ಮಡಿಕೇರಿ, ಫೆ. ೨: ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅಭಿವೃದ್ಧಿ ಸಮಿತಿಯನ್ನು ಪುನರ್ರಚನೆ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಆದೇಶಿಸಿದ್ದಾರೆ.
ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ, ಅಧ್ಯಕ್ಷರಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಹಾಗೂ ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿ. ಚಿದ್ವಿಲಾಸ್, ಸುನಿಲ್ ನಂಜಪ್ಪ, ರವಿ ಪಿ.ಎಂ, ರಾಣಿ ಮಾಚಯ್ಯ, ಕವಿತ ಪಿ.ಪಿ, ಡಾ. ಟಿ.ಡಿ. ತಿಮ್ಮಯ್ಯ, ಸರಸ್ವತಿ ಬಿ.ಎಂ., ಈರಪ್ಪ ಕೆ.ಎ., ಅರುಣ್, ಕಾಸೀಮ್, ಮ್ಯಾಥ್ಯೂ ಕೆ.ಪಿ., ಬೊಳ್ಳಜೀರ ಅಯ್ಯಪ್ಪ ಆಯ್ಕೆಯಾಗಿ ದ್ದಾರೆ, ಸದಸ್ಯ ಕಾರ್ಯದರ್ಶಿಯಾಗಿ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ.