.jpg)
ನವದೆಹಲಿ, ಫೆ. ೧: ೨೦೨೨-೨೩ ಸಾಲಿಗೆ ಕೇಂದ್ರ ಆಯವ್ಯಯ ಘೋಷಣೆ ಮಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೂ. ೩೯.೪೫ ಲಕ್ಷ ಕೋಟಿಯ ಬೃಹತ್ ಮೊತ್ತವನ್ನು ಈ ಸಾಲಿಗೆ ಮೀಸಲಿಡುವುದಾಗಿ ಇಂದು ನವದೆಹಲಿಯಲ್ಲಿ ನಡೆದ ಆಯವ್ಯಯ ಮಂಡನೆ ಸಂದರ್ಭ ತಿಳಿಸಿದರು.ಹೆದ್ದಾರಿ – ರೈಲ್ವೇ ನಿರ್ಮಾಣಗಳಿಗೆ ದೈತ್ಯ ಯೋಜನೆಗಳನ್ನು ಘೋಷಿಸುವುದರೊಂದಿಗೆ ಆತ್ಮನಿರ್ಭರತೆ ಉತ್ತೇಜಿಸುವ ಸಲುವಾಗಿ ರಕ್ಷಣಾ ಪಡೆಗಳ ಬಳಕೆಗೆ ಅಗತ್ಯವಿರುವ ಪರಿಕರಗಳನ್ನು ದೇಶದಲ್ಲಿಯೇ ತಯಾರಿ ಮಾಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎಂದಿನAತೆ ಡಿಜಿಟಲೈಸೇಷನ್ಗೆ ಮಹತ್ವದ ಒತ್ತು ನೀಡಲಾಗಿದ್ದು ೨೦೨೫ ರೊಳಗೆ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅಂತರ್ಜಾಲ ಕಲ್ಪಿಸುವ ಭರವಸೆ ದೊರಕಿದೆ. ನಗರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಕ್ರಿಪ್ಟೋ ಕರೆನ್ಸಿ ದುರ್ಬಳಕೆಯನ್ನು ನಿಯಂತ್ರಿಸಲು ಕ್ರಿಪ್ಟೋ ವರ್ಗಾವಣೆಗೆ ಬೃಹತ್ ಮೊತ್ತ ಶೇ.೩೦ ರಷ್ಟು ತೆರಿಗೆ ವಿಧಿಸಲಾಗಿದ್ದು, ಕ್ರಿಪ್ಟೋ ಆಸಕ್ತರಿಗೆ ಆಘಾತ ಮೂಡಿಸಿದೆ. ಇದಲ್ಲದೆ ಕೇಂದ್ರದಿAದಲೇ ಆರ್.ಬಿ.ಐ ಮೂಲಕ ಡಿಜಿಟಲ್ ಕರೆನ್ಸಿಗೆ ಚಾಲನೆ ದೊರಕಲಿದೆ. ವಿಶ್ವವನ್ನೇ ತಲ್ಲಣಗೊಳಿಸಬಹುದಾದ ಹವಾಮಾನ ವೈಪರಿತ್ಯ ತಡೆಯಲು ರಾಷ್ಟçದಲ್ಲಿ ಹಲವು ಯೋಜನೆಗಳಿಗೆ ಅನುದಾನ ಮೀಸಲಿಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೂಡ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಈ ವರ್ಷ ಜನವರಿಯಲ್ಲಿ ೧.೪ ಲಕ್ಷ ಕೋಟಿಯಷ್ಟು ಜಿ.ಎಸ್.ಟಿ ಸಂಗ್ರಹಾತಿಯಾಗಿದ್ದು, ಪ್ರಾಮಾಣಿಕ ತೆರಿಗೆದಾರರಿಗೆ ನಿರ್ಮಲಾ ಸೀತಾರಾಮನ್ ಅವರು ಕೃತಜ್ಞತೆ ಸಲ್ಲಿಸಿದರು. ಪ್ರಸ್ತುತ ವರ್ಷ ಶೇ.೯.೨ ರಷ್ಟು ಆರ್ಥಿಕ ಬೆಳವಣಿಗೆಯಾಗಲಿರುವುದಾಗಿ ಅವರು ಹೇಳಿದರು.
ಆಯವ್ಯಯದ ಮೊದಲ ಆದ್ಯತೆಯಾಗಿ ಪಿ.ಎಮ್ ಗತಿಶಕ್ತಿ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದ್ದು, ರಸ್ತೆ, ರೈಲ್ವೇ, ವಿಮಾನ ನಿಲ್ದಾಣ, ಬಂದÀರು, ಸಾರ್ವಜನಿಕ ಸಂಚಾರ, ಸಮುದ್ರ ಸಂಚಾರ ಹಾಗೂ ಲಾಜಿಸ್ಟಿಕ್ಸ್ಗೆ ಉತ್ತೇಜನ ನೀಡಲಾಗಿದೆ.
