ಮಡಿಕೇರಿ, ಫೆ. ೩: ಬಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸುವ, ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ರಸ್ತೆಯನ್ನು ನಿರ್ಮಿಸುವಂತೆ ಆಗ್ರಹಿಸಿ ಇಂದು ನಡೆದ ಬಿರುನಾಣಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷೆ ಬುಟ್ಟಿಯಂಡ ಗೀತಾ ತಂಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಇಲ್ಲಿ ನಿರ್ಮಿಸಲಾಗಿರುವ ಸೇತುವೆ ಹಾಗೂ ಅಪೂರ್ಣವಾಗಿರುವ ರಸ್ತೆ ಯೋಜನೆಯನ್ನು ಕಾರ್ಯಗತ ಗೊಳಿಸುವುದರಿಂದ ಸ್ಥಳೀಯ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗಲಿದ್ದು, ಅರಣ್ಯ ಇಲಾಖೆಯ ತಡೆಯನ್ನು ಸರಿಪಡಿಸಿ ರಸ್ತೆ ನಿರ್ಮಿಸಲು ಸಂಬAಧಿಸಿದವರಿಗೆ ಗ್ರಾ.ಪಂ. ಮೂಲಕ ಮನವಿ ಸಲ್ಲಿಸಲು ನಿರ್ಣಯ ಮಾಡಲಾಯಿತು. ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾಯಪಂಡ ಮಧು ಮೋಟಯ್ಯ, ಬೊಟ್ಟಂಗಡ ಎಂ. ರಾಜು ಮತ್ತಿತರರು ಈ ಕುರಿತು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಗಮನಕ್ಕೆ ತಂದರು. ಕೂಟಿಯಾಲ ಜಾಗಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಬದಲಿ ಜಾಗವನ್ನು ಮಡಿಕೇರಿ ತಾಲೂಕಿನಲ್ಲಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತ ದಾಖಲೆಯನ್ನು ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅರಣ್ಯ ಇಲಾಖೆಯ ತಡೆಯನ್ನು ಸರಿಪಡಿಸಿ ರಸ್ತೆ ನಿರ್ಮಿಸಲು ಸಂಬAಧಿಸಿದವರಿಗೆ ಗ್ರಾ.ಪಂ. ಮೂಲಕ ಮನವಿ ಸಲ್ಲಿಸಲು ನಿರ್ಣಯ ಮಾಡಲಾಯಿತು. ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾಯಪಂಡ ಮಧು ಮೋಟಯ್ಯ, ಬೊಟ್ಟಂಗಡ ಎಂ. ರಾಜು ಮತ್ತಿತರರು ಈ ಕುರಿತು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಗಮನಕ್ಕೆ ತಂದರು. ಕೂಟಿಯಾಲ ಜಾಗಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಬದಲಿ ಜಾಗವನ್ನು ಮಡಿಕೇರಿ ತಾಲೂಕಿನಲ್ಲಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತ ದಾಖಲೆಯನ್ನು ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಆಕ್ಷೇಪ ವ್ಯಕ್ತಗೊಂಡಿತು.
ಸದ್ಯದಲ್ಲಿ ಸೆಸ್ಕ್ಗೆ ಸಂಬAಧಿಸಿದAತೆ ಪ್ರತ್ಯೇಕ ಸಭೆಯೊಂದನ್ನು ಕರೆಯಲು ತೀರ್ಮಾನಿಸಲಾಯಿತು. ಕೃಷಿ, ಸಮಾಜ ಕಲ್ಯಾಣ, ಪಶು ಸಂಗೋಪನೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇಲಾಖೆಯ ಯೋಜನೆಗಳ ಬಗ್ಗೆ ವಿವರಿಸಿದರು. ನೆಲ್ಲೀರ ಮಧು, ಅಣ್ಣಳಮಾಡ ಲಾಲ, ಕರ್ತಮಾಡ ನಂದ ಮತ್ತಿತರರು ಚರ್ಚೆಯಲ್ಲಿ ಭಾಗಿಗಳಾಗಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಅಮ್ಮತ್ತೀರ ರಾಜೇಶ್, ಪಿ.ಡಿ.ಓ. ರವಿ ಪಾಲ್ಗೊಂಡಿದ್ದರು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಅಭಿಯಂತರ ಮಹದೇವ್ ಅವರು ಸಭೆಯ ನಿರ್ಣಯವನ್ನು ಮೇಲ್ಮಟ್ಟಕ್ಕೆ ಕಳುಹಿಸುವ ಕುರಿತು ಹೇಳಿದರು.