ಗೋಣಿಕೊಪ್ಪಲು, ಫೆ. ೫: ಬಹಿರ್ದೆಸೆಗೆ ತೆರಳಿದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ತಿತಿಮತಿ ಸಮೀಪದ ದೇವಮಚ್ಚಿ ಅರಣ್ಯ ಪ್ರದೇಶ ಬಳಿಯ ಅಕ್ಕೆಮಾಳದಲ್ಲಿ ವಾಸವಿರುವ ಶಿವಕುಮಾರ್ ಎಂಬವರು ತನ್ನ ಮನೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಮುಂಜಾನೆ ಎದ್ದು ಬಹಿರ್ದೆಸೆಗೆ ತೆರಳಿದ್ದರು.
ಈ ವೇಳೆ ಅರಣ್ಯದಲ್ಲಿದ್ದ ಕಾಡಾನೆ ದಿಢೀರ್‌ನೆ ಶಿವಕುಮಾರ್ ಮೇಲೆ ದಾಳಿ ನಡೆಸಿದೆ. ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಕಾಡಾನೆ ಗಾಬರಿಗೊಂಡು ಸಮೀಪದ ಅರಣ್ಯದಲ್ಲಿ ಮರೆಯಾಗಿದೆ.
ಸುದ್ದಿ ತಿಳಿದ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಆರ್.ಎಫ್.ಓ. ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ದಾಳಿಯಿಂದ ಶಿವಕುಮಾರ್ ಬೆನ್ನಿನ ಭಾಗಕ್ಕೆ ಗಾಯವಾಗಿದ್ದು, ಗೋಣಿಕೊಪ್ಪಲುವಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.