ರಸ್ತೆ: ಸಾರ್ವಜನಿಕರ ಹಾಗೂ ಸರಕುಗಳ ವೇಗದ ಸಂಚಾರಕ್ಕಾಗಿ ೨೫,೦೦೦ ಕಿ.ಮೀ ನಷ್ಟು ರಾಷ್ಟಿçÃಯ ಹೆದ್ದಾರಿ ನಿರ್ಮಾಣ ನಡೆಸಲು ಯೋಜನೆ ರೂಪಿಸಲಾಗಿದ್ದು, ರೂ.೨೦,೦೦೦ ಕೋಟಿ ಅನುದಾನ ಮೀಸಲಿಡಲಾಗಿದೆ.
ರೈಲ್ವೇ: ರೈಲ್ವೇ ಇಲಾಖೆಯ ಮೂಲಕ ನೂತನ ಉತ್ಪನ್ನಗಳನ್ನು ತಯಾರಿಸುವದಕ್ಕೆ ಉತ್ತೇಜಿಸಲಾಗಿದ್ದು, ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಮೂಲಕ ಸ್ಥಳೀಯ ಮಾರುಕಟ್ಟೆಗೆ ಪ್ರೋತ್ಸಾಹಿಸಲಾಗುವುದು.
ಹೊಸ ತಂತ್ರಜ್ಞಾನದ ೪೦೦ ವಂದೇ ಭಾರತ್ ರೈಲುಗಳನ್ನು ೩ ವರ್ಷಗಳಲ್ಲಿ ಉತ್ಪಾದಿಸಲು ಗುರಿ ಹೊಂದಲಾಗಿದೆ. ಕವಚ್ ಸುರಕ್ಷತಾ ಯೋಜನೆಯಡಿಯಲ್ಲಿ ೨,೦೦೦ ಕಿ,ಮೀ ನಷ್ಟು ವ್ಯಾಪ್ತಿಯನ್ನು ಒಳಪಡಿಸಲಾಗುವುದು. ಮೆಟ್ರೋ ಸೌಲಭ್ಯಗಳು, ಸಿವಿಲ್ ಕಾಮಗಾರಿಗಳನ್ನು ದೇಶದ ಅವಶ್ಯಕತೆಗೆ ತಕ್ಕಂತೆ ನಿರ್ಮಾಣಮಾಡಲಾಗುತ್ತದೆ.
ಪರ್ವತ್ಮಾಲಾ: ಗುಡ್ಡಗಾಡು ಪ್ರದೇಶಗಳಲ್ಲಿ ಪರಿಸರಕ್ಕೆ ಮಾರಕವಾಗಬಹುದಾದ ರಸ್ತೆಗಳ ನಿರ್ಮಾಣದ ಬದಲಾಗಿ ರೋಪ್ವೇ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಪ್ರವಾಸೋದ್ಯಮವನ್ನೂ ಈ ಮೂಲಕ ಉತ್ತೇಜಿಸಿದಂತಾಗುತ್ತದೆ. ೬೦ ಕಿ.ಮೀ ನಷ್ಟು ೮ ರೋಪ್ವೇ ಯೋಜನೆಗಳಿಗೆ ಗುತ್ತಿಗೆ ನೀಡಲಾಗುವುದು.
ಕೃಷಿ ಆಧುನೀಕತೆಗೆ ಒತ್ತು: ೨೦೨೧-೨೨ ನೇ ಇಸವಿಯಲ್ಲಿ ಬೆಳೆದ ಗೋದಿ ಹಾಗೂ ಭತ್ತದ ಬೆಳೆಗಳನ್ನು ೧೬೩ ಲಕ್ಷ ಕೃಷಿಕರಿಂದ ೧,೨೦೮ ಲಕ್ಷ ಮೆಟ್ರಿಕ್ ಟನ್ನಷ್ಟು ಖರೀದಿ ಮಾಡಲಾಗುವುದು. ಈ ಮೂಲಕ ರೂ.೨.೩೭ ಲಕ್ಷ ಕೋಟಿ ನಗದನ್ನು ನೇರವಾಗಿ ಕನಿಷ್ಟ ಬೆಂಬಲ ಬೆಲೆ ಮೂಲಕ ರೈತರುಗಳ ಖಾತೆಗೆ ಜಮಾ ಮಾಡಲಾಗುವುದು.
