ಮಡಿಕೇರಿ, ಫೆ. ೩: ಕೊಡಗಿನ ಬೆಳೆಗಾರರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು ಮತ್ತು ಹಳೆಯ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸುಂಟಿಕೊಪ್ಪ ಭಾಗದ ಕಾಫಿ ಬೆಳೆಗಾರರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕಾಫಿ ಫಸಲು ಹಾನಿಗೀಡಾಗಿವೆ, ಕಾಫಿ ಗಿಡಗಳು ರೋಗಗಳಿಗೆ ತುತ್ತಾಗಿದೆ. ನಿಗದಿತ ಸಮಯದಲ್ಲಿ ಮಳೆಬೀಳದ ಕಾರಣ ನಿರೀಕ್ಷಿತ ಫಸಲು ಸಿಗದೆ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳೆಗಾರರ ೧೦ ಹೆಚ್.ಪಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಐ.ಪಿ. ಸೆಟ್ ಪಂಪ್ ಬಳಕೆದಾರರಿಗೆ ೧೦ ಹೆಚ್.ಪಿ ಉಚಿತವಾಗಿ ಉಪಯೋಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಪ್ರತಿ ಬಿಲ್ಲನ್ನು ಪಾವತಿ ಮಾಡಬೇಕಾಗಿದೆ.
ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಂತರ ಇತರ ಜಿಲ್ಲೆಗಳ ಮಾದರಿಯಲ್ಲಿ ಕೊಡಗಿಗೂ ಉಚಿತ ವಿದ್ಯುತ್ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಇಲ್ಲಿಯವರೆಗೆ ಇದು ಕಾರ್ಯಗತವಾಗಿಲ್ಲ, ಇದರಿಂದ ವಿದ್ಯುತ್ ಬಿಲ್ ಹೊರೆ ಬೆಳೆಗಾರರ ಮೇಲೆ ಬೀಳುತ್ತಿದ್ದು, ಆರ್ಥಿಕ ಸಂಕಷ್ಟದ ನಡುವೆ ಪಾವತಿ ಅಸಾಧ್ಯವಾಗಿದೆ. ಆದ್ದರಿಂದ ಹಳೆಯ ಬಿಲ್‌ಗಳನ್ನು ಮನ್ನಾ ಮಾಡಿ ತಕ್ಷಣ ಉಚಿತ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದರು.
ಕಾಫಿ ಬೆಳೆಗಾರರಾದ ಚಂದ್ರಶೇಖರ್ ಹೇರೂರು, ಗೌತಮ್ ಕಲ್ಲೂರು, ಕೊಮಾರಪ್ಪ, ಕ್ಲೆöÊವ ಪೊನ್ನಪ್ಪ, ಶಾಶ್ವತ್ ಕೋಟೆರ, ದಾಸಂಡ ಜಗದೀಶ್, ಅಯ್ಯಣ್ಣ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.