ಮಡಿಕೇರಿ, ಫೆ.೨: ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ೨೦೨೧ ನೇ ಸಾಲಿನಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿ ಸಂಬAಧ ಈಗಾಗಲೇ ಲಿಖಿತ ಪರೀಕ್ಷೆಗೆ ಹಾಜರಾಗಿ ೧:೫ ರ ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ತಾ. ೫ ಮತ್ತು ೧೯ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣ(ಮ್ಯಾನ್ಸ್ ಕಾಂಪೌAಡ್) ದಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ೧ ನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಾ. ೨೫ ರಂದು ಸಿಐಡಿ, ಕಚೇರಿ, ಬೆಂಗಳೂರಿನಿAದ ತಯಾರಿಸಿ ನೀಡಿದ್ದು, ಈ ಪಟ್ಟಿಯನ್ನು ಜಿಲ್ಲೆಯ ಪೊಲೀಸ್ ನೇಮಕಾತಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಜನವರಿ, ೨೯ ರಂದು ತೆರೆಯಲಾಗಿದ್ದು, ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಅಭ್ಯರ್ಥಿಗಳ ಗಮನಕ್ಕಾಗಿ ಪ್ರಕಟಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರಾದ ಕ್ಷಮಾಮಿಶ್ರ ಅವರು ತಿಳಿಸಿದ್ದಾರೆ.