ಗುಡ್ಡೆಹೊಸೂರು, ಫೆ. ೨: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಬಸವೇಶ್ವರ ದೇವರ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ಮಾರಿಯಮ್ಮ ದೇವರ ನೂತನ ದೇವಾಲಯದ ಪ್ರಾರಂಭೋತ್ಸವ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ಮೂರು ದಿನಗಳ ಕಾಲ ಗ್ರಾಮಸ್ಥರ ಸಮ್ಮುಖದಲ್ಲಿ ವಿವಿಧ ಹೋಮ, ಹವನ, ಪೂಜಾ ಕಾರ್ಯದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು.

ಪೂಜಾಕಾರ್ಯವನ್ನು ಅಂದಗೋವೆ ಗ್ರಾಮದ ಗಣೇಶ್ ಪುರೋಹಿತ ಮತ್ತು ತಂಡದವರು ನೆರವೇರಿಸಿದರು. ಈ ಪೂಜಾಕಾರ್ಯದಲ್ಲಿ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜನ ಸ್ವಾಮಿಗಳು ಮತ್ತು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮಿಗಳು ಭಾಗವಹಿಸಿದ್ದರು. ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ಸನಿಹದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಮಾರಿಯಮ್ಮ ಕ್ಷೇತ್ರದ ಪೂಜಾಕಾರ್ಯದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಸುಮಾರು ೪೮ ದಿನಗಳಿಂದ ವೃತಾಚರಣೆ ನಡೆಸಿ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಜ. ೨೬ ರಿಂದ ಜ. ೨೮ ರ ತನಕ ಮೂರು ದಿನಗಳ ಕಾಲ ವಿವಿಧ ಪೂಜೆಗಳು ನಡೆಯಿತು. ಸುಮಾರು ೮ ವರ್ಷಗಳ ಹಿಂದೆ ಇಲ್ಲಿ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಗೊಂಡಿತ್ತು.

- ಗಣೇಶ್ ಕುಡೆಕ್ಕಲ್