ರಾಗಿ ಬೆಳೆಯನ್ನು ಅಂತರರಾಷ್ಟಿçÃಯ ಬ್ರಾಂಡಿAಗ್ ನೀಡಿ ಪ್ರೋತ್ಸಾಹಿಸುವುದಲ್ಲದೆ, ‘ಕಿಸಾನ್ ಡ್ರೋನ್’ ಮೂಲಕ ರೈತರ ಬೆಳೆ ಸಮೀಕ್ಷೆ, ಔಷಧಿ ಸಿಂಪಡನೆಯನ್ನು ಡ್ರೋನ್ ತಂತ್ರಜ್ಞಾನದ ಮೂಲಕ ನೆರವೇರಿಸಲು ಯೋಜನೆಗಳನ್ನು ರೂಪಿಸಲಾಗಿದೆ.
ಕೃಷಿ ಕಾಲೇಜುಗಳ ಸಿಲಬಸ್ಗಳನ್ನು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಸಾವಯವ ಕೃಷಿ ವಿಷಯಗಳನ್ನು ಒಳಗೊಳ್ಳುವಂತೆ ಬದಲಾಯಿಸಲಾಗುವುದು.
ಕೃಷಿಗೆ ತಂತ್ರಜ್ಞಾನ ಸಹಾಯ ಸಂಬAಧ ಕೃಷಿ ಸಹಾಯಕ್ಕಾಗಿ ಪ್ರಾರಂಭವಾಗಿರುವ ನೂತನ ಸಂಸ್ಥೆಗಳಿಗೆ (ಸ್ಟಾರ್ಟ್ಅಪ್) ನಬಾರ್ಡ್ ಮೂಲಕ ಪ್ರೋತ್ಸಹಧನ ಒದಗಿಸಲಾಗುವುದು.
ಕೆನ್-ಬೆಟ್ವಾ ಯೋಜನೆ: ಈ ಯೋಜನೆ ಮೂಲಕ ರೂ.೪೪,೬೦೫ ಕೋಟಿ ವೆಚ್ಚದಲ್ಲಿ ೯.೦೮ ಲಕ್ಷ ಹೆಕ್ಟೇರ್ನಷ್ಟು ಕೃಷಿ ಜಾಗಕ್ಕೆ ನೀರಾವರಿ ಸೌಲಭ್ಯ, ೬೨ ಲಕ್ಷ ಮಂದಿಗೆ ಕುಡಿಯುವ ನೀರಿನ ಸೌಲಭ್ಯ, ೧೦೩ ಮೆಗಾವ್ಯಾಟ್ನಷ್ಟು ಹೈಡ್ರೋ ಪವರ್ ಹಾಗೂ ೨೭ ಮೆಗಾವ್ಯಾಟ್ನಷ್ಟು ಸೋಲಾರ್ ಪವರ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುವುದು.
ಎಮ್.ಎಸ್.ಎಮ್.ಇ (ಅತಿ ಸಣ್ಣ ಹಾಗೂ ಸಣ್ಣ ಉದ್ದಿಮೆಗಳು)
ಅತಿ-ಸಣ್ಣ ಹಾಗೂ ಸಣ್ಣ ಉದ್ದಿಮೆಗಳ ಉತ್ತೇಜನಕ್ಕಾಗಿ ರೂ. ೨ ಲಕ್ಷ ಕೋಟಿ ಮೀಸಲಿಡಲಾಗುವುದು. ಈ ಮೂಲಕ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲಾಗುವುದು.
ಕೌಶಲ್ಯಾಭಿವೃದ್ಧಿ: ಪ್ರಸ್ತುತ ಉದ್ಯಮ ಜಗತ್ತಿಗೆ
(ಮೊದಲ ಪುಟದಿಂದ) ತಕ್ಕಂತೆ ಉದ್ಯಮಿಗಳಿಗೆ ಕೌಶಲ್ಯ ತರಬೇತಿ ನೀಡಲು ಕ್ರಮ ವಹಿಸಿ ನೂತನ ಉದ್ದಿಮೆಗಳಿಗೆ ಅವಕಾಶ ಕಲ್ಪಿಸುವುದು. ‘ಡ್ರೋನ್ ಶಕ್ತಿ’ ಅಡಿಯಲ್ಲಿ ನೂತನ ಸಂಸ್ಥೆಗಳಿಗೆ ಡ್ರೋನ್ ಉತ್ಪಾದನೆಗೆ ಪ್ರೋತ್ಸಾಹ ನೀಡುವುದಲ್ಲದೆ, ರಾಜ್ಯದ ಎಲ್ಲಾ ಐ.ಟಿ.ಐಗಳಲ್ಲಿ ಈ ಸಂಬAಧ ತರಬೇತಿಯನ್ನು ಸಹ ನೀಡಲಾಗುವುದು.
