ಗುಡ್ಡೆಹೊಸೂರು, ಫೆ. ೩: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ಸಲ್ಲಿಸಲಾಯಿತು.
ಮುಖ್ಯವಾಗಿ ಗುಡ್ಡೆಹೊಸೂರು, ಮಾದಾಪಟ್ಟಣ ಮತ್ತು ಅತ್ತೂರು ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮತ್ತು ಬೊಳ್ಳೂರು ಗ್ರಾಮದ ಸರ್ವೆ ನಂ.೧/೧ರ ಉರೂಡುವೆ ಜಾಗದಲ್ಲಿ ವಾಸವಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಬಗ್ಗೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ಶಾಸಕರು ಸ್ಪಂದಿಸಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಬಗೆಹರಿಸುವುದಾಗಿ ತಿಳಿಸಿದರು. ಬೊಳ್ಳೂರು ಗ್ರಾಮದ ೧/೧ರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅರಣ್ಯ ಹಕ್ಕು ಸಮಿತಿ ರಚನೆ ಮಾಡಿ ವರದಿ ನೀಡಲು ಸೂಚಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಎಸ್.ಎಸ್., ಉಪಾಧ್ಯಕ್ಷೆ ಯಶೋಧ ಡಿ.ಜೆ. ಮತ್ತು ಸದಸ್ಯರಾದ ಪ್ರವೀಣ್ ಕುಮಾರ್, ಶಿವಪ್ಪ, ನಿತ್ಯಾನಂದ, ಲಕ್ಷö್ಮಣ, ಪ್ರದೀಪ್, ರಮೇಶ್, ಮಾದಪ್ಪ, ನಾರಾಯಣ, ಚಿದಾನಂದ ಗಂಗಮ್ಮ, ರುಕ್ಮಿಣಿ, ಸರ್ವಮಂಗಳ, ಸೌಮ್ಯ, ಉಮಾ, ಸುಶೀಲ, ಉಷಾ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ಯಾಮ್ ಎಸ್.ಟಿ. ಉಪಸ್ಥಿತರಿದ್ದರು.