ಕಣಿವೆ, ಫೆ. ೨: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪದಕಂಡಿಯ ಕಾವೇರಿ ನದಿ ದಂಡೆಯಲ್ಲಿ ನಿರ್ಮಿಸಿರುವ ತೂಗುಸೇತುವೆ ಬಳಿ ಹರಡಿದ್ದ ತ್ಯಾಜ್ಯ ಹಾಗೂ ಕಸದ ರಾಶಿಯನ್ನು ಸ್ಥಳೀಯ ಪಂಚಾಯಿತಿ ವತಿಯಿಂದ ಸ್ವಚ್ಛಗೊಳಿಸಲಾಗಿದೆ.

ನದಿ ದಂಡೆಯಲ್ಲಿ ನೆಲೆಸಿರುವ ಪಾದಚಾರಿಗಳ ಸಂಚಾರಕ್ಕೆAದು ನಿರ್ಮಿಸಿದ್ದ ತೂಗುಸೇತುವೆ ಬಳಿ ಕೆಲವರು ಅನುಪಯುಕ್ತ ಕಸದ ತ್ಯಾಜ್ಯವನ್ನು ಎಸೆದು ನದಿ ಪರಿಸರ ಹಾಗೂ ಪಾದಚಾರಿ ಮಾರ್ಗವನ್ನು ಕಲುಷಿತಗೊಳಿಸಿರುವ ಬಗ್ಗೆ ‘ಶಕ್ತಿ’ಯಲ್ಲಿ ಸಚಿತ್ರ ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ವರದಿಗೆ ಸ್ಪಂದಿಸಿದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಹಾಗೂ ಪಿಡಿಒ ಶ್ಯಾಂ ತೂಗುಸೇತುವೆಯ ಬಳಿ ಸ್ವಚ್ಛತೆ ನಿರ್ವಹಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿದ್ದಾರೆ.

- ಮೂರ್ತಿ