ಮಡಿಕೇರಿ,ಫೆ.೪: ಬೇಲಿಯೇ ಎದ್ದು ಹೊಲ ಮೇಯುತ್ತಿದೆ., ಕಾಡು ಕಳ್ಳರಾರೆಂದು ಎಲ್ಲರಿಗೂ ಗೊತ್ತಿದೆ., ಕಂಡು ಹಿಡಿಯುವ., ಸೆರೆ ಹಿಡಿಯುವ ಪ್ರಯತ್ನವಾಗಲೀ ಯಾರಿಂದಲೂ ಆಗುತ್ತಿಲ್ಲ., ನಾಮಕಾವಸ್ಥೆಗೆ ಗುಬ್ಬಿ ಮೇಲೆ ಬ್ರಹ್ಮಾಸ್ತç ಎಂಬAತೆ ಇಬ್ಬರಿಗೆ ‘ಅಮಾನತ್ತು’ ಎಂಬ ಶಿಕ್ಷೆಯ ಗುರಿಪಡಿಸಿ ನಂತರದಲ್ಲಿ ಬೇರೆಡೆಗೆ ವರ್ಗಾಯಿಸುವ ನಾಟಕ ಸಾಗಿದೆ.., ಆರೋಪಿಗಳ ಪತ್ತೆಯಾಗಿಲ್ಲ ಎಂಬ ವರದಿ ಮಾಡಿ ಒಂದು ತಿಂಗಳಾಗಿದೆ., ಸರಿಯಾದ ಕ್ರಮ ಕೈಗೊಳ್ಳುವ ಆಸಕ್ತಿ ಇದ್ದಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಪೊಲೀಸ್ ಇಲಾಖೆಗೆ ವಹಿಸಬಹುದಿತ್ತು., ಇತ್ತ ಅರಣ್ಯ ಅಪರಾಧಕ್ಕೆ ಸಂಬAಧಿಸಿದAತೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಲು ಎಲ್ಲ ಅವಕಾಶಗಳಿದ್ದರೂ ಪೊಲೀಸ್ ಅರಣ್ಯ ಸಿಐಡಿ ಘಟಕ ಯಾವದೇ ಆಸಕ್ತಿ ತೋರದೆ ಮೌನಕ್ಕೆ ಶರಣಾಗಿರುವದು ಸಾರ್ವಜನಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ..!?
ನಿಶಾನೆ ಮೊಟ್ಟೆಯಲ್ಲಿ ನಾಲ್ಕನೇ ಬಾರಿಗೆ ನಡೆದ ಹರಳು ಕಲ್ಲು ದಂಧೆ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳಾಯಿತು. ಆದರೂ ಇಲಾಖೆಯವರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖಾ ಹದ್ದುಬಸ್ತಿನಲ್ಲಿರುವ., ಇಲಾಖಾ ಸಿಬ್ಬಂದಿಗಳು ಹಗಲೂ, ರಾತ್ರಿ ಕಾವಲಿರುವ ಅರಣ್ಯ ಕ್ಯಾಂಪ್‌ನ ಅಂಗಳದಲ್ಲಿಯೇ ಭೂಮಿ ಕೊರೆದಿದ್ದರೂ ಆರೋಪಿಗಳು ಪತ್ತೆಯಾಗಿರುವದಿಲ್ಲ ಎಂದು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳು ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಇದು ಎಷ್ಟೊಂದು ಅಸತ್ಯವೆಂಬದು ಹಾಲು ಕುಡಿಯುವ ಹಸುಳೆಗಾದರೂ ಅರಿವಾಗುತ್ತದೆ. ಇಲಾಖಾ ಸಿಬ್ಬಂದಿ, ಅಧಿಕಾರಿಗಳ ಸಹಕಾರವಿಲ್ಲದೆ ಈ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಇಲಾಖಾ ಸಿಬ್ಬಂದಿಗಳ ಶಾಮೀಲಾತಿ ಇದೆ ಎಂಬದಕ್ಕೆ ಸಾಕ್ಷಿಯಾಗಿ ಇಲಾಖೆಯೇ ಈರ್ವರು ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿದೆ. ಅವರಿಂದಲೇ ಮಾಹಿತಿ ಪಡೆದುಕೊಂಡರೂ ಆರೋಪಿಗಳಾರೆಂದು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ..!
ಮೌನ ತಾಳಿದ ಸಿಐಡಿ ಘಟಕ..!
ಅರಣ್ಯದಲ್ಲಿನ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಅರಣ್ಯ ಸಿಐಡಿ ಘಟಕವನ್ನು ಸ್ಥಾಪಿಸಲಾಗಿದೆ. ಅರಣ್ಯದಲ್ಲಿ ಯಾವದೇ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವ ಸ್ವತಂತ್ರ ಅಧಿಕಾರ ಈ ಘಟಕಕ್ಕಿದೆ. ಅರಣ್ಯದ ಒಳಗಡೆ ಹಾಗೂ ಹೊರಗಡೆ ಏನೇ ಅಕ್ರಮ ಚಟುವಟಿಕೆಗಳು ನಡೆದಲ್ಲಿ ಈ ಗಟಕಕ್ಕೆ ಸ್ಪಷ್ಟ ಮಾಹಿತಿ ಇರುತ್ತದೆ.
(ಮೊದಲ ಪುಟದಿಂದ) ಆದರೆ ನಿಶಾನೆ ಮೊಟ್ಟೆಯಲ್ಲಿ ನಿರಂತರ ಹಗಲು ದರೋಡೆ ನಡೆಯುತ್ತಿದ್ದರೂ ಈ ಘಟಕದ ಗಮನಕ್ಕೆ ಬಂದಿಲ್ಲವೇ ಎಂಬದು ಸಾರ್ವಜನಿಕ ಪ್ರಶ್ನೆಯಾಗಿದೆ..? ಯಾವುದೇ ಅಕ್ರಮ ಚಟುವಟಿಕೆಗಳು ನಡೆದರೂ ಗುಪ್ತಚರ ಮಾಹಿತಿ ಮೂಲಕ ಈ ಘಟಕಕ್ಕೂ ಮಾಹಿತಿ ಲಭ್ಯವಾಗುತ್ತದೆ. ಅರಣ್ಯ ಇಲಾಖೆಗಿಂತ ಪೊಲೀಸರಿಗೆ, ಹೆಚ್ಚಿನ ಮಾಹಿತಿ ಇರುತ್ತದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕ್ರಮಕೈಗೊಳ್ಳುವ ಅಧಿಕಾರವು ಇರುತ್ತದೆ. ಆದರೂ ಈ ಘಟಕ ಈ ಬಗ್ಗೆ ಗಮನ ಹರಿಸಿದಂತಿಲ್ಲ...! ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಇದು ಬಂದಿಲ್ಲವೇ ಎಂದು ಕೇಳುವಂತಾಗಿದೆ..!?
?ಸAತೋಷ್ , ಸುನಿಲ್