ಆಧುನಿಕ ಶಿಕ್ಷಣಕ್ಕೆ ಒತ್ತು - ಒನ್ – ಕ್ಲಾಸ್ ಒನ್ ಟಿವಿ ಚ್ಯಾನಲ್
ಪಿ.ಎಮ್ ‘ಈ-ವಿದ್ಯಾ’ ಮೂಲಕ ಪ್ರಸ್ತುತ ಇರುವ ೧೨ ಟಿ.ವಿ ಚ್ಯಾನಲ್ಗಳನ್ನು ೨೦೦ ಕ್ಕೇರಿಕೆ ಮಾಡಿ ಸ್ಥಳೀಯ ಭಾಷೆಗಳಲ್ಲಿ ದೂರದರ್ಶನದ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ೧-೧೨ನೇ ತರಗತಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಗಣಿತ ಹಾಗೂ ವಿಜ್ಞಾನ ಕಲಿಕೆಗೆ ೭೫೦ ವರ್ಚುವಲ್ ಲ್ಯಾಬ್ಗಳು ಹಾಗೂ ೭೫ ಕೌಶಲ್ಯಾಭಿವೃದ್ಧಿ ಈ-ಲ್ಯಾಬ್ಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು.
ಶಿಕ್ಷಣ ಸಂಬAಧ ಡಿಜಿಟಲ್ ವಿಶ್ವವಿದ್ಯಾಲಯ, ಆರೋಗ್ಯಕ್ಕೆ ಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆ ಹಾಗೂ ಕೋವಿಡ್ ಸಂದರ್ಭ ಮಾನಸಿಕವಾಗಿ ಬಳಲುತ್ತಿರುವವರಿಗೆ ಮಾನಸಿಕ ಚಿಕಿತ್ಸೆ ನೀಡುವ ಸಂಬAಧ ರಾಷ್ಟಿçÃಯ ಟೆಲಿ- ಮಾನಸಿಕ ಆರೋಗ್ಯ ಕಾರ್ಯಕ್ರಮ ಕಾರ್ಯರೂಪಕ್ಕೆ ತರಲಾಗುತ್ತದೆ. ಈ ಮೂಲಕ ೨೩ ಟೆಲಿ-ಮಾನಸಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಹಾಗೂ ಸಾಕ್ಷಮ್ ಅಂಗನವಾಡಿ ಹಾಗೂ ಪೋಷಣ್ ೨ ಯೋಜನೆ ತರಲಾಗಿದ್ದು, ೨ ಲಕ್ಷ ಅಂಗನವಾಡಿಗಳ ಏಳಿಗೆಗೆ ಯೋಜನೆ ರೂಪಿಸಲಾಗುವುದು.
ನಲ್ಲಿ ನೀರು ಸಂಪರ್ಕ – ಮನೆ ನಿರ್ಮಾಣ
‘ಹರ್ ಗರ್ ನಲ್ ಸೆ ಜಲ್’ ಅಡಿಯಲ್ಲಿ ಗುರುತಿಸಲಾದ ೮.೭ ಕೋಟಿ ಮನೆಗಳಲ್ಲಿ ೫.೫ ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಉಳಿದ ೩.೮ ಕೋಟಿ ಮನೆಗಳಿಗೆ ನೀರು ಸಂಪರ್ಕಕ್ಕಾಗಿ ರೂ. ೬೦,೦೦೦ ಕೋಟಿ ಮೀಸಲಿಡಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ೮೦ ಲಕ್ಷ ಮನೆಗಳ ನಿರ್ಮಾಣ ಪಿ.ಎಮ್ ಆವಾಸ್ ಯೋಜನೆಯಡಿಯಲ್ಲಿ ರೂ.೪೮,೦೦೦ ಕೋಟಿ ಅನುದಾನದಲ್ಲಿ ನೆರವೇರಲಿದೆ.
ಡಿಜಿಟಲೈಸ್ ಆಗಲಿರುವ ಅಂಚೆ ಖಾತೆಗಳು
೧.೫ ಲಕ್ಷ ಅಂಚೆ ಕಚೇರಿಗಳು ಡಿಜಿಟಲೈಸ್ ಬ್ಯಾಂಕಿAಗ್ ಸೌಲಭ್ಯದಡಿಯಲ್ಲಿ ಸೇರ್ಪಡೆಗೊಳ್ಳಲಿದ್ದು ನೆಟ್ಬ್ಯಾಂಕಿAಗ್, ಎ.ಟಿ.ಎಮ್, ಮೂಲಕ ಅಂಚೆ ಖಾತೆಗಳಿಂದ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಸೌಲಭ್ಯ ದೊರಕಲಿದೆ.
