ಮುಳ್ಳೂರು, ಫೆ. ೪: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡೆಮ್ಮೆ ಹಿಂಡು ಕಾರ್ಮಿಕರ ಮೇಲೆ ದಾಳಿ ನಡೆಸಿ ಕಾರ್ಮಿಕ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಡೆಮ್ಮೆ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಶುಕ್ರವಾರ ಬೆಳಿಗ್ಗೆ ಮುಳ್ಳೂರು ಗ್ರಾಮದ ಮಾಲಂಬಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದ್ದು, ಮುಳ್ಳೂರು ಗ್ರಾಮದ ಶೀಲಾವತಿ (೬೫) ದಾಳಿಯಿಂದ ಗಾಯಗೊಂಡ ಮಹಿಳೆ. ಶೀಲಾವತಿ ಎಂದಿನAತೆ ಶುಕ್ರವಾರ ಬೆಳಿಗ್ಗೆ ೯.೩೦ಕ್ಕೆ ಕಾಫಿ ತೋಟದಲ್ಲಿ ಇತರೆ ೧೩ ಮಂದಿ ಮಹಿಳಾ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾಗ ತೋಟದ ಒಳಗಿದ್ದ ಕಾಡೆಮ್ಮೆ ಹಿಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರ

(ಮೊದಲ ಪುಟದಿಂದ) ಮೇಲೆ ಎರಗಿದ ಸಂದರ್ಭ ಕಾಡೆಮ್ಮೆ ಒಂದು ಶೀಲಾವತಿ ಅವರ ಹೊಟ್ಟೆ, ತಲೆ ಭಾಗಕ್ಕೆ ತಿವಿದು ಗಾಯಗೊಳಿಸಿದ ಸಂದರ್ಭ ಇತರ ಕಾರ್ಮಿಕರು ಕಿರುಚಿಕೊಂಡಿದ್ದಾರೆ. ನಂತರ ಕಾರ್ಮಿಕರೆಲ್ಲರೂ ಸೇರಿ ಕಾಡೆಮ್ಮೆ ಹಿಂಡನ್ನು ಓಡಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಶೀಲಾವತಿ ಅವರನ್ನು ತೋಟದ ಮಾಲೀಕರು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡ ಶೀಲಾವತಿ ಅವರನ್ನು ಹಾಸನದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳಕ್ಕೆ ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