ಮಡಿಕೇರಿ, ಫೆ. ೨: ಪ್ರಸಕ್ತ ೨೦೨೧-೨೨ ಸಾಲಿನಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯದ ಜನಾಂಗದ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೃಷಿ ಉದ್ದೇಶಕ್ಕೆ ಡೀಸೆಲ್ ಮೋಟಾರ್ ಮತ್ತು ಪೈಪ್‌ಗಳ ಖರೀದಿಗೆ, ಕಾಫಿ, ಭತ್ತ ಬೆಳೆಯುತ್ತಿರುವ ಜಮೀನಿಗೆ ತಂತಿ ಬೇಲಿ ಅಳವಡಿಕೆಗೆ ಹಾಗೂ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಅಂಗಡಿ ವ್ಯಾಪಾರಕ್ಕಾಗಿ, ಸರಕು ಸಾಗಾಣಿಕೆ ವಾಹನ ಖರೀದಿಗೆ, ರ‍್ಯಾಪ್ಟಿಂಗ್ ಬೋಟ್ ಮತ್ತು ಸಲಕರಣೆ ಖರೀದಿಗೆ, ಹಂದಿ ಸಾಕಾಣಿಕೆಗೆ, ಹಸು ಸಾಕಾಣಿಕೆ, ಆಡು, ಕುರಿ, ಸಾಕಾಣಿಕೆಗೆ ಸಹಾಯಧನ ನೀಡುವ ಸಂಬAಧ ಪರಿಶಿಷ್ಟ ಪಂಗಡದ ಜೇನುಕುರುಬ, ಕೊರಗ ಜನಾಂಗದವರಿAದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೧೨ ಕೊನೆಯ ದಿನವಾಗಿದೆ. ಅರ್ಜಿಯೊಂದಿಗೆ ಜಾತಿ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಅರಣ್ಯ ಹಕ್ಕು ಪತ್ರ/ಆರ್.ಟಿಸಿ. ಯನ್ನು ಸಲ್ಲಿಸಬೇಕು.

ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಜಿಲ್ಲಾ ಪಂಚಾಯಿತಿ ಕಟ್ಟಡ, ೧ನೇ ಮಹಡಿ, ಕೊಡಗು ಜಿಲ್ಲೆ, ಮಡಿಕೇರಿ ೦೮೨೭೨-೨೦೦೫೦೦, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ವೀರಾಜಪೇಟೆ ೦೮೨೭೪-೨೬೧೨೬೧ ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ೦೮೨೭೬-೨೮೧೧೧೫ ಮತ್ತು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ೦೮೨೭೨-೨೨೩೫೫೨ ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.