ಡಿಜಿಟಲ್ ಬ್ಯಾಂಕಿAಗ್, ಆನ್ಲೈನ್ ಪೇಮೆಂಟ್ಸ್ಗಳಿಗೆ ಹೆಚ್ಚು ಉತ್ತೇಜನ ನೀಡಿ ಸುಲಬ ಹಣ ವರ್ಗಾವಣೆಗೆ ಕ್ರಮ ವಹಿಸಲಾಗುವುದು. ದೇಶದ ೭೫ ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿAಗ್ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು.
ಇ-ಪಾಸ್ಪೋರ್ಟ್: ಅತ್ಯಾಧುನಿಕ ಚಿಪ್ ತಂತ್ರಜ್ಞಾನ ಬಳಸಿ ಇ-ಪಾಸ್ಪೋರ್ಟ್ಗಳ ವಿತರಣೆಗೆ ಕ್ರಮ ವಹಿಸಲಾಗುವುದು. ಪ್ರಸ್ತುತ ವರ್ಷದಿಂದಲೇ ಇದರ ವಿತರಣೆ ಮಾಡಲಾಗುವುದು.
ನಗರೀಕರಣ: ಸ್ವಾತಂತ್ರö್ಯ ಕಳೆದು ೧೦೦ ವರ್ಷಗಳ ಬಳಿಕ ಅರ್ಧದಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತಾರೆ ಎಂದು ಊಹಿಸಲಾಗಿದ್ದು, ನಗರೀಕರಣಕ್ಕೆ ಪ್ರೋತ್ಸಾಹ ನೀಡಲಾಗುವುದು. ನಗರೀಕರಣಕ್ಕೆ ಯೋಜನೆ ರೂಪಿಸಲು ತಜ್ಞರ ಸಲಹೆ ಪಡೆಯಲಾಗುವುದು.
ಹವಾಮಾನ ವೈಪರಿತ್ಯ ತಡೆ
ವಿಶ್ವವನ್ನೇ ತಲ್ಲಣಗೊಳಿಸಬಲ್ಲ ಹವಾಮಾನ ವೈಪರಿತ್ಯ ತಡೆಗೆ ಭಾರತವೂ ಸಜ್ಜಾಗಬೇಕಿದ್ದು, ಹಲವು ದೂರದೃಷ್ಟಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು.
ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಸಾರ್ವಜನಿಕ ಸಂಚಾರಿ ವ್ಯವಸ್ಥೆಗಳು ಆಧುನೀಕರಣಗೊಳಿಸುವ ಮೂಲಕ ಸಾರ್ವಜನಿಕ ಸಂಚಾರ ಬಳಕೆಗೆ ಜನರನ್ನು ಪ್ರೋತ್ಸಾಹಿಸಲಾಗುವುದು.
ಸೌರ ಶಕ್ತಿ: ಸೌರ ಶಕ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ೨೦೩೦ ರೊಳಗಾಗಿ ೨೮೦ ಮೆಗಾವಾಟ್ನಷ್ಟು ಸೋಲಾರ್ ಪವರ್ ಉತ್ಪಾದನೆಯ ಗುರಿ ಹೊಂದಲಾಗಿದೆ. ರೂ.೧೯,೫೦೦ ಕೋಟಿ ಅನುದಾನವನ್ನು ಇದಕ್ಕೆ ಮೀಸಲಿಡಲಾಗಿದೆ.
ಭೂ-ದಾಖಲಾತಿ ಡಿಜಿಟಲೈಸ್
ಭೂ-ದಾಖಲಾತಿಗಳ ಸಂಪೂರ್ಣ ಡಿಜಿಟಲೈಸೇಷನ್ಗೆ ಒತ್ತು ನೀಡಲಾಗಿದ್ದು, ೮ ಭಾಷೆಗಳಲ್ಲಿ ಡಿಜಿಟಲೀಕರಣಗೊಂಡ ದಾಖಲೆಗಳು ಲಭ್ಯವಿರಲಿದೆ.
ಆನ್ಲೈನ್ ಈ-ಬಿಲ್ ಸಿಸ್ಟಮ್ ಮೂಲಕ ಬಿಲ್ ಮಂಡನೆಗೊAಡು ೧೦ ದಿನಗಳೊಳಗೆ ಗುತ್ತಿಗೆದಾರನಿಗೆ ಶೇ.೭೫ ರಷ್ಟು ಹಣ ಪಾವತಿಯಾಗಲಿದೆ.
