*ಗೋಣಿಕೊಪ್ಪ, ಫೆ. ೨: ನಿಟ್ಟೂರು ಗ್ರಾಮ ಪಂಚಾಯಿತಿಯ ಕಾಲಭೈರವೇಶ್ವರ ದೇವಸ್ಥಾನ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ನಿಟ್ಟೂರು ಗ್ರಾಮಸ್ಥರು, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಕಾಲಭೈರವೇಶ್ವರ ದೇವರಿಗೆ ಪೂಜೆ ನೆರವೇರಿಸುವ ಮೂಲಕ ರೂ. ೫೦ ಲಕ್ಷದಲ್ಲಿ ಡಾಂಬರೀಕರಣಗೊAಡ ರಸ್ತೆಯನ್ನು ಉದ್ಘಾಟಿಸಿದ ಬಳಿಕ ರೂ. ೫೦ ಲಕ್ಷ ಅನುದಾನದಲ್ಲಿ ೧ ಕಿ.ಮೀ. ಉದ್ದದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ, ದೇವಸ್ಥಾನದ ಮುಂಭಾಗದ ವಾಹನ ನಿಲುಗಡೆ ಸ್ಥಳಕ್ಕೆ ಡಾಂಬರೀಕರಣ ಮಾಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಅಲ್ಲದೇ, ಹೆಚ್ಚುವರಿಯಾಗಿ ನಿಟ್ಟೂರು ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ರೂ. ೮೫ ಲಕ್ಷ ಅನುದಾನವನ್ನು ನೀಡಲಾಗಿದ್ದು, ಕಾರ್ಮಾಡು ಮುಖ್ಯ ರಸ್ತೆಯಿಂದ ಬೆಂಡೆಗುತ್ತಿ ಕಾಲೋನಿ ರಸ್ತೆ, ವಡ್ಡರಮಾಡು ಕಾಲೋನಿ ರಸ್ತೆ, ಕುಳಿಯನಕೊಲ್ಲಿ ಪೈಸಾರಿ ರಸ್ತೆ, ಕಾಟಿಮಾಡ ಕುಟುಂಬಸ್ಥರ ರಸ್ತೆ, ಮಲ್ಲೂರು, ಕುಂಬಾರಕಟ್ಟೆ ಕಾಲೋನಿ ಪಾಲದಳ ರಸ್ತೆ, ನಿಟ್ಟೂರು ಜಾಗಲೆ ರಸ್ತೆ, ನಿಟ್ಟೂರು-ಕಾನೂರು ಮುಖ್ಯ ರಸ್ತೆಯ ವಡ್ಡರಮಾಡುವಿನ ಮಾಪಂಗಡ ಪೊನ್ನಪ್ಪ ಕುಟುಂಬಸ್ಥರ ರಸ್ತೆ, ವಡ್ಡರಮಾಡು ಕಟ್ಟೆ ರಸ್ತೆ, ಕೊಟ್ಟಗೇರಿ ಮಾಚಂಗಡ ದರ್ಶನ್ ಪೂವಯ್ಯ, ಸಂಜು ಕುಟುಂಬಸ್ಥರ ರಸ್ತೆ, ಕೊಟ್ಟಗೇರಿ ಮಾಚಂಗಡ ಅಯ್ಯಪ್ಪ ಕುಟುಂಬಸ್ಥರ ರಸ್ತೆ, ಮಳೆಹಾನಿ ದುರಸ್ತಿಯಲ್ಲಿ ಜಾಗಲೆ ಮುಖ್ಯ ರಸ್ತೆಯಿಂದ ತಟ್ಟೆಕೆರೆ ರಸ್ತೆ, ಕಾಮಗಾರಿ ನಡೆಯುತ್ತಿದೆ ಇದರೊಂದಿಗೆ ಪಾಲದಳ ಕುಂಬಾರಕಟ್ಟೆ ಕಾಲೋನಿ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, ಕೊಟ್ಟಗೇರಿ ಮಹಾವಿಷ್ಣು ದೇವಸ್ಥಾನ ರಸ್ತೆ, ಮಾಪಂಗಡ ಮುದ್ದಯ್ಯ ಕುಟುಂಬಸ್ಥರ ರಸ್ತೆ, ಮಾಚಂಗಡ ಕುಟುಂಬಸ್ಥರ ಕೈಮಡ ರಸ್ತೆ, ನಿಡುವೆಕೇರಿ ರಸ್ತೆ, ಪಾಲದಳ್ಳ ಅಂಗನವಾಡಿಯಿAದ ತಟ್ಟಕೇರಿ ಅಂಗನವಾಡಿ ಸಂಪರ್ಕ ರಸ್ತೆ, ಕೊಟ್ಟಗೇರಿ ಅಳಮೇಂಗಡ ದಿಲು, ಹರಿಜನ ಕಾಲೋನಿಗೆ ರಸ್ತೆ, ಮುಕ್ಕಾಟೀರ, ಅಣ್ಣಾಳಮಾಡ ಕುಟುಂಬಸ್ಥರ ರಸ್ತೆ, ಅಳಮೇಂಗಡ ಸೋಮಯ್ಯ ಕುಟುಂಬಸ್ಥರ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ ಮೋರಿ ದುರಸ್ತಿ, ವಡ್ಡರಮಾಡು ಅಂಗನವಾಡಿ ಕಟ್ಟಡ ದುರಸ್ತಿ, ಕಾರ್ಯ ಕೈಗೊಳ್ಳಲಾಗುತ್ತಿದೆ. ಆಶ್ರಮ ಶಾಲೆ, ನಿಟ್ಟೂರು ಡಿಜಿಟಲ್ ಗ್ರಂಥಾಲಯ ನಿರ್ಮಾಣ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ, ಕೆರೆ ಕಾಮಗಾರಿಗಳಲ್ಲಿ ಕಾರ್ಮಾಡು ಕೆರೆ ಅಭಿವೃದ್ಧಿ, ಚೀರಂಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿ ಹಾಗೂ ತಾಲೂಕು ಪಂಚಾಯಿತಿ ಕಾಮಗಾರಿಯಲ್ಲಿ ವಡ್ಡರಮಾಡ ಹೆಚ್.ಸಿ. ಚಂಗಪ್ಪ ಕುಟುಂಬಸ್ಥರ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞõÁರಂಡ ಕವಿತಾಪ್ರಭು, ರಾಜ್ಯ ಕೃಷಿ ಮೋರ್ಚಾ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಕಾಟಿಮಾಡ ಶರೀನ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಮಾಪಂಗಡ ಸುಜಾ ಪೂಣಚ್ಚ, ವಿಜಯಲಕ್ಷಿ÷್ಮ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ತಾ.ಪಂ. ಮಾಜಿ ಸದಸ್ಯ ಪ್ರಕಾಶ್, ಪ್ರಮುಖರಾದ ಸುಬ್ರಮಣಿ, ಪಡಿಞõÁರಂಡ ಪ್ರಭು, ಅರಮಣಮಾಡ ಸತೀಶ್, ಗ್ರಾ.ಪಂ. ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದರು.