ಶೀಘ್ರದಲ್ಲೇ ಹೆಚ್ಚುವರಿ ೪ ಘಟಕ ಸ್ಥಾಪನೆ

ಸೋಮವಾರಪೇಟೆ, ಫೆ. ೨: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ವಿಭಾಗಕ್ಕೆ ರಾಜ್ಯ ಆರೋಗ್ಯ ಇಲಾಖೆ ಮೂಲಕ ನೂತನವಾಗಿ ೧ ಡಯಾಲಿಸಿಸ್ ಯಂತ್ರ ಆಗಮಿಸಿದೆ.

ಈಗಾಗಲೇ ಇರುವ ಮೂರು ಯಂತ್ರಗಳಲ್ಲಿ ೧ ಯಂತ್ರ ಸಂಪೂರ್ಣ ಹಾಳಾಗಿದ್ದು, ಉಳಿದಿರುವ ೨ ಯಂತ್ರಗಳಲ್ಲಿಯೂ ಆಗಾಗ್ಗೆ ತಾಂತ್ರಿಕ ಸಮಸ್ಯೆ ಕಂಡುಬರುತ್ತಿರುವುದರಿAದ ರೋಗಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ಸ್ಪಂದಿಸಿದ್ದು, ಇಲಾಖೆಯ ಮೂಲಕ ನೂತನವಾಗಿ ಒಂದು ಯಂತ್ರವನ್ನು ಆಸ್ಪತ್ರೆಗೆ ತರಿಸಿದ್ದಾರೆ.

ಓಸಿಎಂ ಕಂಪೆನಿಯ ನೂತನ ಯಂತ್ರವನ್ನು ಡಯಾಲಿಸಿಸ್ ಘಟಕಕ್ಕೆ ತಂದಿದ್ದು, ಕಂಪೆನಿಯ ಸಿಬ್ಬಂದಿಗಳು ಆಗಮಿಸಿ ಅಳವಡಿಕೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಿಂದ ೨ ಹಾಗೂ ಇಲಾಖೆಯ ಮೂಲಕ ೨ ಸೇರಿದಂತೆ ಒಟ್ಟು ೪ ಯಂತ್ರಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.