ಮಡಿಕೇರಿ, ಫೆ. ೨: ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ೭೪ನೇ ಪುಣ್ಯತಿಥಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸರ್ವೋದಯ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಪದಾಧಿಕಾರಿಗಳು ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗಾಂಧೀಜಿಯವರ ಆದರ್ಶ, ತತ್ವಗಳನ್ನು ಎಲ್ಲರೂ ಪಾಲಿಸುವಂತೆ ಕರೆ ನೀಡಿದರು. ನಂತರ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮಾಜಿ ಸೈನಿಕರ ಘಟಕದ ಜಿಲ್ಲಾಧ್ಯಕ್ಷ ಬೊಳ್ಳಿಯಂಡ ಗಣೇಶ್, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್, ಕಾರ್ಯದರ್ಶಿ ಬಸವರಾಜು, ಮಡಿಕೇರಿ ನಗರ ಎಸ್‌ಸಿ ಘಟಕದ ಅಧ್ಯಕ್ಷ ಮುದ್ದುರಾಜು, ಸೇವಾದಳದ ಶೇಕ್ ಅಹಮ್ಮದ್, ಹಬೀಬ್, ಐ.ಎಚ್.ಮೊಹಮ್ಮದ್, ಡಿಸಿಸಿ ಮಾಜಿ ಸದಸ್ಯ ಪುಷ್ಪ ಪೂಣಚ್ಚ, ರಿಯಾಜ್, ಸೈಮನ್ ಮತ್ತಿತರರು ಹಾಜರಿದ್ದರು.