೫ಜಿ ತರಂಗಾAತರ ಹರಾಜು
ಅತ್ಯಂತ ವೇಗದ ಅಂತರ್ಜಾಲ ಸೌಲಭ್ಯಕ್ಕಾಗಿ ೫ಜಿ ಸೌಲಭ್ಯ ಕಲ್ಪಿಸುವ ನಿಟ್ಟನಲ್ಲಿ ತರಂಗಾAತರ ಹರಾಜು ಪ್ರಕ್ರಿಯೆ ಈ ವರ್ಷವೇ ನಡೆಯಲಿದೆ. ೨೩ ಟೆಲಿಕಾಮ್ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ. ೨೦೨೫ ರೊಳಗೆ ಹಳ್ಳಿ-ಹಳ್ಳಿಗಳಲ್ಲೂ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಉದ್ದೇಶವಿದ್ದು ಆಪ್ಟಿಕಲ್ ಫೈಬರ್ ಮೂಲಕ ಇದು ಸಾಧನೆಯಾಗಲಿದೆ.
ಆತ್ಮನಿರ್ಭರತೆ: ರಕ್ಷಣಾ ಪಡೆಗಳು ಬಳಸುವ ವಿವಿಧ ರೀತಿಯ ಪರಿಕರಗಳನ್ನು ದೇಶದಿಂದಲೇ ಪಡೆಯಲು ಹಾಗೂ ಆಮದನ್ನು ಕಡಿಮೆ ಮಾಡಲು ಶೇ.೬೮ ರಷ್ಟು ಬಂಡವಾಳ ಸಂಗ್ರಹಣೆಯನ್ನು ದೇಶಿಯ ಉದ್ಯಮಕ್ಕೆ ಮೀಸಲಿಡಲಾಗುವುದು. ಖಾಸಗಿ ಉದ್ದಿಮೆಗಳಿಗೆ ರಕ್ಷಣಾ ಪರಿಕರಗಳ ನಿರ್ಮಾಣಕ್ಕೆ ಉತ್ತೇಜಿಸಲಾಗುವುದು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಜಿಯೋಸ್ಪೇಷಿಯಲ್ ಸಿಸ್ಟಮ್ಸ್ ಮತ್ತು ಡ್ರೋನ್ಸ್, ಸೆಮಿಕಂಡಕ್ಟರ್, ಜೀನೋಮಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್, ಗ್ರೀನ್ ಎನರ್ಜಿ ಮತ್ತು ಕ್ಲೀನ್ ಮೊಬಿಲಿಟಿ ಸಿಸ್ಟಮ್ಸ್ ಅಪಾರವಾಗಿವೆ. ಈ ಕ್ಷೇತ್ರಗಳಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪ್ರೋತ್ಸಾಹ ದೊರೆಯಲಿದೆ. ಈ ಮೂಲಕ ದೇಶದ ಸ್ಪರ್ಧಾತ್ಮಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಡಿಜಿಟಲ್ ಕರೆನ್ಸಿ: ಡಿಜಿಟಲ್ ಆರ್ಥಿಕತೆ ಪ್ರೋತ್ಸಾಹಿಸಲು ಆರ್.ಬಿ.ಐ ಮೂಲಕ ಡಿಜಿಟಲ್ ಕರೆನ್ಸಿ ಸೌಲಭ್ಯಕ್ಕೆ ಚಾಲನೆ ದೊರಕಲಿದೆ. ಬ್ಲಾಕ್ಚೈನ್ ಹಾಗೂ ಇತರ ಆಧುನಿಕ ತಂತ್ರಜ್ಞಾನಗಳ ಮೂಲಕ ಈ ಗುರಿ ಸಾಧಿಸಲಾಗುವುದು.
ರಾಜ್ಯಗಳಿಗೆ ಬಡ್ಡಿ ರಹಿತ ಸಾಲ:
ದೇಶದ ರಾಜ್ಯಗಳಿಗೆ ೧ ಲಕ್ಷ ಕೋಟಿಯಷ್ಟು ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಾಗುವುದು. ಈ ಹಣದ ಮೂಲಕ ಪಿ.ಎಮ್ ಗತಿಶಕ್ತಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಗಳು ಬಳಸಲು ಸಹಕಾರಿಯಾಗಲಿದೆ.
