ಮಡಿಕೇರಿ, ಫೆ. ೪: ಮಡಿಕೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯರುಗಳಾಗಿ ಐವರನ್ನು ಸರಕಾರ ನೇಮಕಮಾಡಿದೆ. ಸ್ಥಳೀಯ ಶಿಫಾರಸ್ಸಿನಂತೆ ಮುಖ್ಯಮಂತ್ರಿಗಳ ಒಪ್ಪಿಗೆಯಂತೆ ಪೌರಾಡಳಿತ ನಿರ್ದೇಶನಾಲಯದ ಮೂಲಕ ಇವರುಗಳನ್ನು ನೇಮಕ ಮಾಡಲಾಗಿದೆ.
ಬಿ.ಕೆ. ಅರುಣ್ ಕುಮಾರ್, ಕವನ್ ಕಾವೇರಪ್ಪ, ನಂದಾ ಉತ್ತಪ್ಪ, ಕೆ.ವಿ.ಸುಬ್ರಮಣಿ ಹಾಗೂ ಗೌರಮ್ಮ ಹೆಚ್.ಹೆಚ್. ಅವರುಗಳು ನೂತನ ನಾಮನಿರ್ದೇಶಿತ ಸದಸ್ಯರುಗಳಾಗಿದ್ದಾರೆ.