ಮಡಿಕೇರಿ, ಫೆ. ೫: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ‘೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ’ ಮಡಿಕೇರಿಯ ಕೆಡೆಟ್‌ಗಳಿಗೆ ನಗರದ ಎನ್.ಸಿ.ಸಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪೆರೇಡ್‌ನಲ್ಲಿ ಭಾಗವಹಿಸಿದ ಸುಳ್ಯ ತಾಲೂಕಿನ ನೆಹÀರು ಮೆಮೋರಿಯಲ್ ಕಾಲೇಜಿನ ಎಸ್.ಯು ಅಭಿಷೇಕ್, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕಿರಣ್ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಹೇಮ ಸ್ವಾತಿ ಅವರುಗಳಿಗೆ ಬೆಟಾಲಿಯನ್ ವತಿಯಿಂದ ಸನ್ಮಾನ ಮಾಡಲಾಯಿತು. ಪೆರೇಡ್‌ನಲ್ಲಿ ಭಾಗವಹಿಸಿದ ಕೆಡೆಟ್‌ಗಳು ತಮ್ಮ ಅನುಭವ ಹಂಚಿಕೊAಡರು.

‘೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ’ ಮಡಿಕೇರಿಯ ಕಮಾಂಡಿAಗ್ ಆಫಿಸರ್ ಕರ್ನಲ್ ಚೇತನ್ ಧೀಮನ್ ಅವರು ಮಾತನಾಡಿ ಎನ್.ಸಿ.ಸಿ ಎಂದರೆ ಕೇವಲ ಡ್ರಿಲ್‌ಗೆ ಸೀಮಿತವಾಗಬಾರದು. ದೈಹಿಕ, ಮಾನಸಿಕವಾಗಿ ಸದೃಢರಾಗುವುದ ರೊಂದಿಗೆ ಸಮಯ ಪ್ರಜ್ಞೆಯನ್ನು ಕೂಡ ಪಾಲಿಸಬೇಕೆಂದು ಸರ್ವ ಕೆಡೆಟ್‌ಗಳಿಗೆ ಕಿವಿಮಾತು ಹೇಳಿದರು.

‘೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ’ ಮಡಿಕೇರಿಯ ಸುಬೇದಾರ್ ಮೇಜರ್ ಸುನಿಲ್, ಎನ್.ಸಿ.ಸಿ ಅಧಿಕಾರಿ ಜಾನ್‌ಸನ್ ಸಿಕ್ವೇರಾ, ಅತುಲ್ ಶೆಣೈ, ದಾಮೋದರ್ ಹಾಗೂ ಇತರರು ಇದ್ದರು.

ಕೊಡಗು ವಿದ್ಯಾಲಯ ಹಾಗೂ ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಮಡಿಕೇರಿ ಜೂನಿಯರ್ ಕಾಲೇಜು , ಪುತ್ತೂರು ಸಂತ ಫಿಲೋಮಿನ ಕಾಲೇಜು ಹಾಗೂ ವಿವೇಕಾನಂದ ಕಾಲೇಜಿನ ಕೆಡೆಟ್‌ಗಳು ಕಾರ್ಯಕ್ರಮ ದಲ್ಲಿ ಹಾಜರಿದ್ದರು. ಎನ್.ಸಿ.ಸಿ ಕೆಡೆಟ್ ಹೇಮಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.