ತೆರಿಗೆ: ತೆರಿಗೆ ಸಂಬAಧ ತಪ್ಪುಗಳಿದ್ದಲ್ಲಿ ಸರಿಪಡಿಸಲು ೨ ವರ್ಷಗಳ ಕಾಲಮಿತಿ ನೀಡಲಾಗಿದೆ. ತೆರಿಗೆದಾರರು ಪ್ರಾಮಾಣಿಕವಾಗಿ ಈ ಕಾರ್ಯ ನಡೆಸಬೇಕಾಗಿದೆ.
ಸಹಕಾರ ಸಂಘಗಳಿಗೆ ಇದ್ದ ೧೮.೫ ಶೇ ತೆರಿಗೆಯನ್ನು ೧೫ ಶೇ. ಕ್ಕೆ ಇಳಿಸಲಾಗಿದೆ.
ರಾಜ್ಯ ಸರಕಾರದ ನೌಕರರು ತಮ್ಮ ಆದಾಯದ ಶೇ.೧೦ ರಷ್ಟು ಪಟ್ಟು ಪಿಂಚಣಿಗೆ ನೀಡುತ್ತಿದ್ದು ಇದನ್ನು ಶೇ.೧೪ ಕ್ಕೆ ಏರಿಕೆ ಮಾಡಲಾಗಿದೆ. ಕೇಂದ್ರ ಸರಕಾರದ ನೌಕರರು ಈಗಾಗಲೇ ಶೇ.೧೪ ರಷ್ಟು ಆದಾಯವನ್ನು ಪಿಂಚಣಿಗೆ ನೀಡುತ್ತಿದ್ದು ಸಮಾನತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
ಸ್ಟಾರ್ಟ್ಅಪ್ಗಳಿಗೆ ಉತ್ತೇಜನ
೩೧-೩-೨೦೨೨ ಮುಂಚಿತವಾಗಿ ನಿರ್ಮಾಣಗೊಂಡ ಸ್ಟಾರ್ಟ್ಅಪ್ಗಳಿಗೆ ೩ ವರ್ಷಗಳ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಇದನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಡಿಜಿಟಲ್ ಆಸ್ತಿಗಳಿಗೆ ಶೇ.೩೦ ತೆರಿಗೆ: ಡಿಜಿಟಲ್ ಆಸ್ತಿ - ಕ್ರಿಪ್ಟೋ ಕರೆನ್ಸಿ ವರ್ಗಾವಣೆಗೆ ಶೇ.೩೦ ರಷ್ಟು ತೆರಿಗೆ ವಿಧಿಸಲಾಗಿದೆ.
ದಾವೆ ಹೂಡುವುದಕ್ಕೆ ನಿಯಂತ್ರಣ
ಯಾವುದಾದರು ವಿಷಯಕ್ಕೆ ಸಂಬAಧ ನ್ಯಾಯಾಲಯದಲ್ಲಿ ದಾವೆ ಹೂಡುವಾಗ, ಇದೇ ವಿಷಯದ ಕುರಿತು ಈಗಾಗಲೇ ಇತರರು ದಾವೆ ಹೂಡಿದ್ದಲ್ಲಿ, ಪ್ರಕರಣ ವಿಚಾರಣೆ ಹಂತದಲ್ಲಿದ್ದಲ್ಲಿ, ಹೊಸ ದಾವೆ ಹೂಡುವ ಪ್ರಕ್ರಿಯೆಯನ್ನು ಮುಂದೂಡಲಾಗುವುದು. ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇದು ಅನ್ವಯವಾಗಲಿದೆ.ಜನಪ್ರತಿನಿಧಿಗಳು ಏನೆಂದರು..
ಅಭಿವೃದ್ಧಿಯ ಸಂಕೇತ
ರೂ. ೩೯.೪೫ ಲಕ್ಷ ಕೋಟಿಯ ಬೃಹತ್ ಬಜೆಟ್ ಇದಾಗಿದ್ದು, ಅಭಿವೃದ್ಧಿಯ ಸಂಕೇತವಾಗಿದೆ. ಇದು ದೇಶದ ಅಭಿವೃದ್ಧಿಯ ಬಜೆಟ್. ಬಡವರ, ಕೃಷಿಕರ, ಸಹಕಾರ ರಂಗದ ಪರವಾಗಿ ಇದ್ದು ಸ್ವಾಗತಾರ್ಹವಾಗಿದೆ. ಜಿಎಸ್ಟಿ ಮೂಲಕವೇ ಹಲವಷ್ಟು ಆದಾಯ ಕ್ರೋಢೀಕೃತವಾಗಲಿರುವ ಸಂದೇಶ ದೊರೆತಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಹಲವು ಯೋಜನೆಗಳ ಜಾರಿ, ಪ್ರತಿರಾಜ್ಯಕ್ಕೆ ರೂ. ೧ ಲಕ್ಷ ಕೋಟಿ ನೀಡುವುದು, ಮರುಪಾವತಿಗೆ ಬಡ್ಡಿ ರಹಿತವಾಗಿ ೫೦ ವರ್ಷಗಳ ಅವಕಾಶ, ಒನ್ನೇಷನ್, ಒನ್ ಟ್ಯಾಕ್ಸ್, ಡಿಜಿಟಲ್ ಆಸ್ತಿ ನೋಂದಣಿಯAತಹ ಪ್ರಸ್ತಾಪಗಳು ಅತ್ಯುತ್ತಮವಾದದ್ದು ಒಟ್ಟಾರೆಯಾಗಿ ಬಜೆಟ್ ಸ್ವಾಗತಾರ್ಹವಾಗಿದೆ.
