ಮಡಿಕೇರಿ, ಫೆ. ೨: ಮನೆಯಲ್ಲಿಯೇ ಇದ್ದು ಉಚಿತವಾಗಿ ತಜ್ಞ ವೈದ್ಯರಿಂದ ಚಿಕಿತ್ಸಾ ಸಲಹೆ ಪಡೆಯುವ ಸಲುವಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ

ಇ-ಸಂಜೀವಿನಿ ಆ್ಯಪ್‌ಅನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆನಂದ್ ಅವರು ಮಾಹಿತಿ ನೀಡಿದರು. ಇಂದು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇ-ಸಂಜೀವಿನಿ ಯೋಜನೆಯ ಮೂಲಕ ರಾಜ್ಯದಲ್ಲಿ ೩೬ ಲಕ್ಷ ಮಂದಿ ತಮ್ಮ ಮನೆಯಲ್ಲಿಯೇ ಕುಳಿತು ತಜ್ಞ ವೈದ್ಯರಿಂದ ತಮ್ಮ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸಾ ಸಲಹೆ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ೩೬,೫೮೪ ಮಂದಿ ಚಿಕಿತ್ಸೆ ಪಡೆದಿದ್ದಾರೆ. ತಾ. ೧ ರಂದು ಒಂದೇ ದಿನದಲ್ಲಿ ೧೩೭ ಮಂದಿ ಆ್ಯಪ್ ಬಳಸಿದ್ದಾರೆ. ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲ ಸಂಪರ್ಕ ಇದ್ದರೆ ಸಾಕು, esಚಿಟಿರಿeevಚಿಟಿioಠಿಜ ಆ್ಯಪ್ ಬಳಸಿ ಅಥವಾ ‘hಣಣಠಿs://esಚಿಟಿರಿeevಚಿಟಿioಠಿಜ.iಟಿ’ ವೆಬ್‌ಸೈಟ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸಾ ಸಲಹಾ ಚೀಟಿಯನ್ನು (ಪ್ರಿಸ್ಕ್ರಿಪ್ಶನ್) ಪಡೆದು ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಪಡೆದುಕೊಳ್ಳಬಹುದೆಂದು ಮಾಹಿತಿ ನೀಡಿದರು.

ಫೋನ್ ಬಳಸುವವರು ಪ್ಲೇಸ್ಟೋರ್‌ನಿಂದ esಚಿಟಿರಿeevಚಿಟಿioಠಿಜ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ‘hಣಣಠಿs://esಚಿಟಿರಿeevಚಿಟಿioಠಿಜ.iಟಿ’ ವೆಬ್‌ಸೈಟ್‌ಗೆ ಭೇಟಿಯಾಗಬಹುದು.

ಮೊದಲಿಗೆ ಫೋನ್ ಸಂಖ್ಯೆಯ ಮೂಲಕ ನೋಂದಣಿಯಾದ ಬಳಿಕ ಒ.ಟಿ.ಪಿ ಬರುತ್ತದೆ. ಇದನ್ನು ನಮೂದಿಸಿದ ಬಳಿಕ ಟೋಕನ್ ಸಂಖ್ಯೆ ದೊರಕುತ್ತದೆ. ಈ ಟೋಕನ್ ಸಂಖ್ಯೆ ನೀಡಿ ಲಾಗಿನ್ ಆಗಬೇಕು. ರೋಗಿಗೆ ಸಂಬAಧಿಸಿದ ದಾಖಲೆಗಳು, ಪ್ರಯೋಗಾಲಯ ವರದಿಗಳು ಇದ್ದಲ್ಲಿ ಅಪ್‌ಲೋಡ್ ಮಾಡಬಹುದು. ಟೋಕನ್ ಸಂಖ್ಯೆ ಅನುಗುಣವಾಗಿ ಇತರರಿಗೆ ಚಿಕಿತ್ಸಾ ಸಲಹೆ ನೀಡಿದ ಬಳಿಕ ನಿಮ್ಮ ಅವಧಿ ಬಂದೊಡನೆ ಕರೆ ಮಾಡಲು ಸೂಚನೆ ಬರುತ್ತದೆ. ವೀಡಿಯೋ, ಆಡಿಯೋ, ಮೆಸೇಜ್ ಮುಖಾಂತರ ವೈದ್ಯರೊಂದಿಗೆ ಸಂವಾದ ನಡೆಸಿ ಸಲಹೆ ಚೀಟಿ ಫೋನ್ ಸಂಖ್ಯೆಗೆ ರವಾನೆಯಾಗುತ್ತದೆ. ಸಮೀಪದ ಸರಕಾರಿ ಆಸ್ಪತ್ರೆಗಳಿಂದ ಚೀಟಿ ತೋರಿಸಿ ಔಷಧಿ ಪಡೆದುಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೯ ಗಂಟೆಯವರೆಗೆ ಸೇವೆ ಲಭ್ಯವಿರಲಿದ್ದು, ಸಾಮಾನ್ಯ ವೈದ್ಯರು, ತಜ್ಞ ವೈದ್ಯರ ಅನುಸಾರ ಸೇವೆ ದೊರಕಲಿದೆ. ಟೋಕನ್ ಒಂದು ದಿನಕ್ಕೆ ಮಾತ್ರ ಬಳಸಬಹುದಾಗಿದೆ.