟು ಜನಪರ ಕಾರ್ಯಗಳು ನಡೆಯುತ್ತಿದೆ ಎಂದು ಹೇಳಿದರು.

ಪದಗ್ರಹಣ: ಜೆಸಿಐ ವಲಯ ೧೬ ರ ಅಧ್ಯಕ್ಷ ಕುನಾಲ್ ಮಾಣಿಕ್‌ಚಂದ್ ಪದಗ್ರಹಣ ಬೋಧಿಸಿದರು. ಅಧ್ಯಕ್ಷರಾಗಿ ಚೆಪ್ಪುಡೀರ ಪಿ. ಬೋಪಣ್ಣ, ಉಪಾಧ್ಯಕ್ಷರಾಗಿ ಅಜಯ್ ಅಪ್ಪಣ್ಣ, ಜೀವನ್, ಕೆ.ಜೆ. ನಾಣಯ್ಯ, ಪವಿ ಪೊನ್ನಪ್ಪ, ಕಾಡ್ಯಮಾಡ ಮುದ್ದಪ್ಪ, ಕಾರ್ಯದರ್ಶಿ ಮತ್ರಂಡ ಬೋಪಣ್ಣ, ಖಜಾಂಚಿ ಗಣೇಶ್ ಉತ್ತಪ್ಪ, ನಿರ್ದೇಶಕರಾದ ಪಿ.ಜಿ. ಡ್ಯಾನಿ, ಚೇಂದೀರ ಡ್ಯಾನಿ, ತಮ್ಮಯ್ಯ, ಕಡೇಮಾಡ ಸತೀಶ್, ಜೆಜೆಸಿ ಮುಖ್ಯಸ್ಥರಾಗಿ ಸಿ.ಬಿ. ಆಯಾನ್ ಅಯ್ಯಪ್ಪ ಅಧಿಕಾರ ಸ್ವಿಕರಿಸಿದರು.

ನಿರ್ಗಮಿತ ಅಧ್ಯಕ್ಷ ದಿಲನ್ ಚಂಗಪ್ಪ ವರದಿ ಮಂಡಿಸಿದರು. ಜೆಸಿಐ ವಲಯ ೧೬ ರ ಉಪಾಧ್ಯಕ್ಷೆ ಮಾಯ ಗಿರೀಶ್, ನಿಕಟಪೂರ್ವ ಅಧ್ಯಕ್ಷ ಗಯಾ ಜೋಯಪ್ಪ, ಖಜಾಂಚಿ ಗಣೇಶ್ ಉತ್ತಪ್ಪ ಇದ್ದರು.