ಕೂಡಿಗೆ, ಫೆ. ೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮೊದಲಿಗೆ ಪಂಚಾಯಿತಿಯ ಎಲ್ಲಾ ಸದಸ್ಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ಹಂಚಲು ಈಗಾಗಲೇ ನಿಗದಿಯಾದ ಬಾಡಗಿಮಟ್ಟಿ ಜಾಗ ಸರ್ವೆ ನಂ. ೮೪, ೮೫ ರಲ್ಲಿ ೫ ಎಕರೆಗಳಷ್ಟು ಪ್ರದೇಶವಿದ್ದು ಈ ಜಾಗವು ಒತ್ತುವರಿಯಾಗಿರುವುದರಿಂದ ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಲು ಸಂಬAಧಿಸಿದ ತಾಲೂಕು ಮಟ್ಟದ ಅಧಿಕಾರಿ ಪತ್ರ ವ್ಯವಹಾರ ಮಾಡಲು ತೀರ್ಮಾನ ತೆಗೆದುಕೊಂಡರು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ವಾರ್ಡ್ನ ಕಾಮಗಾರಿಗಳ ಬಗ್ಗೆ ಮತ್ತು ಕುಡಿಯುವ ನೀರಿನ ಸರಬರಾಜಿನ ಬಗ್ಗೆ ಸುದೀರ್ಘವಾದ ಚರ್ಚೆಗಳನ್ನು ನಡೆಸಿದರು. ಅಲ್ಲದೆ ಈಗಾಗಲೇ ಸರಕಾರದಿಂದ ಮಂಜೂರು ಆಗಿರುವ ವಸತಿ ಯೋಜನೆಗಳ ಫಲಾನುಭವಿಗಳಿಗೆ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಅಧ್ಯಕ್ಷ ಹೆಚ್. ಮಂಜುನಾಥ ಮಾತನಾಡಿ, ೧೫ನೇ ಹಣಕಾಸು ಯೋಜನೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಯಲ್ಲಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶವಿದ್ದು ಇದರ ಪ್ರಯೋಜನ ವನ್ನು ಪಡೆದುಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕುಮಾರಿ ಸೇರಿದಂತೆ ಸದಸ್ಯರು, ಅಭಿವೃದ್ಧಿ ಅಧಿಕಾರಿ ಆಸ್ಮ ಹಾಜರಿದ್ದರು.