-ಅಪ್ಪಚ್ಚು ರಂಜನ್, ಮಡಿಕೇರಿ ಶಾಸಕರು
ದೂರದೃಷ್ಟಿಯುಳ್ಳ ಬಜೆಟ್
ಅರ್ಥ ಸಚಿವರು ಮಂಡಿಸಿರುವ ಬಜೆಟ್ ಅನ್ನು ಸಮಗ್ರವಾಗಿ ಅಧ್ಯಯನ ಮಾಡಿದಲ್ಲಿ ಇದೊಂದು ದೂರದೃಷ್ಟಿಯುಳ್ಳ ಉತ್ತಮ ಬಜೆಟ್ ಆಗಿದೆ. ದೇಶದ ಸಮಗ್ರ ಅಭಿವೃದ್ಧಿ ಎಲ್ಲಾ ವರ್ಗದ ಜನರನ್ನು ಸೇರಿದಂತೆ ದೇಶದ ಭದ್ರತೆಯನ್ನೂ ಗಮನದಲ್ಲಿಟ್ಟುಕೊಂಡು ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಬಜೆಟ್ ನೀಡಿದ್ದಾರೆ. ಇದು ಸ್ವಾಗತಾರ್ಹ.
-ಕೆ.ಜಿ. ಬೋಪಯ್ಯ, ವೀರಾಜಪೇಟೆ ಶಾಸಕರು
ಸಂಕಷ್ಟದ ಸಮಯದಲ್ಲೂ ಉತ್ತಮ ಬಜೆಟ್
ಇಡೀ ದೇಶ ಪ್ರಸ್ತುತ ಕೊರೊನಾ ಪರಿಸ್ಥಿತಿಯಿಂದಾಗಿ ತೀರಾ ಸಮಸ್ಯೆ ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲೂ ಕೇಂದ್ರ ಸರಕಾರ ದೇಶದ ಪ್ರಗತಿಯ ಚಿಂತನೆಯೊAದಿಗೆ ದೂರದೃಷ್ಟಿತ್ವದ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹವಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಮತ್ತೆ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದಂತೆ ಹಾಗೂ ದೇಶದ ಸುಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡನೆ ಮಾಡಿರುವುದನ್ನು ಸ್ವಾಗತಿಸಬೇಕು.
-ಎಂ.ಪಿ. ಸುಜಾಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರು
ಇದು ಕೈಗೆಟುಕದ ನಕ್ಷತ್ರ
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕೈಗೆಟುಕದ ನಕ್ಷತ್ರದಂತಿದೆ. ಜನಸಾಮಾನ್ಯರು ಹೊಂದಿದ್ದ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಇಳಿಸಬಹುದು ಎಂದು ಕಾದಿದ್ದ ಸಾಮಾನ್ಯ ಜನತೆಗೆ ನಿರಾಶೆಯಾಗಿದೆ. ರೈತರ ಬಗ್ಗೆಯೂ ಗಮನ ಹರಿಸಿದಂತಿಲ್ಲ. ಗೊಬ್ಬರದ ಬೆಲೆ ಹೆಚ್ಚಳದಿಂದಾಗಿ ರೈತರ ಸಂಕಷ್ಟ ಹೆಚ್ಚಾಗಿದೆ. ಕೇಂದ್ರ ಸರಕಾರ ಬಜೆಟ್ ಮಂಡಿಸಿದೆಯೇ ಹೊರತು ಇದು ಯಾವುದೇ ರೀತಿಯಲ್ಲಿ ಜನಸಾಮಾನ್ಯರಿಗೆ ರೈತರಿಗೆ ಪ್ರಯೋಜನವಾಗುವುದಿಲ್ಲ.
-ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಸದಸ್ಯರು